ಜಮಾತ್‌ಗೆ 16 ಸಾವಿರ ಮಂದಿ ಭೇಟಿ ; ಪೊಲೀಸ್, ಆರೋಗ್ಯ ಅಧಿಕಾರಿಗಳ ತಪಾಸಣೆಯಿಂದ ದೃಢ
ದೆಹಲಿ, ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಕೆ ; 1 ಸಾವಿರ ಮಂದಿ ಹೊರಗಿನ ರಾಜ್ಯದವರು ಭಾಗವಹಿಸಿದ್ದ ಅಂಶ ಖಚಿತ
Team Udayavani, May 4, 2020, 5:51 PM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಲಕ್ನೋ/ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯ ನಿಜಾಮುದ್ದೀನ್‌ನಲ್ಲಿರುವ ತಬ್ಲಿಘಿ ಜಮಾತ್‌ನ ಪ್ರಧಾನ ಕಚೇರಿಗೆ ಮಾ.13ರಿಂದ 24ರ ಅವಧಿಯಲ್ಲಿ 16,500 ಮಂದಿ ಭೇಟಿ ನೀಡಿದ್ದರು.
ಈ ಬಗ್ಗೆ ದೆಹಲಿ ಪೊಲೀಸರ ವರದಿ ದೃಢಪಡಿಸಿದೆ ಎಂದು ‘ದ ಹಿಂದು ಸ್ತಾನ್ ಟೈಮ್ಸ್’ ವರದಿ ಮಾಡಿದೆ. ಪೊಲೀಸ್ ಅಧಿಕಾರಿಯೊಬ್ಬರು ಪತ್ರಿಕೆಗೆ ನೀಡಿದ ಮಾಹಿತಿ ಪ್ರಕಾರ ಮೊಬೈಲ್ ಫೋನ್ ಮಾಹಿತಿ ಮತ್ತು ಸಂದರ್ಶನ ಮೂಲಕ ಮಾಹಿತಿ ಸಂಗ್ರಹಿಸಲಾಗಿದೆ.
ಇದರ ಜತೆಗೆ ದೆಹಲಿ ಸರಕಾರದ ಅಧಿಕಾರಿ ನೀಡಿದ ಮಾಹಿತಿ ಪ್ರಕಾರ ಕನಿಷ್ಠ ಒಂದು ಸಾವಿರ ಮಂದಿ ಹೊರಗಿನ ರಾಜ್ಯದವರು ತಬ್ಲಿಘಿ ಜಮಾತ್‌ನ ಪ್ರಧಾನ ಕಚೇರಿಗೆ ಭೇಟಿ ನೀಡಿದ್ದರು.
16, 500 ಮಂದಿಯ ಪೈಕಿ ಕೆಲವರು ಆರು ಅಂತಸ್ತಿನ ಜಮಾತ್‌ನ ಪ್ರಧಾನ ಕಚೇರಿಯಲ್ಲಿ ವಾಸ್ತವ್ಯ ಹೂಡಿದ್ದರೆ, ಇತರರು ನವದೆಹಲಿಯ ಬೇರೆ ಬೇರೆ ಪ್ರದೇಶಗಳಲ್ಲಿದ್ದರು.
ದೆಹಲಿ ಸಂಚಾರ ಪೊಲೀಸ್ ವಿಭಾಗ ಸೇರಿದಂತೆ ರಾಷ್ಟ್ರ ರಾಜಧಾನಿಯ ಪೊಲೀಸ್ ವಿಭಾಗ, ಆರೋಗ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬಂದಿ ಈ ಕಾರ್ಯದಲ್ಲಿ ಭಾಗವಹಿಸಿದ್ದರು. ಈ ವರದಿಯನ್ನು ಸರಕಾರಕ್ಕೆ ಈಗಾಗಲೇ ಸಲ್ಲಿಸಲಾಗಿದೆ.
