ಸತ್ಯವನ್ನು ಸೋಲಿಸಲಾಗದು: ಕರ್ನಾಟಕದ ಬಗ್ಗೆ ತೇಜಸ್ವಿ ಪ್ರತಿಕ್ರಿಯೆ
Team Udayavani, May 19, 2018, 7:09 PM IST
ಪಟ್ನಾ : ಕರ್ನಾಟಕ ವಿಧಾನಸಭೆಯ ಸದನದಲ್ಲಿ ವಿಶ್ವಾಸ ಮತ ಎದುರಿಸುವುದಕ್ಕೆ ಮುನ್ನವೇ ರಾಜ್ಯ ಮುಖ್ಯಮಂತ್ರಿ ಪದಕ್ಕೆ ಬಿ ಎಸ್ ಯಡಿಯೂರಪ್ಪ ಇಂದು ಶನಿವಾರ ರಾಜೀನಾಮೆ ನೀಡಿರುವುದಕ್ಕೆ ಪ್ರತಿಕ್ರಿಯೆ ವ್ಯಕ್ತಪಡಿಸಿರುವ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಅವರು “ಸತ್ಯವನ್ನು ಯಾವತ್ತೂ ಸೋಲಿಸಲು ಸಾದ್ಯವಿಲ್ಲ; ಅದು ಯಾವತ್ತೂ ಸುಳ್ಳನ್ನು ಮತ್ತು ಸುಳ್ಳುಗಾರನನ್ನು ಸೋಲಿಸುತ್ತದೆ’ ಎಂದು ಹೇಳುವ ಮೂಲಕ ಬಿಜೆಪಿ ನಾಯಕತ್ವಕ್ಕೆ ಟಾಂಗ್ ನೀಡಿದ್ದಾರೆ.
ಆರ್‌ಜೆಡಿ ಅಧ್ಯಕ್ಷ ಲಾಲು ಪ್ರಸಾದ್ ಯಾದವ್ ಅವರ ಪುತ್ರ ತೇಜಸ್ವಿ ಅವರು ನಿನ್ನೆಯಷ್ಟೇ ಕರ್ನಾಟಕ ಮಾದರಿಯಲ್ಲಿ ಬಿಹಾರದಲ್ಲಿ ಈಚಿನ ಚುನಾವಣೆಯಲ್ಲಿ ಅತೀ ದೊಡ್ಡ ಪಕ್ಷವಾಗಿ ಮೂಡಿ ಬಂದಿರುವ ಆರ್‌ಜೆಡಿ ಯ ಸಂಗಡ ಕಾಂಗ್ರೆಸ್, ಸಿಪಿಐ-ಎಂಎಲ್ ಮತ್ತು ಎಚ್‌ಎಎಂ ನಾಯಕರೊಂದಿಗೆ ಬಿಹಾರ ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರನ್ನು ಭೇಟಿಯಾಗಿ ಸರಕಾರ ರಚಿಸುವುದಕ್ಕೆ ತಮ್ಮ ಮೈತ್ರಿ ಕೂಟಕ್ಕೆ ಆಹ್ವಾನ ನೀಡಬೇಕೆಂಬ ಮನವಿಯನ್ನು ಸಲ್ಲಿಸಿದ್ದರು.
243 ಸದಸ್ಯ ಬಲದ ಬಿಹಾರ ವಿಧಾನಸಭೆಯಲ್ಲಿ 80 ಸ್ಥಾನ ಹೊಂದಿರುವ ಆರ್‌ಜೆಡಿ ಅತೀ ದೊಡ್ಡ ಏಕೈಕ ಪಕ್ಷವಾಗಿ ಮೂಡಿ ಬಂದಿತ್ತು. ಕಳೆದ ವರ್ಷ ಜುಲೈಯಲ್ಲಿ ನಿತೀಶ್ ಕುಮಾರ್ ನೇತೃತ್ವದ ಮಹಾ ಘಟ ಬಂಧನ ಮೈತ್ರಿಕೂಟದಲ್ಲಿ ಅದು ಕಾಂಗ್ರೆಸ್ ನೊಂದಿಗೆ ಸೇರಿಕೊಂಡಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
L&T; ನೌಕರರು ರವಿವಾರವೂ ಕೆಲಸ ಮಾಡಬೇಕು, ವಾರಕ್ಕೆ 90 ಗಂಟೆ ಕೆಲಸ!!
Delhi airport; ಮೊಸಳೆ ತಲೆಬುರುಡೆ ಸಾಗಿಸುತ್ತಿದ್ದ ಕೆನಡಾ ಪ್ರಜೆ ಬಂಧನ
Tirupati; ಗಾಯಾಳುಗಳನ್ನು ಭೇಟಿಯಾದ ಸಿಎಂ ನಾಯ್ಡು: ಟಿಟಿಡಿ ಅಧಿಕಾರಿಗಳಿಗೆ ಛೀಮಾರಿ!
Tirupati;ದುರಂತಕ್ಕೆ ಸಿಎಂ ನಾಯ್ಡು,ಆಡಳಿತ ಮಂಡಳಿ,ಪೊಲೀಸರು ಕಾರಣ: ಮಾಜಿ ಟಿಟಿಡಿ ಮುಖ್ಯಸ್ಥರು
ಏನು ಧೈರ್ಯ..! ರೈಲು ಹಳಿ ಮೇಲೆ ಬಂದ ಸಿಂಹವನ್ನು ಸಾಕು ಪ್ರಾಣಿಯಂತೆ ಓಡಿಸಿದ ಅರಣ್ಯ ಸಿಬ್ಬಂದಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.