ನೂರಾರು ಹಕ್ಕಿಗಳ ಮಾರಣಹೋಮ; ಮರ ಬೀಳಿಸಿದ ಬಗ್ಗೆ ವರದಿ ಕೇಳಿದ ಸರ್ಕಾರ
Team Udayavani, Sep 3, 2022, 9:16 PM IST
ತಿರುವನಂತಪುರಂ: ಇತ್ತೀಚೆಗೆ ಅಭಿವೃದ್ಧಿ ಹೆಸರಿನಲ್ಲಿ ಮರವೊಂದನ್ನು ಬೀಳಿಸಿದಾಗ, ಅದರಲ್ಲಿದ್ದ ನೂರಾರು ಹಕ್ಕಿಗಳು ಮೃತಪಟ್ಟ ವಿಡಿಯೋವೊಂದು ವೈರಲ್ ಆಗಿತ್ತು. ಈ ಘಟನೆ ನಡೆದಿದ್ದು ಕೇರಳದ ಮಲಪ್ಪುರಂ ಜಿಲ್ಲೆಯ ರಂದಥಾನಿ ಪ್ರದೇಶದಲ್ಲಿ. ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎ)ದಿಂದ ನಡೆದ ಕಾಮಗಾರಿಯಲ್ಲಿ ಈ ರೀತಿ ಮಾಡಲಾಗಿದೆ.
ವಿಡಿಯೋ ಬಗ್ಗೆ ಜನರು ಆಕ್ರೋಶ ಹೊರಹಾಕಿದ ಬೆನ್ನಲ್ಲೇ, ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ವರದಿ ಕೊಡುವಂತೆ ರಾಜ್ಯ ಪಿಡಬ್ಲ್ಯೂ ಡಿ ಸಚಿವ ಪಿ.ಎ.ಮೊಹಮದ್ ರಿಯಾಸ್ ಎನ್‌ಎಚ್‌ಎಐಗೆ ಕೇಳಿದ್ದಾರೆ.
ಮರವನ್ನು ಬೀಳಿಸಿದ ಜೆಸಿಬಿ ಮತ್ತು ಅದರ ಚಾಲಕನನ್ನು ವಶಕ್ಕೆ ಪಡೆಯಲಾಗಿದೆ. ಈ ಬಗ್ಗೆ “ಸೇವ್ ವೆಟ್‌ಲ್ಯಾಂಡ್ ಇಂಟರ್‌ನ್ಯಾಷನಲ್ ಮೂವ್ಮೆಂಟ್ ‘ ಸಂಸ್ಥೆಯ ಮುಖ್ಯಸ್ಥ ಥಾಮಸ್ ಲಾರೆನ್ಸ್ ಅವರು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೂ ಪತ್ರ ಬರೆದಿದ್ದು, ಸೂಕ್ತ ಕ್ರಮಕ್ಕೆ ಮನವಿ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ
MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.