ಇದ್ಯಾವ ನಗರ?: ಮದ್ರಾಸ್‌ನಲ್ಲಿ ಗ್ರಹಣ ಗೋಚರ!
Team Udayavani, Aug 22, 2017, 8:15 AM IST
ಹೊಸದಿಲ್ಲಿ: ಸೋಮವಾರದ ಸೂರ್ಯ ಗ್ರಹಣದ ಹಿನ್ನೆಲೆಯಲ್ಲಿ ಮದ್ರಾಸ್ ಇಡೀ ಜಗತ್ತಿನ ಗಮನ ಸೆಳೆದಿತ್ತು. ವಿಶ್ವದ ಶ್ರೇಷ್ಠ ಖಗೋಳಶಾಸ್ತ್ರಜ್ಞರು, ಶಿಕ್ಷಣ ಪಂಡಿತರು ಅಲ್ಲಿ ನೆರೆದಿದ್ದರು. ದೊಡ್ಡ ದುರ್ಬೀನುಗಳನ್ನು ಇರಿಸಿ ಗ್ರಹಣ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು. ಇನ್ನು ನೂರಾರು ಛಾಯಾಗ್ರಾಹಕರು ದುರ್ಬೀನಿನಷ್ಟೇ ಉದ್ದದ ಲೆನ್ಸ್‌ಗಳನ್ನು ಅಳವಡಿಸಿದ ಕೆಮೆರಾಗಳನ್ನು ಕಣ್ಣಿಗೊತ್ತಿಕೊಂಡು ಕುಳಿತಿದ್ದರು…
ಮದ್ರಾಸ್‌ನಲ್ಲಿ ಮಾತ್ರ ಸೂರ್ಯಗ್ರಹಣ ಅದ್ಭುತವಾಗಿ ಕಾಣುತ್ತದೆ ಎಂದರಿತ ಅಮೆರಿಕದ ‘ಸೈನ್ಸ್’ ಚಾನೆಲ್, ಗ್ರಹಣದ ದೃಶ್ಯಗಳನ್ನು ನೇರಪ್ರಸಾರ ಮಾಡಲು ತನ್ನ ದೊಡ್ಡ ತಂಡವನ್ನೇ ಮದ್ರಾಸ್‌ಗೆ ಕಳಿಸಿತ್ತು. ಲೈವ್ ಕಾರ್ಯಕ್ರಮದ ವೀಕ್ಷಕ ವಿವರಣೆ ನೀಡಲು ಖಗೋಳಶಾಸ್ತ್ರಜ್ಞರು, ಶಿಕ್ಷಣ ತಜ್ಞರನ್ನೂ ವಾಹಿನಿ ಕರೆಸಿಕೊಂಡಿತ್ತು. ಹೀಗೆ ಅಮೆರಿಕದ ಮದ್ರಾಸ್ ನಗರ ಇಡೀ ಜಗತ್ತಿನ ಗಮನವನ್ನ ತನ್ನತ್ತ ಸೆಳೆದಿತ್ತು!
ಅನುಮಾನ ಬೇಡ. ನೀವು ಸರಿಯಾಗೇ ಓದಿದ್ದೀರ. ಮದ್ರಾಸ್ ಅಂದರೆ ನಮ್ಮ ತಮಿಳುನಾಡಿನ ಮದ್ರಾಸ್ (ಚೆನ್ನೈ) ಅಲ್ಲ. ಅಮೆರಿಕದ ಒರೆಗಾನ್ ರಾಜ್ಯದ ನಗರ ಮದ್ರಾಸ್ (ಅಲ್ಲಿ ಮ್ಯಾಡ್ರೆಸ್). ಸೂರ್ಯಗ್ರಹಣ ವೀಕ್ಷಿಸಲು ಮದ್ರಾಸ್ ಸೂಕ್ತ ಸ್ಥಳ ಎಂದು ಗುರುತಿಸಿದ್ದರಿಂದ ಅಲ್ಲಿನ ಮುನ್ಸಿಪಲ್ ಏರ್‌ಪೋರ್ಟ್ ಸಮೀಪ ಸಾವಿರಾರು ಮಂದಿ ಸೇರಿದ್ದರು. ಈ ವೇಳೆ ವೀಕ್ಷಣೆಗೆ ಬಂದಿದ್ದ ಜನರ ಗುಂಪಿನ ಬಳಿಯೇ ಸಣ್ಣ ವಿಮಾನವೊಂದು ಪತನಗೊಂಡಿದೆ. ಆದರೆ ಯಾವುದೇ ಹಾನಿ ಸಂಭವಿಸಿಲ್ಲ. ಎಲ್ಲರೂ ಸುರಕ್ಷಿತವಾಗಿ ಗ್ರಹಣ ವೀಕ್ಷಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kailash Gahlot: ಚುನಾವಣೆಗೂ ಮೊದಲೇ ಆಪ್ ತೊರೆದ ಸಚಿವ ಕೈಲಾಶ್ ಗೆಹ್ಲೋಟ್…
Patna: ಆಸ್ಪತ್ರೆಯಲ್ಲಿ ಮೃತಪಟ್ಟ ರೋಗಿಯ ಕಣ್ಣೇ ಮಾಯಾ… ಇಲಿ ತಿಂದಿದೆ ಎಂದ ವೈದ್ಯರು
Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು
Kerala govt: ಶಬರಿಮಲೆ ವರ್ಚುವಲ್ ಕ್ಯೂ ಬುಕ್ಕಿಂಗ್ ಮಿತಿ ಹೆಚ್ಚಳ
Uttar Pradesh: ಝಾನ್ಸಿ ಅಗ್ನಿ ಅವಘಡ: ಗುರುತೇ ಸಿಗದಂತೆ ಕರಕಲಾದ ಹಸುಳೆಗಳು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.