ಟ್ರಿಲಿಯನ್ ಟಾರ್ಗೆಟ್
Team Udayavani, Jul 6, 2019, 3:09 AM IST
ದೇಶದ ಅರ್ಥ ವ್ಯವಸ್ಥೆಯನ್ನು 2024-25ನೇ ವಿತ್ತೀಯ ವರ್ಷದ ವೇಳೆ ಐದು ಶತಕೋಟಿ ಡಾಲರ್‌ಗೆ ಏರಿಕೆ ಮಾಡುವುದರ ಬಗ್ಗೆ ಮೋದಿ ಸರ್ಕಾರ ಗುರಿ ಹೊಂದಿದೆ. ಅದಕ್ಕಾಗಿ ಮಹತ್ವದ ಸುಧಾರಣಾ ಕ್ರಮಗಳನ್ನು ಹೊಂದಬೇಕಾಗಿದೆ ಎಂದು ಸರ್ಕಾರ ಪ್ರತಿಪಾದಿಸಿದೆ. ಆದರೆ ಪ್ರಸಕ್ತ ವಿತ್ತೀಯ ವರ್ಷದಲ್ಲಿಯೇ ಮೂರು ಶತಕೋಟಿ ಡಾಲರ್ (3 ಟ್ರಿಲಿಯನ್)ವ್ಯವಸ್ಥೆಯ ಅರ್ಥ ವ್ಯವಸ್ಥೆಯಾಗಿ ಹೊರ ಹೊಮ್ಮಲಿದೆ.
ಐದು ವರ್ಷಗಳ ಹಿಂದೆ ದೇಶದ ಅರ್ಥ ವ್ಯವಸ್ಥೆ 1.85 ಶತಕೋಟಿ ಡಾಲರ್ ಆಗಿ, 11ನೇ ಸ್ಥಾನ ದಲ್ಲಿತ್ತು. ಅದು ಈಗ 2.7 ಶತಕೋಟಿ ಡಾಲರ್‌ಗೆ ಏರಿಕೆಯಾಗಿ, ವಿಶ್ವದ ಆರನೇ ಅತಿದೊಡ್ಡ ಅರ್ಥ ವ್ಯವಸ್ಥೆಯಾಗಿದೆ. ಇದರ ಜತೆಗೆ ಈ ಅವಧಿಯಲ್ಲಿ ದೇಶದ ಅರ್ಥ ವ್ಯವಸ್ಥೆ ಭಾರಿ ಪ್ರಮಾಣದ ಸುಧಾರ ಣೆಗಳನ್ನು ಕಾಣುತ್ತಾ ಬಂದಿದೆ. 2024-25ನೇ ಸಾಲಿನಲ್ಲಿ ಐದು ಶತಕೋಟಿ ಡಾಲರ್ ಮೌಲ್ಯದ ಅರ್ಥ ವ್ಯವಸ್ಥೆಯನ್ನು ಹೊಂದಬೇಕಾದರೆ ಬಹು ಹಂತದ ಅರ್ಥ ವ್ಯವಸ್ಥೆಯ ಸುಧಾರಣೆಗಳು ಆಗಬೇಕಾಗಿವೆ.
ಮುದ್ರಾ ಯೋಜನೆಯ ಮೂಲಕ ಜನಸಾಮಾನ್ಯರಿಗೆ ವಿವಿಧ ರೀತಿಯ ಉದ್ದಿಮೆ ಗಳನ್ನು ಕೈಗೊಳ್ಳಲು ಅವಕಾಶ ಮಾಡಿಕೊಡಲಾಗಿದೆ. ಪರೋಕ್ಷ ತೆರಿಗೆ ಸುಧಾರಣೆ, ಕಪ್ಪುಹಣ ವಿರುದ್ಧದ ಸಮರ, ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಸುಧಾರಣೆ ಹೀಗೆ ಹಲವು ಕ್ಷೇತ್ರಗಳಲ್ಲಿ ಪರಿವರ್ತನೆ ತರಲಾಗಿದೆ. ಜನರ ಖರೀದಿ ಸಾಮರ್ಥ್ಯ ವಿಚಾರ ಪರಿಶೀಲಿಸುವುದಿದ್ದರೆ, ದೇಶದ ಈಗ ಮೂರನೇ ಸ್ಥಾನದಲ್ಲಿದೆ. ಈ ಸಾಲಿನಲ್ಲಿ ಚೀನಾ ಮೊದಲ ಸ್ಥಾನದಲ್ಲಿದ್ದರೆ, ಅಮೆರಿಕ ದ್ವಿತೀಯ ಸ್ಥಾನದಲ್ಲಿದೆ.
