ಜೈಶ್ ಕೈಯಲ್ಲಿ ಸ್ನೆ„ಪರ್ ಅಸ್ತ್ರ
Team Udayavani, Oct 29, 2018, 8:36 AM IST
ಶ್ರೀನಗರ: ಭಯೋತ್ಪಾದಕರ ಅಟ್ಟಹಾಸದಿಂದ ನಲುಗಿರುವ ಕಣಿವೆ ರಾಜ್ಯದಲ್ಲಿ ಈಗ ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆಗಳ ಸ್ನೆ„ಪರ್ ದಾಳಿಯು ಭದ್ರತಾ ಪಡೆಗಳಿಗೆ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ. ಕಳೆದ 15 ದಿನ ಗಳಲ್ಲಿ ಮೂವರು ಯೋಧರು ಉಗ್ರರ ಸ್ನೆಪರ್ ದಾಳಿಗೆ ಬಲಿಯಾಗಿದ್ದು, ನೈಟ್ ವಿಷನ್ ವ್ಯವಸ್ಥೆ ಹೊಂದಿರುವ ಉಗ್ರಗಾಮಿ ಸ್ನೆ„ಪರ್‌ಗಳಿಂದಾಗಿ ವಿಐಪಿಗಳ ಜೀವಕ್ಕೆ ಮತ್ತಷ್ಟು ಕುತ್ತು ಉಂಟಾಗುವ ಭೀತಿ ಮೂಡಿದೆ.
ಸೆಪ್ಟಂಬರ್ ಆರಂಭದಲ್ಲೇ ಇಬ್ಬರು ಉಗ್ರರಿರುವ ಎರಡು ತಂಡಗಳು ಪಾಕಿಸ್ಥಾನದಿಂದ ಭಾರತ ಪ್ರವೇಶಿಸಿದ್ದು, ಈ ನಾಲ್ವರು ಉಗ್ರರು ಉನ್ನತ ಮಟ್ಟದ ಸ್ನೆ„ಪರ್ ತರಬೇತಿ ಪಡೆದಿದ್ದಾರೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ. ಪಾಕಿಸ್ತಾನದ ಐಎಸ್‌ಐ ಈ ಉಗ್ರರಿಗೆ ತರಬೇತಿ ನೀಡಿದ್ದು, ಅಫ್ಘಾನಿಸ್ಥಾನದಲ್ಲಿ ಅಮೆರಿಕ ನೇತೃತ್ವದ ಪಡೆಗಳು ಬಳಸುವಂಥ ಎಂ-4 ಕಾರ್ಬೈನ್‌ಗಳನ್ನೂ ಇವರಿಗೆ ಒದಗಿಸಲಾಗಿದೆ. ಆಘಾನ್‌ನಲ್ಲಿ ತಾಲಿಬಾನ್ ಜತೆಗೆ ಜೈಶ್ ಜಂಟಿಯಾಗಿ ಸೇನಾಪಡೆಗಳ ವಿರುದ್ಧ ಸಮರ ಸಾರಿರುವ ಕಾರಣ, ಅಲ್ಲಿ ವಶಪಡಿಸಿಕೊಂಡ ಶಸ್ತ್ರಾಸ್ತ್ರಗಳನ್ನು ಉಗ್ರರಿಗೆ ತಾಲಿಬಾನ್ ಹಸ್ತಾಂತರಿಸಿರಬಹುದು ಎಂದು ಶಂಕಿಸಲಾಗಿದೆ. ಪಾಕಿಸ್ತಾನದ ವಿಶೇಷ ಪಡೆಯೂ ಇಂಥ ಶಸ್ತ್ರಾಸ್ತ್ರ ಬಳಸುತ್ತಿರುವುದು ಭಾರತದ ನೆಲದಲ್ಲಿ ವಿಧ್ವಂಸಕ ಕೃತ್ಯಕ್ಕೆ ಅಲ್ಲಿನ ಸೇನೆಯೂ ನೆರವಾಗುತ್ತಿದೆಯೇ ಎಂಬ ಶಂಕೆಯನ್ನು ಬಲಗೊಳಿಸಿದೆ.
