ಹರಿಯಾಣದ ಈ ಗ್ರಾಮದ ಮಹಿಳೆಯರಿಂದ ಟ್ರಂಪ್ ಪಡೆಯಲಿದ್ದಾರೆ 1001 ರಾಖಿ
Team Udayavani, Aug 5, 2017, 5:52 PM IST
ಹೊಸದಿಲ್ಲಿ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೆಸರನ್ನು ಸಾಂಕೇತಿಕವಾಗಿ ಹೊಂದಿರುವ ಹರಿಯಾಣದ ಮೇವಾತ್ ಪ್ರಾಂತ್ಯದ ಮರೋರ ಗ್ರಾಮದ ಮಹಿಳೆಯರು ಟ್ರಂಪ್ ಅವರಿಗೆ 1001 ರಾಖೀಗಳನ್ನು ಕಳುಹಿಸಲಿದ್ದಾರೆ.
ಇದೇ ರೀತಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ 501 ರಾಖೀಗಳನ್ನು ಕಳುಹಿಸುತ್ತಿದ್ದಾರೆ. ಇವರಿಬ್ಬರನ್ನೂ ಈ ಗ್ರಾಮದ ಮಹಿಳೆಯರು ತಮ್ಮ ಅಣ್ಣನೆಂಬ ಗೌರವಭಾವದಿಂದ ರಾಖೀ ಕಳುಹಿಸುತ್ತಿದ್ದಾರೆ.
ಮರೋರ ಗ್ರಾಮವನ್ನು ಕೆಲ ಸಮಯದ ಹಿಂದೆ ದತ್ತು ತೆಗೆದುಕೊಂಡಿದ್ದ ಸುಲಭ್ ಇಂಟರ್‌ನ್ಯಾಶನಲ್ ಸೋಶಿಯಲ್ ಸರ್ವಿಸ್ ಆರ್ಗನೈಸೇಶನ್ (ಸಿಸ್ಕೋ) ಮುಖ್ಯಸ್ಥ ಬಿಂದೇಶ್ವರ್ ಪಾಠಕ್ ಅವರು ಈ ಗ್ರಾಮಕ್ಕೆ “ಟ್ರಂಪ್ ಗ್ರಾಮ’ ವೆಂದು ಹೆಸರಿಟ್ಟಿದ್ದರು.
ಹೀಗೆ ನಾಮಕರಣ ಮಾಡುವ ಮೂಲಕ ಭಾರತ – ಅಮೆರಿಕ ನುಡವಿನ ಬಾಂಧವ್ಯ ಬಲಿಷ್ಠವಾಗಲೆಂಬ ಆಶಯ ಮರೋರ ಗ್ರಾಮದ ಜನರದ್ದಾಗಿತ್ತು.
ಆದರೆ ಜಿಲ್ಲಾಡಳಿತವು “ಟ್ರಂಪ್ ಗ್ರಾಮ’ವೆಂದು ನಾಮಕರಣ ಮಾಡುವುದು ಕಾನೂನು ಪ್ರಕಾರ ಸರಿಯಲ್ಲ ಎಂದು ಹೇಳಿದ ಬಳಿಕ ಆ ಹೆಸರನ್ನು ಮತ್ತು ಫಲಕಗಳನ್ನು ತೆಗೆಯಲಾಗಿತ್ತು.
ಹಾಗಿದ್ದರೂ ಈಗಲೂ ಜನರ ಬಾಯಲ್ಲಿ ಮರೋರ “ಟ್ರಂಪ್ ಗ್ರಾಮ’ವೆಂದೇ ಖ್ಯಾತವಾಗಿದೆ. ಸುಮಾರು 1,800 ಜನಸಂಖ್ಯೆಯನ್ನು ಹೊಂದಿರುವ ಈ ಗ್ರಾಮ ಗುರ್ಗಾಂವ್‌ನಿಂದ 60 ಕಿಮೀ. ದೂರದಲ್ಲಿದ್ದು ಪುನಹಾನಾ ತೆಹಶೀಲ್ ವ್ಯಾಪ್ತಿಗೆ ಒಳಪಡುತ್ತದೆ.
ಪಾಠಕ್ ಅವರ ಎನ್‌ಜಿಓ ಮರೋರ ಗ್ರಾಮದ ಮಹಿಳೆಯರು ಮತ್ತು ಹುಡುಗಿಯರಿಗಾಗಿ ಅನೇಕ ಬಗೆಯ ಸಮಾಜ ಕಲ್ಯಾಣ ಕಾರ್ಯಕ್ರಮಗಳನ್ನು ಕೈಗೊಳ್ಳುತ್ತಿದ್ದು ಗ್ರಾಮಸ್ಥರಲ್ಲಿ ಜನಪ್ರಿಯವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Politics; ಮತಕ್ಕಾಗಿ ಮುಸ್ಲಿಮರನ್ನು ಒಡೆವ ಕೆಲಸ ಕಾಂಗ್ರೆಸ್ ಮಾಡುತ್ತಿದೆ: ಬಿಜೆಪಿ
Maha Election; ಚು.ಆಯೋಗದಿಂದ ಉದ್ಧವ್ ಠಾಕ್ರೆ ಬ್ಯಾಗ್ ಪರಿಶೀಲನೆ, ವಿವಾದ
Manipura: ಇಬ್ಬರು ಶವ ಪತ್ತೆ, ಮಕ್ಕಳು ಸೇರಿ 6 ಮಂದೆ ಕಾಣೆ
ದಾವೂದ್, ನಟ ಸಲ್ಮಾನ್ ಸಂಪರ್ಕ ಇದ್ದಿದ್ದಕ್ಕೆ ಸಿದ್ಧಿಕಿ ಹತ್ಯೆ: ಶೂಟರ್
Ranchi: ವಕ್ಫ್ ಮಂಡಳಿಯು ಕರ್ನಾಟಕದಲ್ಲಿ ದೇಗುಲ, ರೈತರ ಭೂಮಿಯ ಕಸಿದಿದೆ: ಅಮಿತ್ ಶಾ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.