ಸುನಾಮಿ ಪತ್ರ: ಪಾಕ್‌ಗೆ ನಡುಕ
Team Udayavani, Nov 7, 2017, 6:25 AM IST
ಹೊಸದಿಲ್ಲಿ: ಸದ್ಯದಲ್ಲೇ ಸುನಾಮಿ ಅಪ್ಪಳಿಸಲಿದೆ ಎಂದು ಕೇರಳದ ವ್ಯಕ್ತಿಯೊಬ್ಬ ಪ್ರಧಾನಿ ಮೋದಿಗೆ ಇತ್ತೀಚೆಗೆ ಬರೆದಿದ್ದ ಪತ್ರವೊಂದು ಪಾಕಿಸ್ಥಾನ ಸರಕಾರದ ನಿದ್ದೆಗೆಡಿಸಿದ ಕುತೂಹಲದ ಪ್ರಕರಣ ಜರುಗಿದೆ.
ಕೇರಳದ ಬಿಕೆ ರಿಸರ್ಚ್ ಅಸೋಸಿಯೇಷನ್‌ನ ನಿರ್ದೇಶಕ ಎಂದು ಹೇಳಿಕೊಂಡ ಬಾಬು ಕಲಾಯಿಲ್ ಎಂಬ ವ್ಯಕ್ತಿಯೊಬ್ಬ ಸೆ.20ರಂದು ಮೋದಿಯವರಿಗೆ ಪತ್ರ ಬರೆದು, ಡಿ.31ರೊಳಗೆ ಹಿಂದೂ ಮಹಾಸಾಗರದಲ್ಲಿ ಮಹಾ ಭೂಕಂಪವೊಂದು ಸಂಭವಿಸಲಿದ್ದು, ಪರಿಣಾಮ ದೈತ್ಯ ಸುನಾಮಿ ಏಳಲಿದೆ. ಇದರ ದುಷ್ಪರಿಣಾಮ ಭಾರತ, ಪಾಕಿಸ್ಥಾನ, ಚೀನ ದೇಶಗಳ ಮೇಲೆ ಆಗಲಿದೆ. ಇದನ್ನು ತನ್ನಲ್ಲಿರುವ ಅತೀಂದ್ರಿಯ ಶಕ್ತಿಯಿಂದ ಆ.20ರಂದು ಕಂಡುಕೊಂಡಿದ್ದಾಗಿ ತಿಳಿಸಿದ್ದ.
ಈ ಪತ್ರವನ್ನು ನಮ್ಮ ಸರಕಾರ ಗಂಭೀರವಾಗಿ ಪರಿಗಣಿಸಲಿಲ್ಲ. ಆದರೆ, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಇದು, ಗಡಿ ದಾಟಿ ಪಾಕಿಸ್ಥಾನಕ್ಕೂ ಹೋಗಿ,ಅಲ್ಲಿನ ಸರಕಾರ ಗಕ್ಕನೆ ಎದ್ದು ಕುಳಿತುಕೊಳ್ಳುವಂತೆ ಮಾಡಿದೆ. ಈ ಬಗ್ಗೆ ಮೊದಲು ಎಚ್ಚೆತ್ತುಕೊಂಡ ಪಾಕಿಸ್ತಾನದ ಐಎಸ್‌ಐ, ಪ್ರಧಾನಿ ಕಾರ್ಯಾಲಯದ ಅಧೀನದಲ್ಲಿರುವ ಇಆರ್‌ಆರ್‌ಎನ ಉಪಾಧ್ಯಕ್ಷರಿಗೆ ಪತ್ರ ಬರೆದು ಕ್ರಮ ಕೈಗೊಳ್ಳುವಂತೆ ಸೂಚಿಸಿದೆ. ಇದರನ್ವಯ, ನ.1ರಂದು ಉಪಾಧ್ಯಕ್ಷರು ತಮ್ಮ ಅಧೀನ ಅಧಿಕಾರಿಗಳಿಗೆ ತುರ್ತು ಸಂದೇಶ ರವಾನಿಸಿ, ಮುನ್ನೆಚ್ಚರಿಕಾ ಕ್ರಮ ಜರಗಿಸಲು ಸೂಚಿಸಿದ್ದಾರೆ.
ತನ್ನ ಹಾಗೂ ತನ್ನ ಆಪ್ತ ಮಿತ್ರ ಚೀನಕ್ಕೂ ಗಂಡಾಂತರ ಕಾದಿದೆ ಎಂದು ಪಾಕಿಸ್ಥಾನ ಕಂಗಾಲಾಯಿತೋ ಏನೋ! ಆದರೂ, ಪತ್ರ ಬರೆದ ಬಾಬು ಯಾವ ಮಟ್ಟದ ತಲ್ಲಣ ನಿರೀಕ್ಷಿಸಿದ್ದರೋ ಆ ತಲ್ಲಣ ನೆರೆಯ ದೇಶದಲ್ಲಿ ಉಂಟಾಗಿರುವುದು ವಿಪರ್ಯಾಸ!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್ ರಂಗರಾಜನ್
Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್
Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್
Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು
Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್ ಶಾ ಭೇಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.