ತಲಾ 5 ಲಕ್ಷ ಇನಾಮಿನ ನಕ್ಸಲ್ ದಂಪತಿ ಛತ್ತೀಸ್‌ಗಢ ಪೊಲೀಸರಿಗೆ ಶರಣು
Team Udayavani, Aug 3, 2018, 11:23 AM IST
ರಾಯಪುರ : ತನ್ನ ತಲೆಗೆ 5 ಲಕ್ಷ ರೂ. ಇನಾಮು ಹೊಂದಿದ್ದ ಉನ್ನತ ನಕ್ಸಲ್ ಕಮಾಂಡರ್ ರವಿ, ತನ್ನ ಪತ್ನಿ ಬುಧ್ರಿ ಯೊಂದಿಗೆ ರಾಯಪುರದಲ್ಲಿ ಛತ್ತೀಸ್‌ಗಢ ಪೊಲೀಸರಿಗೆ ಶರಣಾಗಿದ್ದಾನೆ. ಕಟ್ಟರ್ ನಕ್ಸಲ್ ಮುಖಂಡನಾಗಿರುವ ರವಿಯ ಪತ್ನಿ ಬುಧ್ರಿ ಕೂಡ ತನ್ನ ತಲೆಗೆ 5 ಲಕ್ಷ ರೂ. ಇನಾಮು ಹೊಂದಿದ್ದಳು.
ಈ ನಕ್ಸಲ್ ದಂಪತಿ 2012ರಲ್ಲಿ ಸುಕ್‌ಮಾ ಕಲೆಕ್ಟರ್ ಅಲೆಕ್ಸ್ ಪೌಲ್ ಮೆನನ್ ಅವರ ಅಪಹರಣ ಸೇರಿದಂತೆ ಹಲವಾರು ದರೋಡೆ, ಲೂಟಿ ಮತ್ತು ಬಾಂಬ್ ಬ್ಲಾಸ್ಟ್ ಪ್ರಕರಣದಲ್ಲಿ ಭಾಗಿಯಾಗಿತ್ತು.
ಸರಕಾರ ದೀನ, ದಲಿತ, ಅಸಹಾಯಕ ಮತ್ತು ಬಡವರ್ಗದ ಜನರನ್ನು ದಮನಿಸುತ್ತಿರುವುದರಿಂದ ಅದರ ವಿರುದ್ಧ ಸಶಸ್ತ್ರ ಹೋರಾಟ ಮಾಡಿ ಜನಸೇವೆ ಕೈಗೊಳ್ಳುಂತೆ ತನ್ನನ್ನು ಬ್ರೇನ್ ವಾಶ್ ಮಾಡಿ ನಕ್ಸಲ್ ಪಡೆಗೆ ಸೇರಿಸಿಕೊಳ್ಳಲಾಗಿತ್ತು ಎಂದು ಪೊಲೀಸರಿಗೆ ಶರಣಾಗಿರುವ ರವಿ ಹೇಳಿದ್ದಾನೆ.
ಕಾಕತಾಳೀಯವೆಂಬಂತೆ ನಿನ್ನೆ ಗುರುವಾರವಷ್ಟೇ ಛತ್ತೀಸ್‌ಗಢ ಮುಖ್ಯಮಂತ್ರಿ ರಮಣ್ ಸಿಂಗ್ ಅವರು “ನಕ್ಸಲರು ಗೌರವದಿಂದ ಶರಣಾಗಬೇಕು; ಇಲ್ಲದಿದ್ದರೆ ಭದ್ರತಾ ಪಡೆಗಳು ಅವರನ್ನು ಮುಗಿಸಿಬಿಡಲಿದೆ’ ಎಂದು ಹೇಳಿದ್ದರು. ಮನಾ ಕ್ಯಾಂಪ್ ಏರಿಯದಲ್ಲಿನ ಪೊಲೀಸ್ ತರಬೇತಿ ಶಾಲೆಯಲ್ಲಿ ತರಬೇತಿ ಪಡೆದು ಹೊರಬರುವ ಕಾನ್‌ಸ್ಟೆàಬಲ್‌ಗಳನ್ನು ಉದ್ದೇಶಿಸಿ ಮುಖ್ಯಮಂತ್ರಿ ಮಾತನಾಡುತ್ತಿದ್ದ ಸಂದರ್ಭದಲ್ಲಿ ಈ ಮಾತುಗಳನ್ನು ಹೇಳಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Full Meal: ಮಹಾಕುಂಭ ಮೇಳಕ್ಕೆ ಬರುವವರಿಗೆ ಸಿಗುತ್ತೆ 9 ರೂ.ಗೆ ಭರ್ಜರಿ ಭೋಜನ!
Podcast;ನಾನು ದೇವರಲ್ಲ,ತಪ್ಪು ಮಾಡಿದ್ದೇನೆ: ಪ್ರಧಾನಿ ಹೇಳಿಕೆ ಡ್ಯಾಮೇಜ್ ಕಂಟ್ರೋಲ್ ಎಂದ ಕೈ
Mega Concert: Black ಮಾರ್ಕೆಟ್ ಟಿಕೆಟ್ ಮಾರಾಟ ತಡೆಗೆ ಮಾರ್ಗಸೂಚಿ ಬೇಕು: ಪಿಐಎಲ್ ವಜಾ
Maharashtra ವಿಧಾನಸಭೆಯಲ್ಲಿ ಬಿಜೆಪಿ ಗೆಲುವಿಗೆ ಆರ್‌ಎಸ್‌ಎಸ್ ಕಾರಣ: ಶರದ್ ಪವಾರ್
Henley Passport Index: ಸಿಂಗಾಪುರಕ್ಕೆ ಮೊದಲ ಸ್ಥಾನ: ಭಾರತದ ಪಾಸ್‌ಪೋರ್ಟ್ ಎಷ್ಟು ಸದೃಢ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.