![Rajya Sabha: ವಿಪಕ್ಷಗಳ ತೀವ್ರ ವಿರೋಧದ ನಡುವೆ ವಕ್ಫ್ ಮಸೂದೆ ಕುರಿತ ಜೆಪಿಸಿ ವರದಿ ಮಂಡನೆ](https://www.udayavani.com/wp-content/uploads/2025/02/Board-415x249.jpg)
![Rajya Sabha: ವಿಪಕ್ಷಗಳ ತೀವ್ರ ವಿರೋಧದ ನಡುವೆ ವಕ್ಫ್ ಮಸೂದೆ ಕುರಿತ ಜೆಪಿಸಿ ವರದಿ ಮಂಡನೆ](https://www.udayavani.com/wp-content/uploads/2025/02/Board-415x249.jpg)
Team Udayavani, Jan 29, 2025, 6:08 AM IST
ವಾಷಿಂಗ್ಟನ್: ಭಾರತ, ಚೀನಾ, ಬ್ರೆಜಿಲ್‌ಗಳು ಅಮೆರಿಕದ ಸರಕುಗಳ ಮೇಲೆ ಹೆಚ್ಚಿನ ತೆರಿಗೆ ವಿಧಿಸುತ್ತಿವೆ. ಇದರಿಂದ ಅಮೆರಿಕಕ್ಕೆ ಹಾನಿಯಾಗುತ್ತಿದ್ದು, ಇವುಗಳ ಮೇಲೆ ಅಮೆರಿಕ ಹೆಚ್ಚಿನ ಸುಂಕ ವಿಧಿಸಲಿದೆ ಎಂದು ಡೊನಾಲ್ಡ್ ಟ್ರಂಪ್ ಮಂಗಳವಾರ ಹೇಳಿದ್ದಾರೆ.
“ಅಮೆರಿಕಕ್ಕೆ ಹಾನಿ ಮಾಡುವ ಹೊರದೇಶ ಮತ್ತು ಹೊರಗಿನ ಜನರಿಗೆ ನಾವು ಹೆಚ್ಚು ತೆರಿಗೆ ವಿಧಿಸುತ್ತೇವೆ. ನಮಗೆ ಅದು ಹಾನಿ ಎನಿಸುತ್ತದೆ. ಮೂಲಭೂತವಾಗಿ ಆ ದೇಶಗಳು ಅವರಿಗೆ ಒಳ್ಳೆಯದು ಮಾಡಿಕೊಳ್ಳುತ್ತಿರುತ್ತಾರೆ. ಚೀನಾ ನಮ್ಮ ವಸ್ತುಗಳ ಮೇಲೆ ಪ್ರಚಂಡ ತೆರಿಗೆಗಳನ್ನು ವಿಧಿಸುತ್ತಿದೆ. ಭಾರತ ಮತ್ತು ಬ್ರೆಜಿಲ್ ಸಹ ಇದೇ ದಾರಿಯನ್ನು ಅನುಸರಿಸುತ್ತಿವೆ. ಇನ್ಮುಂದೆ ಹೀಗಾಗಲು ಬಿಡುವುದಿಲ್ಲ. ನಮಗೆ ಅಮೆರಿಕವೇ ಮೊದಲು’ ಎಂದು ರಿಪಬ್ಲಿಕನ್ನರನ್ನುದ್ದೇಶಿ ಮಾತನಾಡುವ ಸಮಯದಲ್ಲಿ ಅವರು ಹೇಳಿದರು.
ಹಿಂದೆಂದಿಗಿಂತಲೂ ಅಮೆರಿಕವನ್ನು ಶ್ರೀಮಂತಗೊಳಿಸಲು ಇದು ಸಕಾಲ. ನಮ್ಮ ಬೊಕ್ಕಸಕ್ಕೆ ಹಣ ಬರಲಿದೆ. ಅಮೆರಿಕ ಮತ್ತೆ ಶ್ರೀಮಂತವಾಗಲಿದೆ ಎಂದು ಅವರು ಹೇಳಿದರು. ಭಾರತವನ್ನು ಒಳಗೊಂಡ ಬ್ರಿಕ್ಸ್ ರಾಷ್ಟ್ರಗಳ ಮೇಲೆ ಶೇ.100ರಷ್ಟು ತೆರಿಗೆ ವಿಧಿಸುವುದಾಗಿ ಈ ಹಿಂದೆಯೇ ಟ್ರಂಪ್ ಬೆದರಿಕೆ ಒಡ್ಡಿದ್ದರು.
