Odisha: ಡಿಜೆ ಸೌಂಡ್ಗೆ ಹೃದಯಾಘಾತ; ಕುಸಿದು ಬಿದ್ದು ವ್ಯಕ್ತಿ ಮೃತ್ಯು
Team Udayavani, Feb 25, 2024, 11:59 AM IST
ಭುವನೇಶ್ವರ್: ಜೋರಾದ ಡಿಜೆ ಸೌಂಡ್ ಗೆ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ಒಡಿಶಾದ ರೂರ್ಕೆಲಾದಲ್ಲಿ ನಡೆದಿದೆ.
ಮೃತ ವ್ಯಕ್ತಿಯನ್ನು ಪ್ರೇಮನಾಥ್ ಬರಭಯ(50) ಎಂದು ಗುರುತಿಸಲಾಗಿದ್ದು,ಇವರು ಟೀ ಸ್ಟಾಲ್ ಮಾಲೀಕರಾಗಿದ್ದರು.
ಸರಸ್ವತಿ ಮೂರ್ತಿಯ ಮೆರವಣಿಗೆ ವೇಳೆ ಡಿಜೆ ಹಾಡಿನ ಸೌಂಡ್ ನ್ನು ಜೋರಾಗಿ ಇಡಲಾಗಿದೆ. ಇದೇ ಮೆರವಣಿಗೆಯಲ್ಲಿ ಪ್ರೇಮನಾಥ್ ಅವರು ಬರುತ್ತಿದ್ದರು. ಡಿಜೆ ಸೌಂಡ್ ಜೋರಾಗಿ ಹಾಕಿದ್ದರಿಂದ ಪ್ರೇಮನಾಥ್ ಅವರು ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ರೂರ್ಕೆಲಾ ಸರ್ಕಾರಿ ಆಸ್ಪತ್ರೆಗೆ (RGH) ಸಾಗಿಸಲಾಗಿದೆ. ಆದರೆ ಮಾರ್ಗಮಧ್ಯೆಯೇ ಅವರು ಮೃತಪಟ್ಟಿರುವುದಾಗಿ ಆಸ್ಪತ್ರೆಯಲ್ಲಿ ವೈದ್ಯರು ಹೇಳಿದ್ದಾರೆ.
ಪ್ರೇಮನಾಥ್ ಅವರ ಸಾವಿನ ಬಳಿಕ ಸ್ಥಳೀಯರು ರಘುನಾಥಪಾಲಿ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಪೊಲೀಸರು ಸಮಾರಂಭದಲ್ಲಿ ಸಂಗೀತ ನೀಡಿದ ಡಿಜೆಯನ್ನು ಬಂಧಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ
Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು
Gujarat: 700 ಕೆ.ಜಿ. ಡ್ರಗ್ಸ್ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ
Bombay high court: ವಯಸ್ಕಳಲ್ಲದ ಪತ್ನಿ ಜತೆ ಒಪ್ಪಿತ ಲೈಂಗಿಕ ಸಂಬಂಧ ರೇ*ಪ್
Jharkhand; ವಿಮಾನದಲ್ಲಿ ತಾಂತ್ರಿಕ ದೋಷ: 2 ಗಂಟೆ ಕಾದ ಪ್ರಧಾನಿ ಮೋದಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.