ಅಮೆರಿಕ ನಿಯೋಗಕ್ಕೆ ಟ್ರಂಪ್ ಪುತ್ರಿ ಸಾರಥ್ಯ
Team Udayavani, Nov 28, 2017, 6:55 AM IST
ಹೈದರಾಬಾದ್: ಮಂಗಳವಾರದಿಂದ ಆರಂಭವಾಗಲಿರುವ 3 ದಿನಗಳ ಜಾಗತಿಕ ಉದ್ಯಮಶೀಲತೆ ಸಮ್ಮೇಳನ(ಜಿಇಎಸ್)ಕ್ಕೆ ಹೈದರಾಬಾದ್ ಸಿದ್ಧವಾಗಿದೆ. ಭಾರತ ಮತ್ತು ಅಮೆರಿಕ ಜಂಟಿಯಾಗಿ ಆಯೋಜಿಸಿರುವ ಈ ಸಮ್ಮೇಳನಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುತ್ರಿ, ಅಧ್ಯಕ್ಷೀಯ ಸಲಹೆಗಾರ್ತಿ ಇವಾಂಕಾ ಟ್ರಂಪ್ ಅಮೆರಿಕದ ನಿಯೋಗವನ್ನು ಮುನ್ನೆಡೆಸಲಿದ್ದಾರೆ.
ಈ ಕಾರ್ಯಕ್ರಮದ ಹಿನ್ನೆಲೆಯಲ್ಲಿ ತೆಲಂಗಾಣ ಸರ್ಕಾರ ನಗರವನ್ನು ಸುಂದರಗೊಳಿಸಲು ಮತ್ತು ಕಾರ್ಯಕ್ರಮ ಆಯೋಜನೆಗೆಂದೇ ಹಣ ಬಿಡುಗಡೆ ಮಾಡಿದೆ. 10,400 ಭದ್ರತಾ ಸಿಬ್ಬಂದಿಯನ್ನು ನಗರಾದ್ಯಂತ ನಿಯೋಜಿಸಲಾಗಿದೆ. ಈ ಕಾರ್ಯಕ್ರಮ ಯಶಸ್ವಿಯಾಗಿಸಲು ಎಲ್ಲಾ ಅಗತ್ಯ ಕ್ರಮಗಳನ್ನೂ ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಶಕ್ತಿ ಮತ್ತು ಮೂಲಸೌಕರ್ಯ, ಆರೋಗ್ಯ ಮತ್ತು ಜೀವ ವಿಜ್ಞಾನ, ಆರ್ಥಿಕ ತಂತ್ರಜ್ಞಾನ ಮತ್ತು ಡಿಜಿಟಲ್ ಆರ್ಥಿಕತೆ ಎಂಬ 4 ವಿಷಯಾಧಾರಿತ ಕ್ಷೇತ್ರಗಳು ಈ ಸಮ್ಮೇಳನ ಪ್ರಮುಖ ವಸ್ತುಗಳಾಗಿವೆ. ಇವಾಂಕ ನಿಯೋಗ ಅಮೆರಿಕದ 38 ರಾಜ್ಯಗಳ 350 ಸದಸ್ಯರನ್ನು ಒಳಗೊಂಡಿದೆ. ಇದೇ ಮೊದಲ ಬಾರಿಗೆ ಅಮೆರಿಕವನ್ನು ಭಾರತದಲ್ಲಿ ಪ್ರತಿನಿಧಿ ಸುತ್ತಿರುವ ಇವಾಂಕಾ, “ಈ ಸಮ್ಮೇಳನ ಉಭಯ ದೇಶಗಳ ಜನರ ಮಧ್ಯೆ ಸ್ನೇಹ ಮತ್ತು ಆರ್ಥಿಕತೆ, ಭದ್ರತಾ ಕ್ಷೇತ್ರಗಳಲ್ಲಿಯ ಸಹಭಾಗಿತ್ವವನ್ನು ರುಜುವಾತು ಪಡಿಸಲಿದೆ’ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP: ರಾಜ್ಯಗಳಿಂದಲೇ ಮಾಲಿನ್ಯ ಹೆಚ್ಚಳ: ದಿಲ್ಲಿ ಸಿಎಂ ಆತಿಶಿ ಆರೋಪ
Maharashtra Elections: ವಿಪಕ್ಷ ನಾಯಕ ರಾಹುಲ್ ಛೋಟಾ ಪೋಪಟ್: ಬಿಜೆಪಿ ವಕ್ತಾರ ಲೇವಡಿ
Rahul Gandhi: ಮೋದಿ, ಅದಾನಿ, ಅಂಬಾನಿ ಒಟ್ಟಾದರೆ ಸುರಕ್ಷಿತ, ಇದೇ ಅರ್ಥ
Nirmala Sitharaman: ಬ್ಯಾಂಕುಗಳು ಬಡ್ಡಿದರ ಕೈಗೆಟಕುವಂತೆ ಕ್ರಮ ಕೈಗೊಳ್ಳಬೇಕು
Akhilesh Yadav: ಉ.ಪ್ರ.ದಲ್ಲಿ ಬಾಬಾ ಸಾಹೇಬ್ ಮತ್ತು ಬಾಬಾ ನಡುವಿನ ಹೋರಾಟ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.