ಪತ್ನಿಯರ ಕೆಲಸಕ್ಕೆ ಕೊಕ್
Team Udayavani, Dec 17, 2017, 6:05 AM IST
ವಾಷಿಂಗ್ಟನ್: ಮಾಜಿ ಅಧ್ಯಕ್ಷ ಒಬಾಮಾ ಆಡಳಿತಾವಧಿಯಲ್ಲಿನ ಎಚ್-1ಬಿ ವೀಸಾ ನಿಯಮಗಳಲ್ಲಿನ ಒಂದೊಂದೇ ಅಂಶಗಳಿಗೆ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬ್ರೇಕ್ ಹಾಕುತ್ತ ಬಂದಿದ್ದು, ಇದೀಗ ಎಚ್-1ಬಿ ಹೊಂದಿರುವವರ ಪತ್ನಿಯಂದಿರು ಕೆಲಸ ಕಳೆದುಕೊಳ್ಳುವ ಆತಂಕ ಸೃಷ್ಟಿಯಾಗಿದೆ.
ಎಚ್-1ಬಿ ವೀಸಾ ಹೊಂದಿರುವ ವ್ಯಕ್ತಿಯ ಪತಿ ಅಥವಾ ಪತ್ನಿಯೂ ಕೆಲಸ ಮಾಡಲು ಒಬಾಮಾ ಅವರು ನೀಡಿದ್ದ ಅನುಮತಿಯನ್ನು ಇದೀಗ ಟ್ರಂಪ್ ಹಿಂಪಡೆಯಲು ಮುಂದಾಗಿ ದ್ದಾರೆ. ಇದು ಜಾರಿಗೆ ಬಂದಲ್ಲಿ ಸಾವಿರಾರು ಎಚ್-1ಬಿ ವೀಸಾದಾರ ಭಾರತೀಯರು ಕೆಲಸ ಕಳೆದುಕೊಳ್ಳಲಿದ್ದಾರೆ. ಇದು ಸಹಜವಾಗಿ ಅನಿ ವಾಸಿ ಭಾರತೀಯರಲ್ಲಿ ಆತಂಕದ ಛಾಯೆ ಮೂಡಿಸಿದೆ. ಒಬಾಮಾ ಆಡಳಿತಾವಧಿಯಲ್ಲಿ ಎಚ್-4 ವೀಸಾ ಪಡೆದು ಪತ್ನಿಯರೂ ಕೆಲಸ ಮಾಡಲು ಅವಕಾಶವಿತ್ತು. 2016ರಲ್ಲಿ ಎಚ್-4 ವೀಸಾ ಪಡೆದ 41,000ಕ್ಕೂ ಹೆಚ್ಚು ಮಂದಿ ಕೆಲಸ ಮಾಡುತ್ತಿದ್ದರು. ಈ ವರ್ಷ 36,000 ಮಂದಿಗಷ್ಟೇ ಎಚ್-4 ವೀಸಾದಡಿ ಜೂನ್‌ವರೆಗೆ ಕೆಲಸ ಮಾಡಲು ಅವಕಾಶ ನೀಡಲಾಗಿದೆ.
ಅಮೆರಿಕದಲ್ಲಿ ಎಚ್-1ಬಿ ವೀಸಾದಡಿ ಉದ್ಯೋಗದಲ್ಲಿರುವ ವಿದೇಶಿಗರ ಪೈಕಿ ಭಾರತ ಹಾಗೂ ಚೀನದವರೇ ಜಾಸ್ತಿ ಇದ್ದಾರೆ. ಇದೀಗ ಎಚ್-1ಬಿ ವೀಸಾ ಪಡೆದವರೊಬ್ಬರೇ ಕೆಲಸ ಹೊಂದಿರಬೇಕು, ಪತ್ನಿ ಹಾಗೂ ಮಕ್ಕಳಿಗೆ ಕೆಲಸ ಮಾಡಲು ಅನುಮತಿ ನೀಡಲಾಗದು ಎಂಬ ನಿಯಮ ಜಾರಿಗೆ ಅಮೆರಿಕ ವಿದೇಶಾಂಗ ಇಲಾಖೆ ಮುಂದಾಗಿದೆ. ಇದೀಗ ಪ್ರಸ್ತಾವನೆಯ ಹಂತದಲ್ಲಿದೆ.
ತೆರಿಗೆ ಪದ್ಧತಿಯಲ್ಲಿ ಬದಲಾವಣೆ: ಅಮೆರಿಕದಲ್ಲಿ ಸದ್ಯಕ್ಕೆ ಚಾಲ್ತಿಯಲ್ಲಿರುವ ತೆರಿಗೆ ಪದ್ಧತಿಯಲ್ಲಿ ಒಂದಿಷ್ಟು ಬದಲಾವಣೆ ತರಲು ಟ್ರಂಪ್ ಸರಕಾರ ಮುಂದಾಗಿದ್ದು, ರಿಪಬ್ಲಿಕ ನ್ನರಿಂದಲೂ ಸಮ್ಮತಿ ವ್ಯಕ್ತವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Govt Employees: 8ನೇ ವೇತನ ಆಯೋಗ ಶಿಫಾರಸು ಜಾರಿಯಾದರೆ ಕನಿಷ್ಠ ವೇತನ 51000 ರೂ.!
Winter Session: ಸಂಸತ್ ಅಧಿವೇಶನ ನಾಡಿದ್ದಿಂದ:”ವಕ್ಫ್’ ವಿಧೇಯಕ ಮಂಡನೆ?
Election Results: ಝಾರ್ಖಂಡ್, ಮಹಾರಾಷ್ಟ್ರದಲ್ಲಿ ಪಟ್ಟ ಯಾರಿಗೆ?
Adani ಗ್ರೂಪ್‌ಗೆ ಸಾಲ: ಜಾಗತಿಕ ಬ್ಯಾಂಕ್‌ಗಳಿಂದ ತಾತ್ಕಾಲಿಕ ಬ್ರೇಕ್?
India: ಕೃತಕ ಬುದ್ಧಿಮತ್ತೆ ತಜ್ಞರಿರುವ 2ನೇ ಅಗ್ರ ರಾಷ್ಟ್ರ ಭಾರತ!
MUST WATCH
ಹೊಸ ಸೇರ್ಪಡೆ
BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?
Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!
Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ
Financial Burden: ಶಾಲಾ ಶಿಕ್ಷಕರಿಗೆ ಮೊಟ್ಟೆ ತಲೆನೋವು!
Naxal Activity: ಮಲೆನಾಡಿನವರೊಂದಿಗೆ ಆತ್ಮೀಯವಾಗಿ ಬೆರೆಯುತ್ತಿದ್ದ ವಿಕ್ರಂ ಗೌಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.