ಎಂಜಿನ್‌ ಇಲ್ಲದೇ 13 ಕಿ.ಮೀ ಓಡಿತು ರೈಲು!

Team Udayavani, Apr 9, 2018, 8:10 AM IST

Indian-Railway-650.jpg

ಭುವನೇಶ್ವರ: ಹಳಿ ಇಲ್ಲದೆ ರೈಲು ಓಡಲಾರದು. ಹಾಗೆಯೇ ಎಂಜಿನ್‌ ಇಲ್ಲದೆಯೂ ರೈಲು ಮುಂದೆ ಚಲಿಸಲಾಗದು. ಆದರೆ ಅಚ್ಚರಿಯೆಂಬಂತೆ ರೈಲೊಂದು ಎಂಜಿನ್‌ ಇಲ್ಲದೆಯೂ ಚಲಿಸಿದೆ! ಅದು ನಡೆದಿದ್ದು ಒಡಿಶಾದ ತಿತ್ಲಾಗಢ ಸ್ಟೇಷನ್‌ನಿಂದ ಕೆಸಿಂಗಾ ಸ್ಟೇಷನ್‌ವರೆಗೆ. ಆದರೆ ಈ ಘಟನೆಯಲ್ಲಿ ಯಾವುದೇ ಅಪಘಾತ ಸಂಭವಿಸಿಲ್ಲ. ಆದರೆ, 22 ಬೋಗಿಗಳಿದ್ದ ರೈಲು ಎಂಜಿನ್‌ನ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ವಹಿಸಿದ ಕಾರಣ, 7 ಸಿಬ್ಬಂದಿಯನ್ನು ರೈಲ್ವೆ ಇಲಾಖೆ ಅಮಾನತು ಮಾಡಿದೆ. ಈ ಬೆಳವಣಿಗೆಯ ನಡುವೆಯೇ, ಈ ತಿಂಗಳು ಪೂರ್ತಿ ದೇಶಾದ್ಯಂತ ಸುರಕ್ಷತಾ ತಪಾಸಣೆಯನ್ನು ನಡೆಸಲು ರೈಲ್ವೆ ಇಲಾಖೆ ನಿರ್ಧರಿಸಿದೆ.

ಎಂಜಿನ್‌ ಇಲ್ಲದೇ ಓಡಿದ್ದು ಹೇಗೆ?: ಕೆಸಿಂಗಾದಿಂದ ತಿತ್ಲಾಗಢಕ್ಕೆ ಸಾಗುವ ದಾರಿ ಸಂಪೂರ್ಣ ಇಳಿಜಾರಿನಿಂದ ಕೂಡಿದೆ. ಅಹಮದಾಬಾದ್‌ ಕಡೆಯಿಂದ ಕೆಸಿಂಗಾ ದಾಟಿ ತಿತ್ಲಾಗಢಕ್ಕೆ ರೈಲು ಬಂದಾಗ, ತಿತ್ಲಾಗಢದಲ್ಲಿ ರೈಲನ್ನು ನಿಲ್ಲಿಸಿ ಎಂಜಿನ್‌ ಅನ್ನು ಬೇರ್ಪಡಿಸಲಾಗಿತ್ತು. ಎಂಜಿನ್‌ ಅನ್ನು ತೆಗೆದಾಗ ಸ್ಕಿಡ್‌ ಬ್ರೇಕ್‌ಗಳನ್ನು ಬೋಗಿಗಳಿಗೆ ಹಾಕಲಾಗುತ್ತದೆ. ಆದರೆ ಶನಿವಾರ ರಾತ್ರಿ ರೈಲು ಬಂದು ನಿಂತಾಗ ಇಲ್ಲಿನ ಸಿಬ್ಬಂದಿ ಸ್ಕಿಡ್‌ ಬ್ರೇಕ್‌ ಹಾಕದೇ ಎಂಜಿನ್‌ ತೆಗೆದಿದ್ದರು. ಹೀಗಾಗಿ ಎಂಜಿನ್‌ ಬೇರ್ಪಡುತ್ತಿದ್ದಂತೆಯೇ, ಇಳಿಜಾರಿದ್ದಿದ್ದರಿಂದ ಹಿಮ್ಮುಖವಾಗಿ, ಅಂದರೆ ಕೆಸಿಂಗಾ ಕಡೆಗೆ ರೈಲಿನ 22 ಬೋಗಿಗಳೂ ಚಲಿಸಲು ಆರಂಭಿಸಿದವು. ರಾತ್ರಿ 9.35ರ ವೇಳೆ ರೈಲು ಹಿಮ್ಮುಖವಾಗಿ ಚಲಿಸುತ್ತಿದ್ದಂತೆಯೇ ಒಳಗಿದ್ದ ಪ್ರಯಾಣಿಕರು ಗಾಬರಿಯಾದರು. ಹಲವರು ಜೀವಭಯದಿಂದ ಕಿರುಚತೊಡಗಿದರು. ಆದರೆ ಮಧ್ಯದಲ್ಲೇ ರೈಲು ನಿಲ್ಲಿಸುವುದು ಅಪಾಯಕಾರಿಯಾದ್ದರಿಂದ ಅಧಿಕಾರಿಗಳು ಕೆಸಿಂಗಾವರೆಗೂ ರೈಲನ್ನು ತೆರಳಲು ಬಿಟ್ಟರು. ಕೆಸಿಂಗಾಗೆ ರೈಲು ಬಂದಾಗ 10.15 ನಿಮಿಷವಾಗಿತ್ತು. ಯಾವುದೇ ವೇಗವರ್ಧಕವಿಲ್ಲದ್ದರಿಂದ ಗುರುತ್ವಾಕರ್ಷಣೆಯ ಬಲದಿಂದಲೇ ಕೇವಲ ಗಂಟೆಗೆ 20 ಕಿ.ಮೀ ವೇಗದಲ್ಲಿ ರೈಲು ಚಲಿಸಿತ್ತು.