ಕೆಲವರಿಗೆ ಸ್ವಯಂ ಪ್ರೇರಣೆಯಿಂದ ಪ್ರತ್ಯೇಕವಾಗಿರಲು, ಮತ್ತಿರರಿಗೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯಲು ಈ ಸಂದರ್ಭದಲ್ಲಿ ಸೂಚಿಸಲಾಗಿತ್ತು. ಮಾ.29, ಮಾ.31ರಂದು ಆರೋಗ್ಯ ಇಲಾಖೆ 2,300 ಮಂದಿಯನ್ನು ಅಲ್ಲಿಂದ ತೆರವುಗೊಳಿಸಿತ್ತು. ಎಪ್ರಿಲ್ ಮೊದಲ ವಾರದಲ್ಲಿ ನವದೆಹಲಿಯ ವಿವಿಧ ಭಾಗಗಳಲ್ಲಿ 200 ಮಂದಿ ಇದ್ದದ್ದು ಪತ್ತೆಯಾಗಿತ್ತು. ನವದೆಹಲಿಯಲ್ಲಿ ಆ ಕೇಂದ್ರವೇ ಹಾಟ್‌ಸ್ಪಾಟ್ ಆಗಿ ಪರಿವರ್ತಿತವಾಗಿದೆ.
ಸೋಂಕು ಹರಡುವುದರಲ್ಲಿ ತಬ್ಲೀಘಿ ಜಮಾತ್ ಸದಸ್ಯರ ಪಾತ್ರ ದೊಡ್ಡದು. ಅವರ ಕೃತ್ಯ ಕ್ಷಮೆಗೆ ಅರ್ಹವಲ್ಲ. ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ.
– ಯೋಗಿ ಆದಿತ್ಯನಾಥ್, ಉ.ಪ್ರ.ಮುಖ್ಯಮಂತ್ರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra Election: ಅಮಿತ್ ಶಾ ಅವರ ಬ್ಯಾಗ್ ಪರೀಕ್ಷಿಸಿದ ಚುನಾವಣಾ ಅಧಿಕಾರಿಗಳು
Anmol Buffalo:1500 ಕೆಜಿ ತೂಗುವ ಈ ಕೋಣದ ಬೆಲೆ ಬರೋಬ್ಬರಿ 23 ಕೋಟಿ ರೂ!
Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್ ಗೆ 10 ಕೋಟಿ ರೂಪಾಯಿ ಪಂಗನಾಮ!
Mumbai: ಲಾರೆನ್ಸ್ ಬಿಷ್ಣೋಯ್ ಹಿಟ್ ಲಿಸ್ಟ್‌ನಲ್ಲಿ ಶ್ರದ್ಧಾ ವಾಕರ್ ಹತ್ಯೆ ಆರೋಪಿ: ವರದಿ
Pollution: ದಿಲ್ಲಿಯಲ್ಲಿ ಈಗ ನಿರ್ಮಾಣಕ್ಕೆ ಬ್ರೇಕ್, ಬಸ್‌ಗಳಿಗೆ ನಿರ್ಬಂಧ
MUST WATCH
ಹೊಸ ಸೇರ್ಪಡೆ
Organ Donation: ಸಾವಿನ ನಂತರವೂ ನೆರವಾದ ಜೀವ
Anandapura: ಸಾಲದ ಬಾಧೆ ತಾಳಲಾರದೆ ರೈತ ಆತ್ಮಹ*ತ್ಯೆ
Maharashtra Election: ಅಮಿತ್ ಶಾ ಅವರ ಬ್ಯಾಗ್ ಪರೀಕ್ಷಿಸಿದ ಚುನಾವಣಾ ಅಧಿಕಾರಿಗಳು
Bengaluru: ವೈದ್ಯೆಗೆ ಲೈಂಗಿಕ ಕಿರುಕುಳ: ಪಿಎಸ್‌ಐ ವಿರುದ್ದ ಪೊಲೀಸ್ ಆಯುಕ್ತರಿಗೆ ದೂರು
Bengaluru: ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯ ಜೀವ ಉಳಿಸಿದ ಸಂಚಾರ ಪೊಲೀಸರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.