ಸತತ ನಾಲ್ಕು ದಿನಗಳ ಕಾರ್ಯಚರಣೆ: 400 ಅಡಿ ಆಳದ ಕೊಳವೆ ಬಾವಿಯಲ್ಲಿ ಸಿಲುಕ್ಕಿದ್ದ 8 ವರ್ಷದ ಬಾಲಕ ಕೊನೆಗೂ ಬದುಕಿ ಬರಲಿಲ್ಲ..
ನನ್ನ ಮಗನನ್ನು ಉಳಿಸಿಕೊಡಿ...
Team Udayavani, Dec 10, 2022, 8:52 AM IST
ಮಧ್ಯ ಪ್ರದೇಶ: ಗದ್ದೆಯಲ್ಲಿ ಆಡುವಾಗ 400 ಅಡಿ ಅಳದ ಕೊಳವೆ ಬಾವಿಗೆ ಬಿದ್ದಿದ್ದ 8 ವರ್ಷದ ಬಾಲಕ ತನ್ಮಯ್ ಸಾಹು ಕೊನೆಗೂ ಬದುಕಿ ಬರಲಿಲ್ಲ. ಶನಿವಾರ (ಡಿ.10 ರಂದು) ರಕ್ಷಣಾ ಸಿಬ್ಬಂದಿಗಳು ತನ್ಮಯ್ ನನ್ನು ಹೊರ ತೆಗೆದಿದ್ದಾರೆ.
ಡಿ.6 ರಂದು ಮಧ್ಯ ಪ್ರದೇಶದ ಬೆತುಲ್ ಜಿಲ್ಲೆ ಮಾಂಡವಿ ಗ್ರಾಮದಲ್ಲಿ ಗದ್ದೆ ಬದಿ ಆಡುತ್ತಿದ್ದ ತನ್ಮಯ್ ಸಾಹು 400 ಅಡಿ ಆಳ ಕೊಳವೆ ಬಾವಿಗೆ ಬಿದ್ದು, 55 ಅಡಿ ಆಳದಲ್ಲಿ ಸಿಲುಕಿಕೊಂಡಿದ್ದ. ಇದಾದ ಕೆಲವೇ ಗಂಟೆಗಳಲ್ಲಿ ರಕ್ಷಣಾ ಕಾರ್ಯಚರಣೆ ಆರಂಭಿಸಲಾಗಿತ್ತು.
55 ಅಡಿ ಆಳದಲ್ಲಿ ಸಿಲುಕಿಕೊಂಡಿದ್ದ ಬಾಲಕನನ್ನು ಶನಿವಾರ ಹೊರಕ್ಕೆ ತೆಗೆಯಲಾಗಿದೆ. ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯರು ಆದಾಗಲೇ ಮಗು ಉಸಿರು ಚೆಲ್ಲಿದೆ ಎಂದಿದ್ದಾರೆ. ಸತತ 4 ದಿನ ಗಳ ಕಾಲ ಕಾರ್ಯಚರಣೆ ನಡೆಸಿದರೂ ಬಾಲಕ ಬದುಕಿ ಬರಲಿಲ್ಲ.
ಮಗನನ್ನು ಕಳೆದುಕೊಂಡ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ. ನನ್ನ ಮಗನನ್ನು ಉಳಿಸಿಕೊಡಿ ಎಂದು ಆಳುತ್ತಾ ಅಧಿಕಾರಿಯ ಮುಂದೆ ಕೂತ ತಾಯಿಯ ಸ್ಥಿತಿ ಮನಕಲಕುವಂತಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CBI court; ಕಸ್ಟಡಿ ಸಾ*ವು ಪ್ರಕರಣ: ಹಿಮಾಚಲ ಐಜಿ ಸೇರಿ 7 ಮಂದಿ ಪೊಲೀಸರಿಗೆ ಶಿಕ್ಷೆ
Rohingya; ತ್ರಿಪುರಾದಲ್ಲಿ 6 ರೋಹಿಂಗ್ಯಾ ಮಹಿಳೆಯರ ಬಂಧನ
Saif Ali Khan ಪ್ರಕರಣ: ಶಂಕಿತ ಆರೋಪಿ ಛತ್ತೀಸ್‌ಘಡದಲ್ಲಿ ರೈಲ್ವೆ ಪೊಲೀಸರ ಬಲೆಗೆ?
Court Verdict: ಕೋಲ್ಕತ್ತಾ ವೈದ್ಯೆ ಅತ್ಯಾಚಾರ-ಕೊಲೆ ಪ್ರಕರಣ… ಆರೋಪಿ ಸಂಜಯ್ ರಾಯ್ ದೋಷಿ
Suffocation: ಚಳಿಗೆಂದು ಹಾಕಿದ ಬೆಂಕಿ… ಬೆಳಗಾಗುವಷ್ಟರಲ್ಲಿ ದಂಪತಿಯ ಜೀವವೇ ಹೋಗಿತ್ತು…
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.