ಮೆರಿಟ್ ಆಧಾರಿತ ವೀಸಾಕ್ಕೆ ಟ್ರಂಪ್ ಒತ್ತು
Team Udayavani, Feb 1, 2018, 6:50 AM IST
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಧಿಕಾರಕ್ಕೇರಿದಾಗಿ ನಿಂದಲೂ ಚರ್ಚೆಯಲ್ಲಿರುವ ವಲಸೆ ನೀತಿ ಈಗ ಸ್ಪಷ್ಟ ನಿಲುವು ಪಡೆದುಕೊಂಡಿದೆ. ಎರಡು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಮೊದಲ ಬಾರಿಗೆ ಉಭಯ ಸದನಗಳನ್ನು ಉದ್ದೇಶಿಸಿ ಮಾತನಾಡಿದ ಡೊನಾಲ್ಡ್ ಟ್ರಂಪ್, ಮೆರಿಟ್ ಆಧರಿತ ವೀಸಾ ನೀತಿಯ ಪ್ರಸ್ತಾಪ ಮಾಡಿದ್ದಾರೆ. ಐಸಿಸ್ ಮತ್ತು ಉತ್ತರ ಕೊರಿಯಾವನ್ನು ನಿಯಂ ತ್ರಿಸುವ ಕುರಿತೂ ಮಾತನಾಡಿದ್ದಾರೆ.
80 ನಿಮಿಷಗಳ ಭಾಷಣದಲ್ಲಿ ಹೆಚ್ಚಿನ ಕುತೂಹಲ ಕೆರಳಿಸಿದ್ದು ವಲಸೆ ನೀತಿ. ನಾಲ್ಕು ಹಂತದ ವಲಸೆ ನೀತಿಯನ್ನು ಟ್ರಂಪ್ ಘೋಷಿಸಿದ್ದು, ಸಂಸತ್ತಿನ ಬೆಂಬಲ ಆಗ್ರಹಿಸಿದ್ದಾರೆ. ಕೇವಲ ಪ್ರತಿಭಾವಂತರಿ ಗಷ್ಟೇ ಅವಕಾಶ ನೀಡುವ ವಲಸೆ ನೀತಿಯಿಂದಾಗಿ ಭಾರತೀಯ ನೌಕರರಿಗೆ ಯಾವುದೇ ಸಮಸ್ಯೆಯಾಗದು ಎನ್ನಲಾ ಗಿದೆ. ಸದ್ಯ ವೀಸಾ ನೀಡಲು ಲಾಟರಿ ವ್ಯವಸ್ಥೆಯಿತ್ತು. ಇನ್ನೊಂದೆಡೆ ವೀಸಾ ಪಡೆದ ವ್ಯಕ್ತಿಯು ತನ್ನ ಕುಟುಂಬವನ್ನೂ ಅಮೆರಿಕಕ್ಕೆ ಕರೆದುಕೊಂಡು ಬರಬಹುದಾದ ಅವಕಾಶ ಇನ್ನು ನಿರಾಕರಿಸಲಾಗುತ್ತದೆ.
ಇದೇ ವೇಳೆ, ಮೆಕ್ಸಿಕೋದ ಅಕ್ರಮ ವಲಸಿಗರನ್ನು ವಾಪಸ್ ಕಳುಹಿಸುವ ಪ್ರಸ್ತಾ ಪವಿಲ್ಲ ಎಂದು ಟ್ರಂಪ್ ಹೇಳಿದ್ದು, ಮೆಕ್ಸಿಕೋ ಮತ್ತು ಅಮೆರಿಕದ ಗಡಿಯಲ್ಲಿ ಗೋಡೆ ನಿರ್ಮಿಸುವ ಪ್ರಸ್ತಾಪ ಮಾಡಿದ್ದಾರೆ.
