ಇಂದಿನಿಂದ ರೈಲು ಸಂಚಾರ
Team Udayavani, May 12, 2020, 6:10 AM IST
ಹೊಸದಿಲ್ಲಿ: ಎರಡು ತಿಂಗಳುಗಳ ಸುದೀರ್ಘ ನಿಲುಗಡೆಯ ಬಳಿಕ ದೇಶದಲ್ಲಿ ಆಯ್ದ ಪ್ರಯಾಣಿಕ ರೈಲು ಸೇವೆಗೆ ಚಾಲನೆ ನೀಡಲಾಗಿದೆ. ಮಂಗಳವಾರದಿಂದ ಮೊದಲ ಹಂತದಲ್ಲಿ 15 ವಿಶೇಷ ರೈಲುಗಳು ಸಂಚರಿಸಲಿವೆ.
ಪ್ರಯಾಣಿಕರು 90 ನಿಮಿಷ ಮುಂಚಿತವಾಗಿ ರೈಲು ನಿಲ್ದಾಣ ತಲುಪಬೇಕಿದೆ. ಸ್ಕ್ರೀನಿಂಗ್,ತಪಾಸಣೆ ಮತ್ತಿತರ ಪ್ರಕ್ರಿಯೆಗಳನ್ನು ನಡೆಸುವುದಕ್ಕೆ ಈ ಅವಧಿಯನ್ನು ಬಳಸಿಕೊಳ್ಳಲಾಗುತ್ತದೆ. ದಿಲ್ಲಿಯಿಂದ ಬೆಂಗಳೂರು ಸಹಿತ ದೇಶದ 15 ರಾಜ್ಯ ರಾಜಧಾನಿಗಳಿಗೆ ರೈಲುಗಳು ಸಂಚರಿಸಲಿದ್ದು, ವೇಳಾಪಟ್ಟಿ, ಪ್ರಯಾಣಿಕ ಮಾರ್ಗಸೂಚಿಗಳನ್ನು ರೈಲ್ವೇ ಇಲಾಖೆ ಬಿಡುಗಡೆ ಮಾಡಿದೆ.
ಪ್ರಯಾಣಿಕರು ಅನುಸರಿಸಬೇಕಾದ್ದೇನು?
-90 ನಿಮಿಷ ಮೊದಲೇ ರೈಲು ನಿಲ್ದಾಣಕ್ಕೆ ಹೋಗಬೇಕು.
-ಸದ್ಯಕ್ಕೆ ತತ್ಕಾಲ್, ಪ್ರೀಮಿಯಂ ತತ್ಕಾಲ್ ಬುಕ್ಕಿಂಗ್ ಇಲ್ಲ
-ಸೂಪರ್ ಫಾಸ್ಟ್ ರೈಲು ಟಿಕೆಟ್ ದರ; ವಿನಾ ಯಿತಿ ಇಲ್ಲ
-ದೃಢೀಕೃತ ಇ-ಟಿಕೆಟ್ ಹೊಂದಿದ್ದರೆ ಮಾತ್ರ ರೈಲು ನಿಲ್ದಾಣಕ್ಕೆ ಪ್ರವೇಶ
-ಮಾಸ್ಕ್, ನಿರ್ಗಮನಕ್ಕೆ ಮುನ್ನ ಸ್ಕ್ರೀನಿಂಗ್ ಕಡ್ಡಾಯ
-ಹೊದಿಕೆ, ಬೆಡ್ ಶೀಟ್, ಆಹಾರ ಪ್ರಯಾಣಿಕರೇ ತರಬೇಕು.
ಕರಾವಳಿಗೆ ಒಂದು ರೈಲು
ಮಂಗಳೂರು: ವಿಶೇಷ ರೈಲುಗಳಲ್ಲಿ ಒಂದು ಮಾತ್ರ ಕರಾವಳಿ ಮೂಲಕ ಹಾದು ಹೋಗಲಿದೆ. ಆದರೆ ನಿಲುಗಡೆ ಇರುವುದು ಮಂಗಳೂರಿನಲ್ಲಿ ಮಾತ್ರ. ಹೊಸದಿಲ್ಲಿಯಿಂದ ಮೇ 13ರಂದು ಹೊರಡುವ ರೈಲು ಮೇ 15ರಂದು ತಿರುವನಂತಪುರ ತಲುಪಲಿದೆ. ಇದು ಹೊಸದಿಲ್ಲಿಯಿಂದ ಮಂಗಳವಾರ, ಬುಧವಾರ ಮತ್ತು ರವಿವಾರ ಸಂಚರಿಸಲಿದೆ. ಈ ರೈಲಿಗೆ ಮಂಗಳೂರಿನಲ್ಲಿ ಮಾತ್ರ ನಿಲುಗಡೆ ಇದೆ; ಉಡುಪಿ, ಕಾರವಾರಗಳಲ್ಲಿ ಇದು ನಿಲ್ಲುವುದಿಲ್ಲ.
