ದೆಹಲಿಯಲ್ಲಿ ಗಾಳಿ ಮಾತ್ರವಲ್ಲ ನೀರೂ ಮಲಿನ : ಯಮುನೆಯಲ್ಲಿ ವಿಷಕಾರಿ ನೊರೆ
Team Udayavani, Nov 7, 2021, 4:30 PM IST
ನವ ದೆಹಲಿ:ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಗಾಳಿ ಮಾತ್ರವಲ್ಲದೇ ನೀರೂ ಅಪಾಯಕಾರಿಯಾಗಿ ಮಲಿನವಾಗುತ್ತಿದ್ದು, ಯಮುನಾ ನದಿಯ ಮೇಲ್ಮೈಯಲ್ಲಿ ವಿಷಕಾರಿ ನೊರೆ ತೇಲುತ್ತಿದೆ.
ಶನಿವಾರ ದೆಹಲಿಯ ಕಾಳಿಂದಿ ಕುಂಜ್ ಪ್ರದೇಶದಲ್ಲಿ ಯಮುನಾ ನದಿಯಲ್ಲಿ ಮಾಲಿನ್ಯಕಾರಕಗಳ ದಪ್ಪ ಪದರದಿಂದ ಆವೃತವಾದ ವಿಷಕಾರಿ ನೊರೆ ಕಂಡು ಬಂದಿದೆ. ನೊರೆ ಕೈಗಾರಿಕಾ ತ್ಯಾಜ್ಯಗಳಿಂದಾಗಿ ಉಂಟಾಗಿದೆ.
ಡಿಟರ್ಜೆಂಟ್‌ಗಳು, ಸಾಬೂನುಗಳು ಸೇರಿದಂತೆ ಕೈಗಾರಿಕಾ ಮಾಲಿನ್ಯಕಾರಕಗಳು ನೊರೆಗೆ ಕಾರಣವಾಗಿದ್ದು, ನೊರೆಯಲ್ಲಿ ಹೆಚ್ಚಿನ ಪ್ರಮಾಣದ ಫಾಸ್ಫೇಟ್ ಅಂಶ ಅಡಕವಾಗಿದೆ ಎಂದು ತಜ್ಞರು ತಿಳಿಸಿದ್ದಾರೆ.
ದುರಂತವೆಂದರೆ ಯಮುನಾ ನದಿಯು ವಿಶ್ವದ ಅತ್ಯಂತ ಕಲುಷಿತ ನದಿಗಳಲ್ಲಿ ಒಂದಾಗಿದೆ, ಕೈಗಾರಿಕಾ ತ್ಯಾಜ್ಯಗಳನ್ನು ಎಸೆಯುವುದು ಮತ್ತು ಹೆಚ್ಚಿನ ಸಾಂದ್ರತೆಯ ಜನಸಂಖ್ಯೆ ಇದಕ್ಕೆ ಕಾರಣವಾಗಿದೆ. ನದಿಯ ಅತಿ ಹೆಚ್ಚು ಕಲುಷಿತ ಪ್ರದೇಶವು ದೆಹಲಿಯ ವಜೀರಾಬಾದ್ ಮತ್ತು ಓಖ್ಲಾ ನಡುವೆ ಇದೆ, ಇದು ನದಿಯ ಉದ್ದದ ಕೇವಲ 2% ನಷ್ಟು, ಒಟ್ಟು ಮಾಲಿನ್ಯದ 76% ಇದೇ ಪ್ರದೇಶದಲ್ಲಿ ಆಗುತ್ತಿದೆ.
#WATCH Toxic foam floats on Yamuna river near Kalindi Kunj in Delhi
The national capital’s overall air quality is in the ‘severe’ category today. pic.twitter.com/janktDxmg9
— ANI (@ANI) November 7, 2021
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Train ಜನಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ
Himachal Pradesh;ನಷ್ಟದಲ್ಲಿರುವ ಹೊಟೇಲ್ ಮುಚ್ಚಲು ಹೈಕೋರ್ಟ್ ಆದೇಶ
Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್ ಘೋಷಣೆ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.