ಟ್ರಂಪ್ ಆಗಮನ: ಎಲ್ಲೆಲ್ಲೂ ಭಾರೀ ಬಿಗಿಭದ್ರತೆ
Team Udayavani, Feb 23, 2020, 10:10 PM IST
ನವದೆಹಲಿ: ಟ್ರಂಪ್ ಭೇಟಿ ನೀಡಲಿರುವ ಅಹ್ಮದಾಬಾದ್, ದೆಹಲಿ ಹಾಗೂ ಆಗ್ರಾ ನಗರಗಳಿಗೆ ಅಭೂತಪೂರ್ವ ಬಿಗಿಭದ್ರತೆ ಒದಗಿಸಲಾಗಿದೆ. ಮೊದಲಿಗೆ ಅವರು ಆಗಮಿಸುವ ಅಹ್ಮದಾಬಾದ್‌ನಲ್ಲಿ ಭದ್ರತೆಗಾಗಿ 10,000 ಪೊಲೀಸರನ್ನು ನಿಯೋಜಿಸಲಾಗಿದೆ. ಇವರ ಮೇಲುಸ್ತುವಾರಿಗೆ 25 ಐಪಿಎಸ್ ಪೊಲೀಸ್ ಅಧಿಕಾರಿಗಳು ಇರಲಿದ್ದಾರೆ.
ಜೊತೆಗೆ ಅಮೆರಿಕದ ಗುಪ್ತಚರ ಇಲಾಖೆಯ ಸಿಬ್ಬಂದಿ, ಭಾರತದ ರಾಷ್ಟ್ರೀಯ ಭದ್ರತಾ ಪಡೆ (ಎನ್‌ಎಸ್‌ಜಿ), ವಿಶೇಷ ಭದ್ರತಾ ಪಡೆಗಳು, ಕ್ಷಿಪ್ರ ಕಾರ್ಯಪಡೆ, ಗುಜರಾತ್ ರಾಜ್ಯದ ಪೊಲೀಸ್ ಸಶಸ್ತ್ರ ಮೀಸಲು ಪಡೆ, ಚೇತಕ್ ಕಮಾಂಡೊ, ಉಗ್ರ ನಿಗ್ರಹ ದಳ, ಬಾಂಬ್ ಪತ್ತೆ ಹಾಗೂ ನಿಷ್ಕ್ರಿಯ ದಳಗಳನ್ನು ನಿಯೋಜಿಸಲಾಗಿದೆ. ರಾಷ್ಟ್ರ ರಾಜಧಾನಿ ದೆಹಲಿ ಹಾಗೂ ಆಗ್ರಾದಲ್ಲೂ ಬಿಗಿಭದ್ರತೆ ಕೈಗೊಳ್ಳಲಾಗಿದೆ.
ಟ್ರಂಪ್ ಉಳಿದುಕೊಳ್ಳಲಿರುವ ದೆಹಲಿಯ ಐಟಿಸಿ ಮೌರ್ಯ ಹೋಟೆಲ್‌ಗೆ ಸೇನೆ ಹಾಗೂ ಅರೆಸೇನಾ ಪಡೆಗಳನ್ನು ನಿಯೋಜಿಸಲಾಗಿದೆ. ಹೋಟೆಲಿನ ಐಶಾರಾಮಿ ಸೂಟ್‌ನಲ್ಲಿ (ಇದರ ಹೆಸರು ಚಾಣಕ್ಯ) ಟ್ರಂಪ್ ಕುಟುಂಬ ವಾಸ್ತವ್ಯ ಹೂಡಲಿದ್ದು, ಅದರಲ್ಲಿ ವಿಶೇಷ ಸ್ಪಾ ಮತ್ತು ಆಹಾರ ಪರೀûಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.
ದೇಸೀ ಖ್ಯಾದ್ಯದ ರುಚಿ:
ಅಹ್ಮದಾಬಾದ್‌ನಲ್ಲಿ ಟ್ರಂಪ್ ಅವರಿಗೆ ಕೋಸುಗಡ್ಡೆಯ ಸಮೋಸಾ, ಗುಜರಾತ್‌ನ ಖ್ಯಾತ ತಿನಿಸಾದ ಖಮನ್ ಹಾಗೂ ಬಹುಧಾನ್ಯದ ರೋಟಿಗಳನ್ನು ನೀಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ವೈವಿಧ್ಯ ಸಂಸ್ಕೃತಿಯ ದರುಶನ:
ಸಾಬರಮತಿ ಆಶ್ರಮದಿಂದ ನೇರವಾಗಿ ಮೊಟೇರಾ ಕ್ರಿಕೆಟ್ ಕ್ರೀಡಾಂಗಣಕ್ಕೆ ಮೋದಿ ಮತ್ತು ಟ್ರಂಪ್ ರೋಡ್ ಶೋ ಮೂಲಕ ಸಾಗಲಿದ್ದಾರೆ. ರಸ್ತೆಯ ಎರಡೂ ಬದಿಯಲ್ಲಿ 28 ವಿಶಾಲ ವೇದಿಕೆಗಳನ್ನು ನಿರ್ಮಿಸಲಾಗಿದ್ದು, ವಿವಿಧ ರಾಜ್ಯಗಳ ಕಲಾವಿದರು ತಮ್ಮ ರಾಜ್ಯಗಳ ಸಂಸ್ಕೃತಿಯನ್ನು ಸಾರುವ ನೃತ್ಯ, ಗಾಯನ ಹಾಗೂ ಇನ್ನಿತರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಲಿದ್ದಾರೆ.