ಶ್ರೀನಿವಾಸ್ ಪತ್ನಿಗೆ ಆಹ್ವಾನ: ಕಳೆದ ವರ್ಷ ಹತ್ಯೆಗೀಡಾದ ಆಂಧ್ರಪ್ರದೇಶ ಮೂಲದ ಎಂಜಿನಿಯರ್ ಶ್ರೀನಿವಾಸ್ ಕುಚಿಬೊತ್ಲಾ ಪತ್ನಿ ಸುನಯನಾ ದುಮಾ ಲಾ ರನ್ನು ಸದನಕ್ಕೆ ಟ್ರಂಪ್ ಭಾಷಣ ಕೇಳಲು ಆಹ್ವಾನಿಸಲಾಗಿತ್ತು. ಸ್ಪೀಕರ್ ಪಾಲ್ ರ್ಯಾನ್ ಸೇರಿದಂತೆ ಸಂಸತ್ ಸದಸ್ಯ ರನ್ನು ಸುನಯನಾ ಭೇಟಿ ಮಾಡಿದರು. ಅಮೆರಿಕದಲ್ಲಿ ಸುನಯನಾ ವಲಸಿಗರ ಪರವಾಗಿ ಕ್ಯಾಂಪೇನ್ ನಡೆಸುತ್ತಿದ್ದಾರೆ.
45 ಲಕ್ಷ ಜನರಿಂದ ಟ್ವೀಟ್
ಅಮೆರಿಕ ಅಧ್ಯಕ್ಷ ಟ್ರಂಪ್ ಭಾಷಣವನ್ನು ಬರೋಬ್ಬರಿ 45 ಲಕ್ಷ ಜನರು ಟ್ವೀಟ್ ಮಾಡಿದ್ದಾರೆ. ಹೀಗಾಗಿ, ಇದುವರೆಗೆ ಅತ್ಯಂತ ಹೆಚ್ಚು ಬಾರಿ ಟ್ವೀಟ್ ಮಾಡಿರುವ ಭಾಷಣ ಎಂಬ ಹೆಗ್ಗಳಿಕೆ ಅದಕ್ಕೆ ಸಿಕ್ಕಿದೆ. #ಖOಖಖೀ ಮತ್ತು #ಒಟಜಿnಠಿಖಛಿssಜಿಟn ಎಂಬ ಹ್ಯಾಶ್‌ಟ್ಯಾಗ್‌ನಲ್ಲಿ ಅದು ಟ್ರೆಂಡಿಂಗ್ ಆಗಿತ್ತು. 2017ರಲ್ಲಿ ಟ್ರಂಪ್ ಮೊದಲ ಬಾರಿಗೆ ಸಂಸತ್ ಉದ್ದೇಶಿಸಿ ಮಾತಾಡಿದ್ದಾಗ 30 ಲಕ್ಷ ಮಂದಿ ಟ್ವೀಟ್ ಮಾಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra Election: ಅಮಿತ್ ಶಾ ಅವರ ಬ್ಯಾಗ್ ಪರೀಕ್ಷಿಸಿದ ಚುನಾವಣಾ ಅಧಿಕಾರಿಗಳು
Anmol Buffalo:1500 ಕೆಜಿ ತೂಗುವ ಈ ಕೋಣದ ಬೆಲೆ ಬರೋಬ್ಬರಿ 23 ಕೋಟಿ ರೂ!
Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್ ಗೆ 10 ಕೋಟಿ ರೂಪಾಯಿ ಪಂಗನಾಮ!
Mumbai: ಲಾರೆನ್ಸ್ ಬಿಷ್ಣೋಯ್ ಹಿಟ್ ಲಿಸ್ಟ್‌ನಲ್ಲಿ ಶ್ರದ್ಧಾ ವಾಕರ್ ಹತ್ಯೆ ಆರೋಪಿ: ವರದಿ
Pollution: ದಿಲ್ಲಿಯಲ್ಲಿ ಈಗ ನಿರ್ಮಾಣಕ್ಕೆ ಬ್ರೇಕ್, ಬಸ್‌ಗಳಿಗೆ ನಿರ್ಬಂಧ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.