ಕಲ್ಲುಗಳನ್ನು ಹಾಕಿ ನಿಲ್ಲಿಸಿದರು
ಬೋಗಿಗಳು ಕೆಸಿಂಗಾ ತಲುಪುವಷ್ಟರಲ್ಲಿ ಹಳಿಗಳ ಮೇಲೆ ಕಲ್ಲುಗಳನ್ನು ಹಾಕಿ ಬೋಗಿಗಳನ್ನು ನಿಲ್ಲಿಸಲಾಯಿತು. ಜತೆಗೆ, ಕೆಸಿಂಗಾದಲ್ಲಿ ರೈಲ್ವೆ ಅಧಿಕಾರಿಗಳು ಇನ್ನೊಂದು ಎಂಜಿನ್‌ ವ್ಯವಸ್ಥೆ ಮಾಡಿದ್ದರು. ಅಲ್ಲಿ ಅದನ್ನು ಅಳವಡಿಸಿ ರೈಲನ್ನು ರಾತ್ರಿ 12.35 ರ ವೇಳೆಗೆ ಪುನಃ ಪುರಿ ಕಡೆಗೆ ಕಳುಹಿಸಲಾಯಿತು. ಈ ಹಿಂದೆಯೂ ಇದೇ ರೀತಿ ಸನ್ನಿವೇಶಗಳು ಹಲವು ಬಾರಿ ಎದುರಾಗಿವೆ. ಕಳೆದ ನವೆಂಬರ್‌ನಲ್ಲಿ ಮಹಾರಾಷ್ಟ್ರದಲ್ಲಿ ಎಲೆಕ್ಟ್ರಿಕ್‌ ರೈಲು 13 ಕಿ.ಮೀ ಕೋಚ್‌ಗಳಿಲ್ಲದೇ ಸಾಗಿತ್ತು. ನಂತರ ರೈಲ್ವೆ ಅಧಿಕಾರಿಗಳು ಬೈಕ್‌ನಲ್ಲಿ ಬೆನ್ನಟ್ಟಿ ಹೋಗಿ ನಿಯಂತ್ರಿಸಿದ್ದರು.

