ಪತ್ನಿಗೆ ತ್ರಿವಳಿ ತಲಾಖ್ ನೀಡಿದ್ದಕ್ಕೆ ವ್ಯಕ್ತಿಯ ವಿರುದ್ಧ ಕೇಸು ದಾಖಲು
Team Udayavani, May 1, 2023, 6:30 AM IST
ಗುನಾ: ಮಧ್ಯಪ್ರದೇಶದ ಗುನಾದಲ್ಲಿ ತನ್ನ ಪರಿತ್ಯಕ್ತ ಪತ್ನಿಗೆ ತ್ರಿವಳಿ ತಲಾಖ್ ನೀಡಿದ ಆರೋಪದಲ್ಲಿ ವ್ಯಕ್ತಿಯೊಬ್ಬನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
29 ವರ್ಷದ ಪತ್ನಿ ನೀಡಿರುವ ದೂರಿನ ಆಧಾರದಲ್ಲಿ ರಾಜಸ್ಥಾನದ ಬಾರಾನ್ ನಿವಾಸಿ ಜಾಹೀರ್ ಖಾನ್ ವಿರುದ್ಧ ಪ್ರಕರಣ ದಾಖಲಾಗಿದೆ. ಪತಿಯೊಂದಿಗೆ ಪದೇ ಪದೆ ಜಗಳದ ಹಿನ್ನೆಲೆಯಲ್ಲಿ 2019ರಿಂದ ಗುನಾದಲ್ಲಿರುವ ತಮ್ಮ ಪೋಷಕರ ಮನೆಯಲ್ಲಿ ಪತ್ನಿ ವಾಸವಿದ್ದಾರೆ.
“ಸ್ಥಳೀಯ ಕೋರ್ಟ್ನಲ್ಲಿ ಜೀವನ ನಿರ್ವಹಣೆಗಾಗಿ ಪತಿಯ ವಿರುದ್ಧ ಪತ್ನಿ ದಾವೆ ಹೂಡಿದ್ದಾರೆ. ಶನಿವಾರ ಕೋರ್ಟ್ ವಿಚಾರಣೆಗಾಗಿ ಆಗಮಿಸಿದ್ದ ಜಾಹೀರ್ ಖಾನ್, ಅತ್ತೆ ಮತ್ತು ಸಂಬಂಧಿಕರ ಉಪಸ್ಥಿತಿಯಲ್ಲಿ ಪತ್ನಿಗೆ ತ್ರಿವಳಿ ತಲಾಖ್ ನೀಡಿದ್ದಾರೆ’, ಎಂದು ಪೊಲೀಸರು ತಿಳಿಸಿದ್ದಾರೆ. ತತ್ಕ್ಷಣ ತ್ರಿವಳಿ ತಲಾಖ್ ಅನುಸರಿಸುವವರಿಗೆ 3 ವರ್ಷ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Adani ಗ್ರೂಪ್ಗೆ ಸಾಲ: ಜಾಗತಿಕ ಬ್ಯಾಂಕ್ಗಳಿಂದ ತಾತ್ಕಾಲಿಕ ಬ್ರೇಕ್?
India: ಕೃತಕ ಬುದ್ಧಿಮತ್ತೆ ತಜ್ಞರಿರುವ 2ನೇ ಅಗ್ರ ರಾಷ್ಟ್ರ ಭಾರತ!
Joe Biden “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್ ಕ್ಷಮೆಗೆ ವೈದ್ಯರ ಪಟ್ಟು
Defamation notice:ಮತಕ್ಕಾಗಿ ಹಣ ಆರೋಪ: ಖರ್ಗೆ,ರಾಹುಲ್ ವಿರುದ್ಧ ತಾಬ್ಡೆ 100 ಕೋಟಿ ದಾವೆ!
Adani: ಲಂಚ ಕೇಸ್; ಜಗನ್ ವಿರುದ್ಧ ಕ್ರಮಕ್ಕೆ ಸಿಎಂ ನಾಯ್ಡು ಚಿಂತನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.