ಶೇ.100ರಷ್ಟು ಸುಂಕ ವಿಧಿಸುವೆ ಎಂದಿದ್ದರು
ಬ್ರಿಕ್ಸ್ ರಾಷ್ಟ್ರಗಳು ಡಾಲರ್‌ಗೆ ಬದಲಿಗೆ ಪ್ರತ್ಯೇಕ ಕರೆನ್ಸಿ ಬಳಸಲು ಆರಂಭಿಸಿದರು. ಶೇ.100ರಷ್ಟು ಸುಂಕ ವಿಧಿಸುವುದಾಗಿಯೂ ಡೊನಾಲ್ಡ್‌ಟ್ರಂಪ್ ಎಚ್ಚರಿಸಿದ್ದರು. ಅಲ್ಲದೇ, ಅಧಿಕಾರ ಸ್ವೀಕರಿಸುತ್ತಿದ್ದಂತೆ ಈ ಮಾತನ್ನು ಮತ್ತೆ ಪುನರುಚ್ಚಾರ ಮಾಡಿದ್ದರು. ಇದೀಗ ನೇರವಾಗಿಯೇ ಭಾರತದ ಹೆಸರನ್ನು ಉಲ್ಲೇಖೀಸಿದ್ದಾರೆ. ಒಂದು ವೇಳೆ, ಸುಂಕವನ್ನು ತಪ್ಪಿಸಿಕೊಳ್ಳಬೇಕು ಎಂದರೆ ಈ ರಾಷ್ಟ್ರಗಳು ಅಮೆರಿಕದಲ್ಲೇ ತಮ್ಮ ಉತ್ಪಾದನಾ ಘಟಕಗಳನ್ನು ಆರಂಭಿಸಬೇಕು. ಔಷಧೀಯ ಕಂಪನಿಗಳು, ಸೆಮಿಕಂಡಕ್ಟರ್ ಮತ್ತು ಉಕ್ಕು ಸಂಬಂಧಿ ಕಂಪನಿಗಳು ಅಮೆರಿಕದಲ್ಲಿ ಉತ್ಪಾದನಾ ಘಟಕಗಳನ್ನು ಆರಂಭಿಸಲು ಪ್ರೋತ್ಸಾಹಿಸಲಾಗುವುದು ಎಂದೂ ಹೇಳಿದ್ದರು.
ಆದಾಯ ತೆರಿಗೆ ರದ್ದು ಮಾಡಲು ಟ್ರಂಪ್ ಚಿಂತನೆ
ವಾಷಿಂಗ್ಟನ್: ಅಮೆರಿಕದ ಜನರ ಆದಾಯವನ್ನು ಹೆಚ್ಚು ಮಾಡುವ ಉದ್ದೇಶದಿಂದ ಆದಾಯ ತೆರಿಗೆಯನ್ನು ರದ್ದು ಮಾಡಲು ಡೊನಾಲ್ಡ್ ಟ್ರಂಪ್ ಪ್ರಸ್ತಾವನೆಯನ್ನು ಸಲ್ಲಿಸಿದ್ದಾರೆ. ಈ ನಿರ್ಧಾರದಿಂದ ಅಮೆರಿಕ ಮತ್ತೂಮ್ಮೆ ಶ್ರೀಮಂತಗೊಳ್ಳುತ್ತದೆ ಎಂದು ಅವರು ಹೇಳಿದರು. ಇದಕ್ಕಾಗಿ ನಾವು ಅಮೆರಿಕದ ಜನರ ಮೇಲೆ ತೆರಿಗೆ ವಿಧಿಸುವ ಬದಲು ವಿದೇಶಗಳ ಮೇಲಷ್ಟೇ ತೆರಿಗೆ ವಿಧಿಸಬೇಕು ಎಂದು ಅವರು ಹೇಳಿದರು.
Rajya Sabha: ವಿಪಕ್ಷಗಳ ತೀವ್ರ ವಿರೋಧದ ನಡುವೆ ವಕ್ಫ್ ಮಸೂದೆ ಕುರಿತ ಜೆಪಿಸಿ ವರದಿ ಮಂಡನೆ
Tirupati: ತಿರುಮಲ ಬೆಟ್ಟದ ಸಮೀಪ ಮುಮ್ತಾಜ್ ಹೋಟೆಲ್ ನಿರ್ಮಾಣ; ಸಾಧುಗಳ ಆಕ್ರೋಶ
Video: ಹೇಳಿಕೆ ಇಲ್ಲದಿದ್ದರೂ ಮದುವೆ ಹಾಲ್ ಗೆ ಬಂದು ಸರ್ಪ್ರೈಸ್ ನೀಡಿದ ಚಿರತೆ…
Jamui: ಸಾಲ ರಿಕವರಿಗೆ ಬಂದ ಏಜೆಂಟ್ ನನ್ನೇ ಮದುವೆಯಾದ ವಿವಾಹಿತ ಮಹಿಳೆ!
U.P: ರಿಷಭ್ ಪಂತ್ ಜೀವ ಉಳಿಸಿದ್ದ ರಜತ್ ಗೆಳತಿಯೊಂದಿಗೆ ಆತ್ಮಹ*ತ್ಯೆಗೆ ಯತ್ನ: ಆಗಿದ್ದೇನು?
Rajya Sabha: ವಿಪಕ್ಷಗಳ ತೀವ್ರ ವಿರೋಧದ ನಡುವೆ ವಕ್ಫ್ ಮಸೂದೆ ಕುರಿತ ಜೆಪಿಸಿ ವರದಿ ಮಂಡನೆ
Chikkamagaluru: ಕರ್ತವ್ಯಲೋಪ ಹಿನ್ನೆಲೆ ಶೃಂಗೇರಿ ಪಿ.ಎಸ್.ಐ. ಅಮಾನತು
Muddebihal: ಮದವೇರಿದ್ದ ಎಮ್ಮೆ ಹಿಡಿಯಲು ಒಂದೂವರೆ ಗಂಟೆ ಕಾರ್ಯಾಚರಣೆ !
Tirupati: ತಿರುಮಲ ಬೆಟ್ಟದ ಸಮೀಪ ಮುಮ್ತಾಜ್ ಹೋಟೆಲ್ ನಿರ್ಮಾಣ; ಸಾಧುಗಳ ಆಕ್ರೋಶ
Namma Metro: ದರ ಏರಿಕೆ ಎಫೆಕ್ಟ್: ಮೆಟ್ರೋ ಪ್ರಯಾಣ ಕುಸಿತ!
You seem to have an Ad Blocker on.
To continue reading, please turn it off or whitelist Udayavani.