ಇನ್ನೂ 48 ಟ್ರೈನ್‌ಗಳು ಸೂಪರ್ ಫಾಸ್ಟ್: ಪ್ರಯಾಣ ದರ ಏರಿಕೆ
Team Udayavani, Nov 6, 2017, 3:33 PM IST
ಹೊಸದಿಲ್ಲಿ : ತೀವ್ರ ನಗದು ಕೊರತೆ ಅನುಭವಿಸುತ್ತಿರುವ ಭಾರತೀಯ ರೈಲ್ವೆ 48 ಮೇಲ್ ಮತ್ತು ಎಕ್ಸ್‌ಪ್ರೆಸ್ ಟ್ರೈನ್‌ಗಳನ್ನು “ಸೂಪರ್ ಫಾಸ್ಟ್’ ಎಂದು ಮೇಲ್ಮಟ್ಟಕ್ಕೇರಿಸಿ ಅವುಗಳಲ್ಲಿನ ಪ್ರಯಾಣ ಶುಲ್ಕವನು ಏರಿಸಿದೆ.
ಈ ರೈಲುಗಳ ಈಗಿನ ಗಂಟೆಗೆ 50 ಕಿ.ಮೀ. ವೇಗವನ್ನು ಕೇವಲ ಐದು ಕಿ.ಮೀ. ಏರಿಸಿ ಅವುಗಳಿಗೆ ಸೂಪರ್ ಫಾಸ್ಟ್ ಎಂಬ ಮೇಲ್ಮಟ್ಟದ ಲೇಬಲ್ ಹಚ್ಚಿರುವುದು ಭಾರತೀಯ ರೈಲ್ವೆಯ ಕುಟಿಲೋಪಾಯವಾಗಿದೆ ಎಂಬ ಟೀಕೆ ಕೇಳಿಬಂದಿದೆ.
ಈ ಟ್ರೈನ್‌ಗಳ ಹೊಸ ಪ್ರಯಾಣ ಶುಲ್ಕವನ್ನು ನಮೂದಿಸಿ ರೈಲ್ವೆ ಇಲಾಖೆ ಹೊಸ ವೇಳಾಪಟ್ಟಿಯನ್ನು ನವೆಂಬರ್ 1ರಂದು ಬಿಡುಗಡೆ ಮಾಡಿದೆ.
ಸೂಪರ್ ಫಾಸ್ಟ್ ಎಂಬ ಟ್ಯಾಗ್ ನೀಡಿ ಮೇಲ್ಮಟ್ಟಕ್ಕೆ ಏರಿಸಿರುವ ಹೊರತಾಗಿಯೂ ಈ ರೈಲುಗಳು ಸಮಯಕ್ಕೆ ಸರಿಯಾಗಿ ತಮ್ಮ ಗುರಿ ತಲುಪುತ್ತವೆ ಎಂಬುದಕ್ಕೆ ಯಾವುದೇ ಗ್ಯಾರಂಟಿ ಇಲ್ಲ. ಮೇಲಾಗಿ ಚಳಿಗಾಲ ಆರಂಭಕ್ಕೆ ಮುನ್ನವೇ ಏರಿದ ಹೊಸ ಪ್ರಯಾಣ ಶುಲ್ಕವನ್ನು ಜಾರಿಗೆ ತರಲಾಗಿದೆ; ಉತ್ತರ ಭಾರತದಲ್ಲಿ ಚಳಿಗಾಲದಲ್ಲಿ ಮಂಜು ಮುಸುಕಿದ ವಾತಾವರಣ ಸಾಮಾನ್ಯವಾಗಿರುವುದರಿಂದ ಎಲ್ಲ ಬಗೆಯ ರೈಲುಗಳ ಹಲವು ತಾಸು ವಿಳಂಬವಾಗಿ ಗುರಿ ತಲುಪುವುದು ಸಾಮಾನ್ಯವಾಗಿದೆ.
ಪ್ರಯಾಣ ದರ ಏರಿಸಲ್ಪಟ್ಟ ಈ ರೈಲುಗಳಲ್ಲಿ , ಸೂಪರ್ ಫಾಸ್ಟ್ ಮಟ್ಟಕ್ಕೆ ಅನುಗುಣವಾದ ಯಾವುದೇ ಹೊಸ ಸೌಕರ್ಯಗಳನ್ನು ಅಳವಡಿಸಲಾಗಿಲ್ಲ. ಹಾಗಿದ್ದೂ ಪ್ರಯಾಣಿಕರು ಸ್ಲಿàಪರ್‌ಗೆ 30 ರೂ.ಹೆಚ್ಚು ಮತ್ತು 3ನೇ ಎಸಿಗೆ 45 ರೂ. ಹೆಚ್ಚು ಹಾಗೂ ಫಸ್ಟ್ ಎಸಿ ವರ್ಗಕ್ಕೆ 75 ರೂ ಹೆಚ್ಚು ತೆರಬೇಕಾಗಿದೆ.
ಈ ಏರಿಕೆ ಮೂಲಕ ಹೆಚ್ಚುವರಿಯಾಗಿ 70 ಕೋಟಿ ರೂ.ಗಳ ಆದಾಯವನ್ನು ರೈಲ್ವೆ ನಿರೀಕ್ಷಿಸಿದೆ.
48 ಹೊಸ ಸೇರ್ಪಡೆಯೊಂದಿಗೆ ಪ್ರಕೃತ ಸೂಪರ್ ಫಾಸ್ಟ್ ರೈಲುಗಳ ಸಂಖ್ಯೆ 1,072ಕ್ಕೇರಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.