ತ್ರಿವಳಿ ತಲಾಕ್ ಅತ್ಯಂತ ಕೆಟ್ಟ, ಅನಿಷ್ಠ ವಿಚ್ಛೇದನ ಪದ್ಧತಿ: ಸುಪ್ರೀಂ
Team Udayavani, May 12, 2017, 3:46 PM IST
ಹೊಸದಿಲ್ಲಿ : ಮುಸ್ಲಿಮರಲ್ಲಿನ ಮದುವೆಯನ್ನು ಬರ್ಖಾಸ್ತುಗೊಳಿಸುವ ತ್ರಿವಳಿ ತಲಾಕ್ ಅತ್ಯಂತ ಕೆಟ್ಟ ಹಾಗೂ ಅನಿಷ್ಟ ಪದ್ಧತಿಯಾಗಿದೆ ಎಂದು ಸುಪ್ರೀಂ ಕೋರ್ಟ್ ಇಂದು ಶುಕ್ರವಾರ ಹೇಳಿತು.
ತ್ರಿವಳಿ ತಲಾಕ್ ಮತ್ತು ನಿಖಾಹ್ ಹಲಾಲ ಪದ್ಧತಿಯ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ದೇಶದ ವಿವಿಧ ಭಾಗಗಳ ಹಲವಾರು ಮುಸ್ಲಿಂ ಮಹಿಳೆಯರು ಸಲ್ಲಿಸಿರುವ ಅರ್ಜಿಗಳ ಮೇಲಿನ ವಿಚಾರಣೆಯನ್ನು ಇಂದು ಮುಂದುವರಿಸಿದ ಸುಪ್ರೀಂ ಕೋರ್ಟ್, ಇಸ್ಲಾಂನಲ್ಲಿನ ವಿವಿಧ ವಿಚಾರ ಪಂಥಗಳು ತ್ರಿವಳಿ ತಲಾಕ್ ಕಾನೂನು ಬಾಹಿರವೆಂದು ಹೇಳಿವೆ ಎಂದು ಸುಪ್ರೀಂ ಕೋರ್ಟ್ ಹೇಳಿತು.
ತ್ರಿವಳಿ ತಲಾಕ್ ಪದ್ಧತಿಯನ್ನು ರದ್ದು ಮಾಡಬೇಕೆಂದು ಒತ್ತಾಯಿಸಿ ಮಾತನಾಡಿದ ಹಿರಿಯ ವಕೀಲ ರಾಮ್ ಜೇಠ್ಮಲಾನಿ ಅವರು ಮುಸ್ಲಿಮರಲ್ಲಿನ ಈ ವಿವಾಹ ವಿಚ್ಛೇದನ ಪದ್ಧತಿಯು ಅತ್ಯಂತ ಖಂಡನೀಯವಾಗಿದ್ದು ಮಹಿಳೆಯರಿಗೆ ಅದು ವಿಚ್ಛೇದನದಲ್ಲಿ ಸಮಾನ ಹಕ್ಕನ್ನು ನೀಡುವುದಿಲ್ಲ ಎಂದು ಹೇಳಿದರು. ಜೇಠ್ಮಲಾನಿ ಅವರು ರಾಷ್ಟ್ರೀಯ ಭದ್ರತೆಯ ಜಾಗೃತಿ ವೇದಿಕಯ ವಕೀಲರಾಗಿ ಸುಪ್ರೀಂ ಕೋರ್ಟ್ ಪೀಠದ ಮುಂದೆ ಹಾಜರಾಗಿದ್ದರು.
ವರಿಷ್ಠ ನ್ಯಾಯಮೂರ್ತಿ ಜೆ ಎಸ್ ಖೇಹರ್ ಅವರನ್ನು ಒಳಗೊಂಡ ಐದು ನ್ಯಾಯಾಧೀಶರ ಸಾಂವಿಧಾನಿಕ ಪೀಠವು ನಿನ್ನೆ ಗುರುವಾರ “ತ್ರಿವಳಿ ತಲಾಕ್ ಇಸ್ಲಾಂನಲ್ಲಿ ಮೂಲಭೂತವಾಗಿದೆಯೇ?’ ಎಂದು ಪ್ರಶ್ನಿಸಿತ್ತು. ಪೀಠದಲ್ಲಿರುವ ಇತರ ನ್ಯಾಯಮೂರ್ತಿಗಳೆಂದರೆ ಜಸ್ಟಿಸ್ ಕುರಿಯನ್ ಜೋಸೆಫ್, ಜಸ್ಟಿಸ್ ರೊಹಿನ್ಟನ್ ಫಾಲಿ ನಾರಿಮನ್, ಜಸ್ಟಿಸ್ ಉದಯ್ ಉಮೇಶ್ ಲಲಿತ್ ಮತ್ತು ಜಸ್ಟಿಸ್ ಎಸ್ ಅಬ್ದುಲ್ ನಝೀರ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
PM Modi; ಮಹಾಕುಂಭದ ಸಂದೇಶ ಏಕತೆ, ಸಮಾಜದಿಂದ ದ್ವೇಷವನ್ನು ಹೊರಹಾಕುವುದು
Delhi; ಸೋಲಿನ ಭಯದಿಂದ ಬಿಜೆಪಿ ಆಪರೇಶನ್ ಕಮಲ ಆರಂಭಿಸಿದೆ: ಅರವಿಂದ ಕೇಜ್ರಿವಾಲ್
Jhansi: ತರಗತಿಯಲ್ಲಿ ಅಶ್ಲೀಲ ವಿಡಿಯೋ ನೋಡಿದ ಶಿಕ್ಷಕ; ಗಮನಿಸಿದ ವಿದ್ಯಾರ್ಥಿಗೆ ಥಳಿತ
RBI: ಯುಪಿಐ ಮೂಲಕ ಡಿಜಿಟಲ್ ವ್ಯಾಲೆಟ್ ಹಣ ಬಳಕೆಗೆ ಅಸ್ತು
THAAD System: ಹೌತಿ ದಾಳಿ ತಡೆಗೆ ಇಸ್ರೇಲ್ನಿಂದ “ಥಾಡ್’ ವ್ಯವಸ್ಥೆ ಬಳಕೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.