Tourism Development: ಲಕ್ಷದ್ವೀಪ ಅಭಿವೃದ್ಧಿಗೆ 8 ಬೃಹತ್ ಯೋಜನೆ: ಕೇಂದ್ರ ಸರಕಾರ ಚಿಂತನೆ
ಮಾಲ್ದೀವ್ಸ್ಗೆ ಸವಾಲೊಡ್ಡಲು ಭಾರತ ಸಜ್ಜು, ದ್ವೀಪಕ್ಕೆ ಸಂಪರ್ಕ ಸುಗಮ ಮಾಡಲು ಈ ಯೋಜನೆ
Team Udayavani, Dec 6, 2024, 6:55 AM IST
ಹೊಸದಿಲ್ಲಿ: ಲಕ್ಷದ್ವೀಪದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಕೇಂದ್ರ ಸರಕಾರವು 8 ಬೃಹತ್ ಯೋಜನೆಗಳನ್ನು ಘೋಷಿಸಲು ಸಿದ್ಧತೆ ನಡೆಸಿದೆ. ಈ ಬಗ್ಗೆ ಮಾಧ್ಯಮವೊಂದು ವರದಿ ಮಾಡಿದೆ.
ಮಾಲ್ದೀವ್ಸ್ ಸರಕಾರದಲ್ಲಿದ್ದ ಸಚಿವರು ಕಳೆದ ಬಾರಿ ಪ್ರಧಾನಿ ಮೋದಿಯ ಲಕ್ಷ ದ್ವೀಪ ಪ್ರವಾಸದ ವಿರುದ್ಧ ಟೀಕೆ ಮಾಡಿ ದ್ದಕ್ಕೆ ಸವಾಲಾಗಿ ಕೇಂದ್ರ ಸರಕಾರ ಅಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿ ಕೊಂಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಕಲ್ಪೇನಿ ದ್ವೀಪದಲ್ಲಿ ವಿಲಾಸಿ ಹಡಗುಗಳನ್ನು ನಿರ್ವಹಿಸಬಲ್ಲ ಓಪನ್ ಜೆಟ್ಟಿ ಅಭಿವೃದ್ಧಿಗೆ 303 ಕೋಟಿ ರೂ. ವೆಚ್ಚ ಮಾಡಲು ತೀರ್ಮಾನಿಸಲಾಗಿದೆ. ಕರವಟ್ಟಿ, ಅಗಟ್ಟಿ ಹಾಗೂ ಮಿನಿಕಾಯ್ ದ್ವೀಪಗಳಿಗೆ ಬೃಹತ್ ಹಡಗುಗಳು ಬರುವಂತೆ ಮಾಡಲು ಪೂರ್ವ ಹಾಗೂ ಪಶ್ಚಿಮ ಭಾಗಗಳಲ್ಲಿ ಜೆಟ್ಟಿಗಳ ಸಾಮರ್ಥ್ಯ ಹೆಚ್ಚಿಸುವ ಬಗ್ಗೆಯೂ ಚಿಂತನೆ ನಡೆದಿದೆ.
ಕಲ್ಪೇನಿ, ಆಂಡ್ರೋತ್, ಕಡ್ಮತ್ ದ್ವೀಪದ ಭೂಭಾಗಗಳಲ್ಲಿ ಪ್ರವಾಸಿಗರಿಗೆ ಆಧುನಿಕ ಸೌಲಭ್ಯ ಕೇಂದ್ರ ಸ್ಥಾಪನೆ, ಆಂಡ್ರೋತ್ ಬ್ರೇಕ್ವಾಟರ್ನ ನವೀಕರಣ ಹಾಗೂ ವಿಸ್ತರಣೆಗೆ ತೀರ್ಮಾನಿಸಲಾಗಿದೆ. ನೌಕಾಪಡೆಗಾಗಿ ವಿಶೇಷ ಹಡಗುಕಟ್ಟೆ ಸೇರಿ ಒಟ್ಟು 8 ಯೋಜನೆಗಳನ್ನು ಸಾಗರ್ಮಾಲಾ ಯೋಜನೆಯಡಿ ಪ್ರಕಟಿಸಿ, ಅನುಷ್ಠಾನಗೊಳಿಸುವ ಸಾಧ್ಯತೆಗಳಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Google Map: ಗೂಗಲ್ ಮ್ಯಾಪ್ ನಂಬಿ ಗಡಿ ದಾಟಿದ ಪೊಲೀಸರನ್ನೇ ಹಿಡಿದು ಹಾಕಿದ ಗ್ರಾಮಸ್ಥರು
Wrong Spelling: ಅಪಹರಣದ ಪತ್ರದಲ್ಲಿ ಅಕ್ಷರ ತಪ್ಪು ಬರೆದು ಸಿಕ್ಕಿಬಿದ್ದ ಭೂಪ!
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Successful: ರಾಜ್ಯದ 4,873 ಗ್ರಾಮಗಳು ಬಯಲು ಶೌಚ ಮುಕ್ತ: ಕೇಂದ್ರದ ಮೆಚ್ಚುಗೆ
Assam Coal Mine Tragedy: ಅಸ್ಸಾಂ ಗಣಿ ದುರಂತ… ಒಬ್ಬನ ಮೃತ ದೇಹ ಪತ್ತೆ
MUST WATCH
ಹೊಸ ಸೇರ್ಪಡೆ
Toxic Movie: ಕೇವಲ 13ಗಂಟೆಯಲ್ಲೇ ʼಪುಷ್ಪ-2ʼ ದಾಖಲೆ ಉಡೀಸ್ ಮಾಡಿದ ಯಶ್ ʼಟಾಕ್ಸಿಕ್ʼ
Dharwad: ದಲಿತಪರ ಸಂಘಟನೆ ಕರೆ ನೀಡಿದ ಬಂದ್ ಗೆ ಮಿಶ್ರ ಪ್ರತಿಕ್ರಿಯೆ
Bidar: ಬಂದ್ಗೆ ಉತ್ತಮ ಪ್ರತಿಕ್ರಿಯೆ… ಸಾರಿಗೆ ಸಂಚಾರ ಸ್ಥಗಿತ, ಅಂಗಡಿ ಮುಂಗಟ್ಟು ಬಂದ್
Teertharoopa Tandeyavarige: ತೀರ್ಥರೂಪರ ಜೊತೆ ರಚನಾ
Ramanagara: ಬಸ್ -ಬೈಕ್ ಅಪಘಾತ; ಇಬ್ಬರು ಮಕ್ಕಳು ಮೂವರು ಸ್ಥಳದಲ್ಲೇ ಮೃತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.