ಬುಕ್ಕಿಂಗ್‌ಗೆ ಮುಗಿಬಿದ್ದರು!
ಸೋಮವಾರ ಸಂಜೆ 4 ಗಂಟೆಗೆ ಜನರು ಟಿಕೆಟ್ ಖರೀದಿಸಲು ಮುಗಿಬಿದ್ದರು. ಇದರಿಂದಾಗಿ ಐಆರ್‌ಸಿಟಿಸಿ ವೆಬ್‌ಸೈಟ್ ಕ್ರ್ಯಾಶ್ ಆಗಿತ್ತು. ಕೊನೆಗೆ ಬುಕ್ಕಿಂಗ್ ಸ್ಥಗಿತಗೊಳಿಸಿ, 6 ಗಂಟೆಯ ಬಳಿಕ ಆರಂಭಿಸಲಾಯಿತು. ವಿಶೇಷ ರೈಲುಗಳಿಗೆ ಸಂಬಂಧಿಸಿದ ಹೊಸ ದತ್ತಾಂಶ ಅಪ್ ಲೋಡ್ ಪ್ರಕ್ರಿಯೆ ವಿಳಂಬವಾದ ಕಾರಣ ವೆಬ್ ಸೈಟ್ ಕ್ರ್ಯಾಶ್ ಆಗಿದೆ ಎಂದು ಸಚಿವಾಲಯ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪತ್ನಿಗಾಗಿ ಕೆಲಸದಿಂದ ನಿವೃತ್ತಿ ಪಡೆದ ಪತಿ; ಬೀಳ್ಕೊಡುಗೆ ಕಾರ್ಯಕ್ರಮದಲ್ಲೇ ಪತ್ನಿ ಮೃತ್ಯು
Uttarakhand: ಕಂದಕಕ್ಕೆ ಬಿದ್ದ ಬಸ್ ನಾಲ್ವರು ಮೃ*ತ್ಯು; 20ಕ್ಕೂ ಅಧಿಕ ಮಂದಿಗೆ ಗಾಯ
Uttar Pradesh: 16 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾ*ಚಾರ; ಇಬ್ಬರ ಬಂಧನ
Atul Subhash Case: ಮೊಮ್ಮಗನನ್ನು ನೀಡದಿದ್ದರೆ ಆತ್ಮಹತ್ಯೆ; ಅತುಲ್ ತಂದೆ
Delhi: ನಕಲಿ ಕೇಸ್ ನಲ್ಲಿ ಸಿಎಂ ಅತಿಶಿ ಬಂಧನಕ್ಕೆ ಇ.ಡಿ, ಸಿಬಿಐಗೆ ಬಿಜೆಪಿ ಆದೇಶ: ಕೇಜ್ರಿ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಪತ್ನಿಗಾಗಿ ಕೆಲಸದಿಂದ ನಿವೃತ್ತಿ ಪಡೆದ ಪತಿ; ಬೀಳ್ಕೊಡುಗೆ ಕಾರ್ಯಕ್ರಮದಲ್ಲೇ ಪತ್ನಿ ಮೃತ್ಯು
Manipal: ಹಿರಿಯ ವೈದ್ಯೆ ಡಾ. ಆಶಾ ಭಟ್ ನಿಧನ
Banahatti: ತಾಂತ್ರಿಕ ಸೌಲಭ್ಯಗಳನ್ನು ನೀಡುವ ನಿಟ್ಟಿನಲ್ಲಿ ಬದ್ಧಳಾಗಿದ್ದೇನೆ: ಉಮಾಶ್ರೀ
Road Mishap; ದ್ವಿಚಕ್ರ ವಾಹನ-ಲಾರಿ ನಡುವೆ ಅಪಘಾತ: ದಂಪತಿ ಸಾವು
ಕಾಲ್ತುಳಿತ ಪ್ರಕರಣ: ಅಲ್ಲು, ʼಪುಷ್ಪ-2ʼ ತಂಡದಿಂದ ರೇವತಿ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.