ಟಾಪ್ ನ್ಯೂಸ್

Arrested: ನಟ ಸುನಿಲ್‌ ಪಾಲ್‌, ಮುಸ್ತಾಕ್‌ ಅಪಹರಣ: ಎನ್‌ಕೌಂಟರ್‌ ಮೂಲಕ ಪ್ರಮುಖ ಆರೋಪಿ ಬಂಧನ

Arrested: ನಟ ಸುನಿಲ್‌ ಪಾಲ್‌, ಮುಸ್ತಾಕ್‌ ಅಪಹರಣ; ಎನ್‌ಕೌಂಟರ್‌ ಮೂಲಕ ಪ್ರಮುಖ ಆರೋಪಿ ಬಂಧನ

Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ

ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ

Jaipur: ಶ್ರೀಮಂತ ಪುರುಷರನ್ನು ಮೋಡಿ ಮಾಡುವ ʼಕಿಲಾಡಿ ವಧುʼ; ಇವಳು ಪೀಕಿದ್ದು ಕೋಟಿ ಕೋಟಿ ಹಣ

Birds: ಸಿಲಿಕಾನ್‌ ಸಿಟಿಯಲ್ಲಿ ವಿದೇಶಿ ಪಕ್ಷಿಗಳ ಕಲರವ

Darshan; ಶೂಟಿಂಗ್‌ ಗೆ ಡೆವಿಲ್ ರೆಡಿ; ಸತತ ಚಿತ್ರೀಕರಣಕ್ಕೆ ತಂಡ ನಿರ್ಧಾರ?

Chhattisgarh: ವಿವಾಹಿತ ಮಹಿಳೆಯರ ಖಾತೆಗೆ ಹಣ-ಸನ್ನಿ ಲಿಯೋನ್‌ ಹೆಸರಲ್ಲಿ ವಂಚನೆ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Arrested: ನಟ ಸುನಿಲ್‌ ಪಾಲ್‌, ಮುಸ್ತಾಕ್‌ ಅಪಹರಣ: ಎನ್‌ಕೌಂಟರ್‌ ಮೂಲಕ ಪ್ರಮುಖ ಆರೋಪಿ ಬಂಧನ

Arrested: ನಟ ಸುನಿಲ್‌ ಪಾಲ್‌, ಮುಸ್ತಾಕ್‌ ಅಪಹರಣ; ಎನ್‌ಕೌಂಟರ್‌ ಮೂಲಕ ಪ್ರಮುಖ ಆರೋಪಿ ಬಂಧನ

ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ

ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ

Jaipur: ಶ್ರೀಮಂತ ಪುರುಷರನ್ನು ಮೋಡಿ ಮಾಡುವ ʼಕಿಲಾಡಿ ವಧುʼ; ಇವಳು ಪೀಕಿದ್ದು ಕೋಟಿ ಕೋಟಿ ಹಣ

Jaipur: ಶ್ರೀಮಂತ ಪುರುಷರನ್ನು ಮೋಡಿ ಮಾಡುವ ʼಕಿಲಾಡಿ ವಧುʼ; ಇವಳು ಪೀಕಿದ್ದು ಕೋಟಿ ಕೋಟಿ ಹಣ

Chhattisgarh: ವಿವಾಹಿತ ಮಹಿಳೆಯರ ಖಾತೆಗೆ ಹಣ-ಸನ್ನಿ ಲಿಯೋನ್‌ ಹೆಸರಲ್ಲಿ ವಂಚನೆ!

Chhattisgarh: ವಿವಾಹಿತ ಮಹಿಳೆಯರ ಖಾತೆಗೆ ಹಣ-ಸನ್ನಿ ಲಿಯೋನ್‌ ಹೆಸರಲ್ಲಿ ವಂಚನೆ!

‌Punjab ಪೊಲೀಸರ ಮೇಲೆ ಗ್ರೆನೇಡ್‌ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉ*ಗ್ರರ Encounter

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Arrested: ನಟ ಸುನಿಲ್‌ ಪಾಲ್‌, ಮುಸ್ತಾಕ್‌ ಅಪಹರಣ: ಎನ್‌ಕೌಂಟರ್‌ ಮೂಲಕ ಪ್ರಮುಖ ಆರೋಪಿ ಬಂಧನ

Arrested: ನಟ ಸುನಿಲ್‌ ಪಾಲ್‌, ಮುಸ್ತಾಕ್‌ ಅಪಹರಣ; ಎನ್‌ಕೌಂಟರ್‌ ಮೂಲಕ ಪ್ರಮುಖ ಆರೋಪಿ ಬಂಧನ

Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ

Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ

Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್‌

Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್‌

ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ

ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ

5

Bengaluru: ಮಹಿಳೆಯರಿಗೆ ನೌಕರಿ ಆಮಿಷ ತೋರಿಸಿ ವೇಶ್ಯಾವಾಟಿಕೆಗೆ ಬಳಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.