ಫೋರ್ಬ್ಸ್ ನಲ್ಲಿ ತ್ರಿವಳಿ ಸ್ಟಾರ್
Team Udayavani, Jun 14, 2017, 1:23 PM IST
ಹೊಸದಿಲ್ಲಿ: ಶಾರುಖ್ ಖಾನ್- 244 ಕೋಟಿ, ಸಲ್ಮಾನ್ ಖಾನ್- 238 ಕೋಟಿ, ಅಕ್ಷಯ್ ಕುಮಾರ್ 228 ಕೋಟಿ… ಇದು ಬಾಲಿವುಡ್ ಸ್ಟಾರ್ ನಟರ ವರ್ಷದ ಆದಾಯ! 2016-17ನೇ ಸಾಲಿನ ಹೆಚ್ಚು ಸಂಭಾವನೆ ಪಡೆದ ಜಗತ್ತಿನ ಅಗ್ರ 100 ಸೆಲೆಬ್ರಿಟಿಗಳ ಪಟ್ಟಿಯನ್ನು ಫೋರ್ಬ್ಸ್ ನಿಯತಕಾಲಿಕೆ ಪ್ರಕಟಿಸಿದ್ದು, ಅದರಲ್ಲಿ ಈ ತ್ರಿವಳಿ ಸ್ಟಾರ್ಗಳು ಬಾಲಿವುಡ್ ಅನ್ನು ಪ್ರತಿನಿಧಿಸಿದ್ದಾರೆ. ಅಚ್ಚರಿಯೆಂಬಂತೆ ಬಿಗ್ ಬಿ ಅಮಿತಾಭ್ ಬಚ್ಚನ್ ಹೆಸರು ಪಟ್ಟಿಯಲ್ಲಿಲ್ಲ!
212 ಕೋಟಿ ರೂ. ಗಳಿಕೆಯೊಂದಿಗೆ 2016ರ ಫೋರ್ಬ್ಸ್ ಪಟ್ಟಿಯಲ್ಲಿ 86ನೇ ಸ್ಥಾನದಲ್ಲಿದ್ದ ಶಾರುಖ್ ಈ ಬಾರಿ 65ನೇ ಸ್ಥಾನಕ್ಕೇರಿದ್ದಾರೆ. ಹಿಂದಿನ ವರ್ಷ 202 ಕೋಟಿ ರೂ. ಗಳಿಸಿ ಹಿಂದಿನ ವರ್ಷದ ಪಟ್ಟಿಯಲ್ಲಿ 94ನೇ ಸ್ಥಾನದಲ್ಲಿದ್ದ ಅಕ್ಷಯ್ ಕುಮಾರ್, 14 ಸ್ಥಾನ ಮೇಲೇರಿ 80ನೇ ಸ್ಥಾನದಲ್ಲಿದ್ದಾರೆ. ಇನ್ನು ಸಲ್ಮಾನ್ ಖಾನ್ 71ನೇ ಸ್ಥಾನ ಪಡೆದಿದ್ದಾರೆ. ಕಳೆದ ವರ್ಷ ಫೋರ್ಬ್ಸ್ ಬಿಡುಗಡೆ ಮಾಡಿದ್ದ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರ ಪಟ್ಟಿಯಲ್ಲಿ ಕೂಡ ಅಮಿತಾಭ್, ಅಕ್ಷಯ್, ಶಾರುಖ್ ಮತ್ತು ಸಲ್ಮಾನ್ ಸ್ಥಾನ ಪಡೆದಿದ್ದರು.
“ರಯೀಸ್’ ಗೆಲುವಿನಿಂದಾಗಿ ಶಾರುಖ್ ಮೌಲ್ಯ ಹೆಚ್ಚಿದ್ದರೆ, 2016ರಲ್ಲಿ ಅತಿ ಹೆಚ್ಚು ಗಳಿಸಿದ “ಸುಲ್ತಾನ್’ ಮೂಲಕ ಸಲ್ಮಾನ್ ಖಾನ್ರ ಆದಾಯ ವೃದ್ಧಿಯಾಗಿದೆ. ಇನ್ನೊಂದೆಡೆ “ಬಾಲಿವುಡ್ ಬಾಕ್ಸ್ ಆಫೀಸ್ ದೊರೆ’ ಎಂದು ಕರೆಸಿಕೊಳ್ಳುವ ಅಕ್ಷಯ್ ಚಿತ್ರಗಳು ಎಂದಿನಂತೆ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತಿವೆ ಎಂದು ಫೋರ್ಬ್ಸ್ ಹೇಳಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.