ತಿರುಮಲ: ಅನ್ನಪ್ರಸಾದ ಮಳಿಗೆ ಹೆಚ್ಚಳ; ಖಾಸಗಿ ರೆಸ್ಟೋರೆಂಟ್ ಗಳು, ಹೊಟೇಲ್‌ಗಳಿಗೆ ಬೀಗ
ban private hotels ,
Team Udayavani, Feb 19, 2022, 7:35 AM IST
ಹೈದರಾಬಾದ್: ಇನ್ನು ಮುಂದೆ ದೇಗುಲ ನಗರಿ ತಿರುಮಲದಲ್ಲಿ ಖಾಸಗಿ ಹೊಟೇಲ್‌ಗಳು ಹಾಗೂ ರೆಸ್ಟೋರೆಂಟ್ ಗಳು ಕಾಣಸಿಗುವುದಿಲ್ಲ. ಅದರ ಬದಲಾಗಿ, ಉಚಿತ ಅನ್ನ ಪ್ರಸಾದ ವಿತರಿಸುವ ಮತ್ತಷ್ಟು ಕಿಯೋಸ್ಕ್ ಗಳು ತಲೆ ಎತ್ತಲಿವೆ.
ತಿರುಮಲದ ತಿರುಪತಿ ದೇವಸ್ಥಾನಮ್ಸ್ ಮಂಡಳಿ(ಟಿಟಿಡಿ) ಈ ಮಹತ್ವದ ನಿರ್ಧಾರ ಕೈಗೊಂಡಿದ್ದು, ದೇಗುಲ ನಗರಿಯ ಎಲ್ಲ ಖಾಸಗಿ ರೆಸ್ಟೋರೆಂಟ್‌ಗಳನ್ನು ಮುಚ್ಚುವಂತೆ ಆದೇಶ ಹೊರಡಿಸಲಿದೆ. ಅಲ್ಲಿ ಹೆಚ್ಚು ಉಚಿತ ಅನ್ನ ಪ್ರಸಾದಮ್ ಮಳಿಗೆಗಳನ್ನು ತೆರೆಯಲು ನಿರ್ಧರಿಸಿದೆ.
ತಿರುಮಲದಲ್ಲಿನ ಉಪಾಹಾರಗೃಹಗಳು ಹಾಗೂ ರೆಸ್ಟೋರೆಂಟ್‌ಗಳಿಗೆ ಬೇರೆ ಉದ್ದಿಮೆ ಮಾಡುವ ಆಯ್ಕೆಯನ್ನು ಒದಗಿಸಲಿದೆ ಎಂದು ಹೇಳಲಾಗಿದೆ.
ಇದೇ ವೇಳೆ, ಮುಂಬಯಿಯಲ್ಲಿ ಶ್ರೀವರಿ ದೇವಾಲಯ ನಿರ್ಮಾಣಕ್ಕೆ ಅಗತ್ಯವಿರುವ ಜಮೀನಿನ ವಿಚಾರದಲ್ಲಿ ಅನುಮತಿ ಪಡೆಯಲು ಸದ್ಯದಲ್ಲೇ ಸಿಎಂ ಉದ್ಧವ್ ಠಾಕ್ರೆ ಅವರನ್ನು ಭೇಟಿ ಮಾಡುವುದಾಗಿ ಟ್ರಸ್ಟ್ ಹೇಳಿದೆ.
ಅರ್ಜಿತ ಸೇವಾ ಟಿಕೆಟ್ ದರವನ್ನು ಏರಿಸಲಾಗುವುದು ಎಂಬ ವರದಿಗಳನ್ನೂ ಟಿಟಿಡಿ ಅಲ್ಲಗಳೆದಿದೆ. ಅಲ್ಲದೇ, ಸದ್ಯದಲ್ಲೇ ಅರ್ಜಿತ ಸೇವೆಯನ್ನು ಪುನರಾ ರಂಭಿಸಲಾಗುವುದು ಎಂದಿದೆ.
ಲಡ್ಡು ಪ್ರಸಾದ ದಿಂದ 365 ಕೋಟಿ
2022 - 23ರ ಬಜೆಟ್‌ನಲ್ಲಿ ಉಲ್ಲೇಖಿಸಿರುವಂತೆ, ವೆಂಕಟೇಶ್ವರ ದೇಗುಲವು 3,096.40 ಕೋಟಿ ರೂ. ಆದಾಯ ಗಳಿಸಿದೆ. ಈ ಪೈಕಿ, ಹುಂಡಿಯಲ್ಲಿ 1,000 ರೂ. ಬಂದಿದ್ದು, ಠೇವಣಿ ಯಿಂದ ಬಂದ ಬಡ್ಡಿ ಮೊತ್ತ 668.5 ಕೋಟಿ ರೂ., ಟಿಕೆಟ್ ಮಾರಾಟದಿಂದ 362 ಕೋಟಿ ರೂ., ಲಡ್ಡು ಪ್ರಸಾದ ಮಾರಾಟದಿಂದ 365 ಕೋಟಿ ರೂ., ಭಕ್ತರು ಮುಡಿ ಕೊಟ್ಟಿದ್ದನ್ನು ಮಾರಾಟ ಮಾಡಿ 126 ಕೋಟಿ ರೂ. ಆದಾಯ ಬಂದಿದೆ ಎಂದು ಟಿಟಿಡಿ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.