ಸುಧಾರಣೆಯಾಗಬೇಕಾಗಿದೆ: ಮುಂದಿನ ಐದು ವರ್ಷಗಳಲ್ಲಿ ಐದು ಶತಕೋಟಿ ಡಾಲರ್ ಮೌಲ್ಯದ ಅರ್ಥ ವ್ಯವಸ್ಥೆಯಾಗಬೇಕಾಗಿದ್ದರೆ, ಸಾಮಾನ್ಯ ಜನರ ಜೀವನ ಕ್ರಮದಲ್ಲಿ ಸುಧಾರಣೆಯಾಗಬೇಕು. ಪ್ರತಿಯೊಂದು ಕುಟುಂಬದ ಅಡುಗೆ ಮನೆ ಹೊಗೆ ರಹಿತವಾಗಿರಬೇಕು, ಮನೆಗೆ ವಿದ್ಯುತ್ ಸಂಪರ್ಕ ಸಿಗಬೇಕು, ಮಹಿಳೆಯರ ಗೌರವ, ಔನ್ನತ್ಯ ಹೆಚ್ಚುವಂತಾಗಲು ಶೌಚಾಲಯ ಇರಬೇಕು. ಈ ನಿಟ್ಟಿನಲ್ಲಿ ಸರ್ಕಾರ ಹಲವು ಕ್ರಮಗಳನ್ನು ಘೋಷಣೆ ಮಾಡಿದೆ. ಈ ನಿಟ್ಟಿನಲ್ಲಿ ಮುಂದುವರಿಯಲು ಮೂಲ ಸೌಕರ್ಯ, ಉದ್ಯೋಗ ಕ್ಷೇತ್ರ, ಸಣ್ಣ ಮತ್ತು ಮಧ್ಯಮ ಉದ್ಯೋಗ ಕ್ಷೇತ್ರದಲ್ಲಿ ಹಚ್ಚಿನ ಮೊತ್ತದ ಬಂಡವಾಳ ಅಗತ್ಯವಿದೆ.
55 ವರ್ಷ ಬೇಕಾಯಿತು: ಒಂದು ಶತಕೋಟಿ ಡಾಲರ್ ಅರ್ಥ ವ್ಯವಸ್ಥೆಯಾಗಿ ಹೊರಹೊಮ್ಮಲು ದೇಶಕ್ಕೆ 55 ವರ್ಷ ಬೇಕಾಯಿತು. ದೇಶದ ಜನರಲ್ಲಿ ಆಶೆ, ವಿಶ್ವಾಸ ಮತ್ತು ಆಕಾಂಕ್ಷೆ ತುಂಬಿರುವಾಗ ಅದಕ್ಕೆ ಮತ್ತೂ ಒಂದು ಟ್ರಿಲಿಯನ್ ಡಾಲರ್ ಮೌಲ್ಯ ಸೇರಿಸಲಾಗಿದೆ. ಹೀಗಾಗಿ, ಈ ವರ್ಷವೇ 3 ಶತಕೋಟಿ ಡಾಲರ್ ಮೌಲ್ಯದ ಅರ್ಥ ವ್ಯವಸ್ಥೆ ಎಂಬ ಗುರಿ ಸಾಧಿಸಲು ಸಾಧ್ಯವಿದೆ ಎಂದಿದೆ ಸರ್ಕಾರ.
ಕಠಿಣ ದುಡಿಮೆ: ದೇಶದ ಜನರ ಕಠಿಣ ದುಡಿಮೆಯಿಂದ ಐದು ಶತಕೋಟಿ ಡಾಲರ್ ಮೌಲ್ಯದ ಗುರಿ ಸಾಧಿಸುವ ನಿರೀಕ್ಷೆ ಇದೆ. ಏಕೆಂದರೆ ಅವರಿಗೆ ಜೀವನದಲ್ಲಿ ಅಭಿವೃದ್ಧಿಯಾಗಬೇಕು ಎಂಬ ಹಂಬಲವೂ ಇದೆ. ಅದಕ್ಕೆ ಪೂರಕವಾಗಿ ದೇಶದ ಸಂಸತ್‌ನಲ್ಲಿ ಉತ್ತಮ ನಾಯಕತ್ವವೂ ಇರುವುದರಿಂದ ಅದಕ್ಕೆ ಪೂರಕವಾಗಿ ಇರಲಿದೆ.
