ತ್ರಿಪುರ ಸಿಎಂ ಬಳಿ 3,930 ರೂ; ಈ ತನಕ IT Return ಸಲ್ಲಿಸಿಲ್ಲ
Team Udayavani, Jan 30, 2018, 7:26 PM IST
ಅಗರ್ತಲಾ : ನಂಬಿದ್ರೆ ನಂಬಿ, ಬಿಟ್ರೆ ಬಿಡಿ; ನಿರಂತರ ಐದನೇ ಬಾರಿಗೆ ಮುಖ್ಯಮಂತ್ರಿಯಾಗಲು ಸ್ಪರ್ಧಿಸುತ್ತಿರುವ ತ್ರಿಪುರ ಮುಖ್ಯಮಂತ್ರಿ ಮಾಣಿಕ್ ಸರ್ಕಾರ್ ಅವರ ಬಳಿ ಇರುವುದು ಕೇವಲ 3,930 ರೂ. ಮತ್ತು ಈ ತನಕವೂ ಅವರು ಇನ್‌ಕಮ್ ಟ್ಯಾಕ್ಸ್ ರಿಟರ್ನ್ ಸಲ್ಲಿಸಿಲ್ಲ.
ತ್ರಿಪುರ ವಿಧಾನ ಸಭೆಗೆ ಸ್ಪರ್ಧಿಸಲು ನಾಮ ಪತ್ರ ಸಲ್ಲಿಸಿರುವ ಮಾಣಿಕ್ ಸರ್ಕಾರ್ ಅವರ ಅಫಿದಾವಿತ್‌ನಲ್ಲಿ ಈ ವಿಷಯ ಬಹಿರಂಗವಾಗಿದೆ.
ಈ ಎಡಪಂಥೀಯ ನಾಯಕ ತನ್ನ ಪೂರ್ಣ ಮಾಸಿಕ ವೇತನವನ್ನು ಸಿಪಿಎಂಗೆ ದೇಣಿಗೆಯಾಗಿ ನೀಡುತ್ತಾರೆ ಮತ್ತು ಪಕ್ಷದಿಂದ ತನ್ನ ಜೀವನ ನಿರ್ವಹಣೆಗೆಂದು ತಿಂಗಳಿಗೆ 5,000 ರೂ. ಪಡೆಯುತ್ತಾರೆ.
69ರ ಹರೆಯದ ಈ ಸಿಪಿಎಂ ನಾಯಕನ ಕೈಯಲ್ಲಿ 1,520 ರೂ. ಇದೆ; ರಾಷ್ಟ್ರೀಕೃತ ಬ್ಯಾಂಕ್ ಖಾತೆಯಲ್ಲಿ 2,410 ರೂ. ಇದೆ. ಇದಕ್ಕೆ ಹೊರತಾಗಿ ಬೇರೆ ಯಾವ ಬ್ಯಾಂಕ್‌ನಲ್ಲೂ ಅವರು ಖಾತೆ ಹೊಂದಿಲ್ಲ; ಠೇವಣಿಯೂ ಇಲ್ಲ.
ಸರ್ಕಾರ್ ಅವರು ಧನಪುರ ಕ್ಷೇತ್ರದಿಂದ ಸ್ಪರ್ಧಿಸಲು ನಿನ್ನೆ ತಮ್ಮ ನಾಮಪತ್ರ ಸಲ್ಲಿಸಿದ್ದಾರೆ. ಇವರಿಗೆ ಕೃಷಿ ಭೂಮಿಯೂ ಇಲ್ಲ; ವಾಸ್ತವ್ಯದ ನಿವೇಶನವೂ ಇಲ್ಲ. ಇವರು ವಾಸಿಸಿಕೊಂಡಿರುವುದು ರಾಜ್ಯ ಸರಕಾರ ಒದಗಿಸಿರುವ ಅಧಿಕೃತ ಮುಖ್ಯಮಂತ್ರಿ ನಿವಾಸದಲ್ಲಿ.
ಮಾಣಿಕ್ ಸರ್ಕಾರ್ ಅವರ ಪತ್ನಿ ಪಾಂಚಾಲಿ ಭಟ್ಟಾಚಾರ್ಯ ಓರ್ವ ಕೇಂದ್ರ ಸರಕಾರದ ನಿವೃತ್ತ ಉದ್ಯೋಗಿ; ಇವರ ಬಳಿ ಇರುವ ನಗದು 20,140 ರೂ.; ಎರಡು ಬ್ಯಾಂಕ್ ಖಾತೆಗಳಲ್ಲಿ ಇರುವ ಹಣ ಅನುಕ್ರಮವಾಗಿ 124,101 ಮತ್ತು 86,473.78 ರೂ. ಇವರ ಹೆಸರಲ್ಲಿ ಮೂರು ನಿರಖು ಠೇವಣಿ ಇವೆ; ಅವುಗಳು ಅನುಕ್ರಮವಾಗಿ 5 ಲಕ್ಷ, 2 ಲಕ್ಷ ಮತ್ತು 2.25 ಲಕ್ಷ ರೂ. ಅಲ್ಲದೇ ಇವರ ಬಳಿ 20 ಗ್ರಾ ಚಿನ್ನಾಭರಣ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Himachal Pradesh; ಸಿಎಂಗೆ ತಂದಿದ್ದ ಸಮೋಸಾ ಮಾಯ: ಸಿಐಡಿ ತನಿಖೆ?
Minister Sudhakar: ಸೀಟ್ ಬ್ಲಾಕಿಂಗ್ ದಂಧೆ ವಿರುದ್ಧ ಕ್ರಿಮಿನಲ್ ಕೇಸ್ ಅಸ್ತ್ರ
Trump ಗೆಲ್ಲುತ್ತಿದ್ದಂತೆ ಅಮೆರಿಕ ತೊರೆಯಲು ಜನರಿಂದ ಭರದ ಸಿದ್ಧತೆ
Yogi ‘ಬಟೇಂಗೆ’ಹೇಳಿಕೆ ಒಪ್ಪಲ್ಲ ಎಂದ ಅಜಿತ್: ಮಹಾಯುತೀಲಿ ಬಿರುಕು?
Canada; ನಮ್ಮಲ್ಲಿರುವ ಎಲ್ಲ ಹಿಂದೂಗಳು ಮೋದಿ ಬೆಂಬಲಿಗರಲ್ಲ: ಟ್ರಾಡೋ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.