ಮಹತ್ವದ ವಿಚಾರಗಳು ಚರ್ಚೆಯಾಗಲಿ: ಕಾಂಗ್ರೆಸ್
ಈ ಬಾರಿಯ ಟ್ರಂಪ್ ಭೇಟಿ ವೇಳೆ, ಎಚ್-1ಬಿ ವೀಸಾ, ಜಿಎಸ್‌ಪಿ ಸ್ಥಾನಮಾನ ಹಾಗೂ ತಾಲಿಬಾನ್ ಉಗ್ರರ ಸಮಸ್ಯೆ ಬಗ್ಗೆ ಚರ್ಚೆ ನಡೆಸುವಂತೆ ಪ್ರಧಾನಿ ಮೋದಿ ಅವರನ್ನು ಪ್ರಮುಖ ವಿಪಕ್ಷವಾದ ಕಾಂಗ್ರೆಸ್ ಆಗ್ರಹಿಸಿದೆ. 21 ಸಾವಿರ ಕೋಟಿ ರೂ. ರಕ್ಷಣಾ ಸಾಮಗ್ರಿಗಳನ್ನು ಅಮೆರಿಕದಿಂದ ಖರೀದಿಸುವ ಒಪ್ಪಂದಕ್ಕೆ ಪ್ರತಿಯಾಗಿ ಅಗ್ಗದಲ್ಲಿ ಕಚ್ಚಾ ತೈಲ ನೀಡುವಂತೆ ಟ್ರಂಪ್ ಮೇಲೆ ಮೋದಿ ಒತ್ತಡ ಹೇರಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಬಾಹುಬಲಿಯಾದ ಟ್ರಂಪ್!
ಭಾರತದ ಭೇಟಿಗಾಗಿ ಎದುರು ನೋಡುತ್ತಿರುವುದಾಗಿ ಟ್ವೀಟ್ ಮಾಡಿರುವ ಟ್ರಂಪ್, ಈ ಕಿರು ಸಂದೇಶದ ಜೊತೆಗೆ ಭಾರತ-ಅಮೆರಿಕ ಬಾಂಧವ್ಯವನ್ನು ತೋರ್ಪಡಿಸುವ 81 ಸೆಕೆಂಡ್‌ಗಳ ವಿಡಿಯೋ ಕ್ಲಿಪ್‌ವೊಂದನ್ನು ಟ್ವೀಟ್ ಮಾಡಿದ್ದಾರೆ. ಇದು 2018ರ ಬಂಪರ್ ಹಿಟ್ ಚಿತ್ರವಾದ “ಬಾಹುಬಲಿ’ ಸಿನಿಮಾದ ದೃಶ್ಯಗಳನ್ನು ಮಾಸ್ಕ್ ತಂತ್ರಜ್ಞಾನದಡಿ ತಿದ್ದುಪಡಿ ಮಾಡಿ, ನಾಯಕ ಪ್ರಭಾಸ್ ಅವರ ಪಾತ್ರಕ್ಕೆ ಟ್ರಂಪ್ ಅವರ ಮುಖ ಜೋಡಿಸಲಾಗಿದೆ. ವಿಡಿಯೋದಲ್ಲಿ, ಟ್ರಂಪ್ ಅವರೇ ಭಾರತದ ಶತ್ರುಗಳನ್ನು ಸದೆಬಡಿದು ಬಂದು ಮೋದಿಯವರಿಗೆ ಕಮಲದ ಹೂಗಳನ್ನು ಸಮರ್ಪಿಸಿದ ರೀತಿಯಲ್ಲಿ ತೋರ್ಪಡಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi pollution:ಪ್ರಾಣಿಗಳಲ್ಲಿ ಹೆಚ್ಚಿದ ಶ್ವಾಸ ಸಂಬಂಧಿ ಕಾಯಿಲೆ
BJP; ಅಭಿವೃದ್ಧಿ, ಉತ್ತಮ ಆಡಳಿತ ಗೆದ್ದೇ ಗೆಲ್ಲುತ್ತದೆ: ಜಯಕ್ಕೆ ಪ್ರಧಾನಿ ಬಣ್ಣನೆ
Adani; 2,200 ಕೋಟಿ ರೂ. ಲಂಚ: ಅಮೆರಿಕ ಸಮನ್ಸ್
Tour: ಮೂರು ದೇಶ ಪ್ರವಾಸ: ಪ್ರಧಾನಿ ಮೋದಿ 31 ದ್ವಿಪಕ್ಷೀಯ ಸಭೆಗಳು!
Assembly bypolls; 14 ರಾಜ್ಯಗಳ 48 ಸ್ಥಾನಗಳ ಗೆಲುವಿನ ವಿವರ ಇಲ್ಲಿದೆ: ಎನ್‌ಡಿಎ ಮೇಲುಗೈ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Laparoscopic surgery: ಸಂತಾನೋತ್ಪತ್ತಿ ಹೆಚ್ಚಿಸುವ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ
Renukaswamy Case: ಹತ್ಯೆ ಸ್ಥಳದಲ್ಲಿ ನಟ ದರ್ಶನ್: ಫೋಟೋ ಸಾಕ್ಷ್ಯ
Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ
Subhramanya: ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದ ಸೇವೆಗಳಲ್ಲಿ ವ್ಯತ್ಯಯ
Health Issue: ಸರ್ಜರಿಗಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗುವೆ: ನಟ ಶಿವರಾಜ್‌ಕುಮಾರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.