ಕೊಡುಗೆ ನೀಡಿವೆ: ಖಾಸಗಿ ವಲಯದಲ್ಲಿರುವ ಸಣ್ಣ, ಮಧ್ಯಮ ಅಥವಾ ಭಾರಿ ಉದ್ದಿಮೆಗಳು ಅರ್ಥ ವ್ಯವಸ್ಥೆಯ ಬೆಳವಣಿಗೆಯಲ್ಲಿ ತಮ್ಮದೇ ಆದ ಕೊಡುಗೆ ನೀಡಿವೆ. ಅಭಿವೃದ್ಧಿ ಮತ್ತು ಬೆಳವಣಿಗೆ ಎನ್ನುವುದು ದೇಶಕ್ಕೆ ಸ್ವಾತಂತ್ರ್ಯ ಬರುವುದಕ್ಕೆ ಮೊದಲು ಮತ್ತು ನಂತರದ ವರ್ಷಗಳಲ್ಲಿ ಅವಿಭಾಜ್ಯ ಅಂಗವೇ ಆಗಿದೆ. ಹೀಗಾಗಿ ಸ್ವದೇಶಿ ಎನ್ನುವ ನೀತಿ ಕೈಗಾರಿಕೆಗಳಲ್ಲಿ ಹಾಸುಹೊಕ್ಕಾಗಿದೆ. ಜತೆಗೆ ಮೇಕ್ ಇನ್ ಇಂಡಿಯಾ ಎಂಬ ಸರ್ಕಾರದ ಆಶಯವನ್ನು ಅವುಗಳು ಅರ್ಥೈಸಿಕೊಂಡಿವೆ. ನೀತಿ ಗ್ರಹಣ, ಲೈಸನ್ಸ್ ರಾಜ್, ನಿಯಂತ್ರಣಾತ್ಮಕ ದಿನಗಳು ಕಳೆದಿವೆ. ದೇಶದ ಕೈಗಾರಿಕೋದ್ಯಮವೇ ಈಗ ಉದ್ಯೋಗ ಸೃಷ್ಟಿಯ ಪ್ರಧಾನ ಕ್ಷೇತ್ರವಾಗಿದೆ. ಹೀಗಾಗಿ ಅವುಗಳ ಕೊಡುಗೆ ದೇಶದ ಅರ್ಥ ವ್ಯವಸ್ಥೆ ಮತ್ತು ಕೈಗಾರಿಕೋದ್ಯಮಕ್ಕೆ ಭಾರಿ ಮಹತ್ವದ್ದಾಗಿದೆ.
ಆರ್‌ಬಿಐ ನಿಯಂತ್ರಣಕ್ಕೆ: ಗೃಹ ನಿರ್ಮಾಣ ಕ್ಷೇತ್ರದಲ್ಲಿನ ಹಣಕಾಸು ಹರಿವಿನ ಪ್ರಮಾಣವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಮುಂದುವರಿಸಲು ಮಹತ್ವದ ಕ್ರಮ ಘೋಷಿಸಲಾಗಿದೆ. ನ್ಯಾಷನಲ್ ಹೌಸಿಂಗ್ ಬ್ಯಾಂಕ್ (ಎನ್‌ಎಚ್‌ಬಿ) ಈ ಕ್ಷೇತ್ರಕ್ಕೆ ಹಣಕಾಸು ನೀಡುತ್ತಿತ್ತು ಮತ್ತು ಈ ಕ್ಷೇತ್ರ ಹಣಕಾಸು ಪ್ರಕ್ರಿಯೆ ನಿಯಂತ್ರಿಸುತ್ತಿತ್ತು. ಇನ್ನು ಮುಂದೆ ಗೃಹ ನಿರ್ಮಾಣ ಕ್ಷೇತ್ರದ ವಿತ್ತೀಯ ನಿಯಂತ್ರಣವನ್ನು ಆರ್‌ಬಿಐಗೆ ವಹಿಸಿಕೊಳ್ಳಲು ನಿರ್ಧರಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Election Results: ಮಹಾರಾಷ್ಟ್ರ, ಝಾರ್ಖಂಡ್ ನಲ್ಲಿ ಮತ ಎಣಿಕೆ ಪ್ರಕ್ರಿಯೆ ಆರಂಭ
Govt Employees: 8ನೇ ವೇತನ ಆಯೋಗ ಶಿಫಾರಸು ಜಾರಿಯಾದರೆ ಕನಿಷ್ಠ ವೇತನ 51000 ರೂ.!
Winter Session: ಸಂಸತ್ ಅಧಿವೇಶನ ನಾಡಿದ್ದಿಂದ:”ವಕ್ಫ್’ ವಿಧೇಯಕ ಮಂಡನೆ?
Election Results: ಝಾರ್ಖಂಡ್, ಮಹಾರಾಷ್ಟ್ರದಲ್ಲಿ ಪಟ್ಟ ಯಾರಿಗೆ?
Adani ಗ್ರೂಪ್‌ಗೆ ಸಾಲ: ಜಾಗತಿಕ ಬ್ಯಾಂಕ್‌ಗಳಿಂದ ತಾತ್ಕಾಲಿಕ ಬ್ರೇಕ್?
MUST WATCH
ಹೊಸ ಸೇರ್ಪಡೆ
Election Results: ಮಹಾರಾಷ್ಟ್ರ, ಝಾರ್ಖಂಡ್ ನಲ್ಲಿ ಮತ ಎಣಿಕೆ ಪ್ರಕ್ರಿಯೆ ಆರಂಭ
ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ
BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?
Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!
Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.