ಹೇಗೆ ದಾಳಿ?: ಎಂ-4 ಕಾರ್ಬೈನ್‌ಗಳನ್ನು ಟೆಲಿಸ್ಕೋಪ್ ಮೇಲೆ ಅಳವಡಿ ಸಿರಲಾಗುತ್ತದೆ. ಉಗ್ರರು ತಮ್ಮ ಗುರಿಯನ್ನು ನಿಗದಿಮಾಡಲು ನೈಟ್ ವಿಷನ್ ಸಾಧನಗಳನ್ನು ಬಳಸುತ್ತಾರೆ. 500-600 ಮೀಟರ್ ದೂರದಿಂದ ಶೂಟ್ ಮಾಡಲಾಗುತ್ತದೆ. ರಾತ್ರಿ ವೇಳೆ ಯೋಧರು ತಮ್ಮ ಕುಟುಂಬ ಸದಸ್ಯರೊಂದಿಗೆ ಮೊಬೈಲ್‌ನಲ್ಲಿ ಮಾತನಾಡಲು ಎತ್ತರದ ಪ್ರದೇಶಕ್ಕೆ ಬಂದೊಡನೆ, ಆ ಮೊಬೈಲ್‌ನಲ್ಲಿನ ಬೆಳಕನ್ನು ನೋಡಿ ಗುರಿಯಿಟ್ಟು ಯೋಧರನ್ನು ಕೊಲ್ಲಲಾಗುತ್ತದೆ. ಇಂಥ ಪ್ರಕರಣಗಳು ಬೆಳಕಿಗೆ ಬಂದ ಕಾರಣ, ಭದ್ರತಾ ಪಡೆಗಳು ಸಿಬಂದಿಗೆ ಹೊಸ ಮಾರ್ಗ ಸೂಚಿ ಬಿಡುಗಡೆ ಮಾಡಿದೆ.
ಹೆತ್ತವರ ಭೇಟಿಗೆ ಹೋಗುತ್ತಿದ್ದ ಎಸ್‌ಐ ಹತ್ಯೆ
ಜಮ್ಮು-ಕಾಶ್ಮೀರ ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಬ್‌ಇನ್‌ಸ್ಪೆಕ್ಟರ್ ಇಮಿಯಾಜ್ ಅಹ್ಮದ್ ಮಿರ್ ಎಂಬವರನ್ನು ಉಗ್ರರು ಶನಿವಾರ ಗುಂಡಿಕ್ಕಿ ಹತ್ಯೆಗೈದಿದ್ದಾರೆ. ಶ್ರೀನಗರದ ಶೀರ್‌ಗಾಡಿಯ ಸಿಐಡಿಯಲ್ಲಿ ನಿಯೋಜಿತರಾಗಿದ್ದ ಮಿರ್ ಅವರು ಪುಲ್ವಾಮಾದಲ್ಲಿರುವ ತಮ್ಮ ಮನೆಗೆ ತೆರಳುತ್ತಿದ್ದಾಗ ಅವರನ್ನು ಕೊಲೆಗೈಯಲಾಗಿದೆ. ಪೊಲೀಸರನ್ನು ಗುರಿಯಾಗಿಸಿ ಉಗ್ರರು ದಾಳಿ ನಡೆಸುತ್ತಿದ್ದ ಹಿನ್ನೆಲೆಯಲ್ಲಿ ಮನೆಗೆ ತೆರಳದಂತೆ ಮೇಲಧಿಕಾರಿಗಳು ಸೂಚಿಸಿದ್ದರು. ಆದರೆ, ಹೆತ್ತವರನ್ನು ನೋಡಬೇಕೆಂದು ಅನಿಸುತ್ತಿದೆ ಎಂದು ಹೇಳಿದ್ದ ಮಿರ್, ಉಗ್ರರಿಗೆ ತಮ್ಮ ಗುರುತು ಪತ್ತೆಯಾಗದಂತೆ ತಮ್ಮ ಗಡ್ಡ-ಮೀಸೆ ಬೋಳಿಸಿಕೊಂಡು, ಖಾಸಗಿ ಕಾರಿನಲ್ಲಿ ಮನೆಯತ್ತ ಪ್ರಯಾಣ ಬೆಳೆಸಿದ್ದರು ಎಂದು ಸಹೋದ್ಯೋಗಿಗಳು