ತಾಜ್ ಮಹಲ್ ನಿರ್ಮಿಸಿದವರು ದ್ರೋಹಿಗಳು: ಬಿಜೆಪಿ ಶಾಸಕ ಸೋಮ್
Team Udayavani, Oct 16, 2017, 10:53 AM IST
ಲಕ್ನೋ : ಅತ್ಯುನ್ನತ ಪ್ರೇಮದ ಐತಿಹಾಸಿಕ ಸ್ಮಾರಕವಾಗಿರುವ ಆಗ್ರಾದ ವಿಶ್ವ ಪ್ರಸಿದ್ಧ ತಾಜ್ ಮಹಲ್ ಈಚಿನ ದಿನಗಳಲ್ಲಿ ಒಳ್ಳೆಯ ಮತ್ತು ಕೆಟ್ಟ ಸುದ್ದಿಗಳಿಗಾಗಿ ಮುಖ್ಯ ಶೀರ್ಷಿಕೆಯಲ್ಲಿ ರಾರಾಜಿಸುವಂತಾಗಿದೆ.
ಉತ್ತರ ಪ್ರದೇಶ ಸರಕಾರ ಈಚೆಗಷ್ಟೇ ಬಿಡುಗಡೆ ಮಾಡಿದ್ದ ಪ್ರವಾಸೋದ್ಯಮ ಪುಸ್ತಿಕೆಯಲ್ಲಿ ತಾಜ್ ಮಹಲ್ ಉಲ್ಲೇಖವನ್ನು ಕೈಬಿಡಲಾಗಿತ್ತು. ತತ್‌ಪರಿಣಾಮವಾಗಿ ಭಾರೀ ಟೀಕೆ, ಟಿಪ್ಪಣಿ, ವಿವಾದ ಸೃಷ್ಟಿಯಾಗಿತ್ತು.
ಅದಾಗಿ ಇದೀಗ ಬಿಜೆಪಿ ಶಾಸಕ ಸಂಗೀತ್ ಸೋಮ್ ಅವರು ‘ಐತಿಹಾಸಿಕ ತಾಜ್‌ಮಹಲ್ ಕಟ್ಟಡವನ್ನು ನಿರ್ಮಿಸಿದವರು ದ್ರೋಹಿಗಳು’ ಎಂದು ಹೇಳುವ ಮೂಲಕ ಇನ್ನೊಂದು ವಿವಾದವನ್ನು ಸೃಷ್ಟಿಸಿದ್ದಾರೆ.
ಸರ್ಧಾನಾ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕರಾಗಿರುವ ಸೋಮ್ ಅವರು, “ಐತಿಹಾಸಿಕ ತಾಜ್ ಮಹಲ್ ಕಟ್ಟಡವನ್ನು ಕಟ್ಟಿದವರು ದ್ರೋಹಿಗಳು; ಆದುದರಿಂದ ಅದಕ್ಕೆ ಭಾರತೀಯ ಇತಿಹಾಸದಲ್ಲಿ ಯಾವುದೇ ಸ್ಥಾನ ಇಲ್ಲ’ ಎಂದು ಗುಡುಗಿದ್ದಾರೆ.
“ತಾಜ್‌ಮಹಲ್ ಭಾರತೀಯ ಸಂಸ್ಕೃತಿಯಲ್ಲಿನ ಒಂದು ಕಪ್ಪು ಚುಕ್ಕೆ; ಅದನ್ನು ಕಟ್ಟಿದ್ದ ಶಹಜಹಾನ್ ತನ್ನ ತಂದೆಯನ್ನೇ ಜೈಲಿಗೆ ಹಾಕಿದ್ದ’ ಎಂದು ಸೋಮ್ ಹೇಳಿದ್ದಾರೆ.
ಮೀರತ್ ಜಿಲ್ಲೆಯ ಸಿಸೋಲಿ ಗ್ರಾಮದಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿ ಜನರನ್ನು ಉದ್ದೇಶಿಸಿ ಮಾತನಾಡಿದ ಬಿಜೆಪಿ ಶಾಸಕ ಸೋಮ್ ತಾಜ್ ಮಹಲ್ ಕುರಿತಾಗಿ ತನ್ನ ಅಭಿಪ್ರಾಯಗಳನ್ನು ನಿಷ್ಠುರ ಮಾತುಗಳಲ್ಲಿ ಹೇಳಿದರು.
ಇದೇ ವೇಳೆ ಸೋಮ್, “ಮೊಹಮ್ಮದ ಅಲಿ ಜೌಹರ್ ವಿಶ್ವವಿದ್ಯಾಲಯವು ಭಯೋತ್ಪಾಕರ ಕಾರಸ್ಥಾನವಾಗಿದೆ’ ಎಂದು ಆರೋಪಿಸಿದರು.
ಸೋಮ್ ಅವರು ಈ ಹಿಂದೆಯೂ ಕೋಮು ಸಂಘರ್ಷಕ್ಕೆ ಕಾರಣವಾಗುವ ವಿವಾದಾತ್ಮಕ ಹೇಳಿಕೆಗಳನ್ನು ನೀಡುವ ಮೂಲ ಉರಿನಾಲಗೆಯ ಬಿಜೆಪಿ ಶಾಸಕ ಎಂದೇ ಪರಿಚಿತರಾಗಿದ್ದರು.
ತಾಜ್ ಮಹಲ್ ಮತ್ತು ಮೊಹಮ್ಮದ್ ಅಲಿ ಜೌಹರ್ ವಿವಿ ಕುರಿತಾದ ಸೋಮ್ ಅವರ ವಿವಾದಾತ್ಮಕ ಹೇಳಿಕೆಯಿಂದ ಬಿಜೆಪಿ ದೂರ ಸರಿದಿದೆ.
“ಸೋಮ್ ಹೇಳಿರುವುದೆಲ್ಲ ಅವರ ವೈಯಕ್ತಿಕ ನೆಲೆಯಲ್ಲಿ; ಅದು ಬಿಜೆಪಿಯ ಅಭಿಪ್ರಾಯವಲ್ಲ’ ಎಂದು ಬಿಜೆಪಿ ವಕ್ತಾರ ಅನಿಲ್ ಸಿಂಗ್, ಮಾಧ್ಯಮಗಳಲ್ಲಿ ಪ್ರಕಟವಾಗಿರುವ ವರದಿಗಳನ್ನು ನೋಡಿ ಪ್ರತಿಕ್ರಿಯಿಸಿದ್ದಾರೆ.
ಹಾಗಿದ್ದರೂ ಈಚೆಗೆ ಉ.ಪ್ರ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು, “ಐತಿಹಾಸಿಕ ತಾಜ್ ಮಹಲ್ ಕಟ್ಟಡಕ್ಕೂ ಭಾರತೀಯ ಸಂಸ್ಕತಿ ಮತ್ತು ಪರಂಪರೆಗೂ ಯಾವುದೇ ಸಂಬಂಧ ಇಲ್ಲ’ ಎಂದು ಹೇಳಿ ವಿವಾದ ಸೃಷ್ಟಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Hunsur: ಅಪ್ರಾಪ್ತ ಬಾಲಕಿ ಗರ್ಭಿಣಿ ಪ್ರಕರಣ; ಯುವಕನ ಬಂಧನ
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.