ತಿಳಿಸಿದ್ದಾರೆ. ಇದೇ ವೇಳೆ, ಮಿರ್ ಅವರು ಮನೆಗೆ ತೆರಳುತ್ತಿದ್ದ ಮಾಹಿತಿಯನ್ನು ಉಗ್ರರಿಗೆ ನೀಡಿದ್ಯಾರು ಎಂಬ ಪ್ರಶ್ನೆ ಮೂಡಿದ್ದು, ಆ ಬಗ್ಗೆ ತನಿಖೆ ನಡೆಸುವುದಾಗಿ ಅಧಿಕಾರಿ ಗಳು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra Polls: ಯಾರಾಗಲಿದ್ದಾರೆ ಮಹಾ ಮುಖ್ಯಮಂತ್ರಿ? ಸುಳಿವು ನೀಡಿದ ಫಡ್ನವೀಸ್
Uttara Pradesh By poll: 30 ವರ್ಷದ ಬಳಿಕ ಮುಸ್ಲಿಂ ಬಾಹುಳ್ಯದ ಕ್ಷೇತ್ರದಲ್ಲಿ ಅರಳಿದ ಕಮಲ!
Eye Surgeries: ವೈದ್ಯಕೀಯ ಪದವಿ ಪೂರ್ಣಗೊಳಿಸದೇ 44 ಕಣ್ಣಿನ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯ
Wayanad Results 2024:ವಯನಾಡ್ ನಲ್ಲಿ ಪ್ರಿಯಾಂಕಾಗೆ 3.68 ಲಕ್ಷಕ್ಕೂ ಅಧಿಕ ಮತಗಳ ಮುನ್ನಡೆ!
Video: ವಿದ್ಯಾರ್ಥಿಯಿಂದ ಕಾಲು ಒತ್ತಲು ಹೇಳಿ ಶಾಲೆಯಲ್ಲೇ ವಿಶ್ರಾಂತಿಗೆ ಜಾರಿದ ಶಿಕ್ಷಕ
MUST WATCH
ಹೊಸ ಸೇರ್ಪಡೆ
Maharashtra Polls: ಯಾರಾಗಲಿದ್ದಾರೆ ಮಹಾ ಮುಖ್ಯಮಂತ್ರಿ? ಸುಳಿವು ನೀಡಿದ ಫಡ್ನವೀಸ್
ಕೊಪ್ಪಳ: ಫ್ಲೈಟ್‌ನಲ್ಲಿ ಲಿಂಗದಹಳ್ಳಿ ಸರ್ಕಾರಿ ಶಾಲಾ ಮಕ್ಕಳ ಪ್ರವಾಸ!
Dhanashree Verma: ಯಶ್ ಸಿನಿಮಾಕ್ಕೆ ಕ್ರಿಕೆಟಿಗ ಚಹಾಲ್ ಪತ್ನಿ ಹೀರೋಯಿನ್
Re-Release: ಈ ವರ್ಷ ರೀ ರಿಲೀಸ್ ಆದ ಬಾಲಿವುಡ್ ಸಿನಿಮಾಗಳ ಬಾಕ್ಸ್ ಆಫೀಸ್ ಗಳಿಕೆ ಎಷ್ಟು?
Uttara Pradesh By poll: 30 ವರ್ಷದ ಬಳಿಕ ಮುಸ್ಲಿಂ ಬಾಹುಳ್ಯದ ಕ್ಷೇತ್ರದಲ್ಲಿ ಅರಳಿದ ಕಮಲ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.