ಟಿಟಿವಿ ದಿನಕರನ್ ಆಪ್ತರು ವಜಾ
Team Udayavani, Dec 26, 2017, 6:30 AM IST
ಚೆನ್ನೈ: ಎಐಎಡಿಎಂಕೆ ಬಂಡಾಯ ನಾಯಕ, ಶಶಿಕಲಾ ಬಣದ ಟಿಟಿವಿ ದಿನಕರನ್ ಅವರ 9 ಮಂದಿ ಬೆಂಬಲಿಗರನ್ನು ವಜಾ ಮಾಡಿ ತಮಿಳು ನಾಡು ಸರ್ಕಾರ ಸೋಮವಾರ ಆದೇಶ ಹೊರಡಿ ಸಿದೆ. ಮಾಜಿ ಸಿಎಂ ಜಯಲಲಿತಾ ಅವರು ಪ್ರತಿನಿಧಿಸುತ್ತಿದ್ದ ಆರ್.ಕೆ. ನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ದಿನಕರನ್ ಎದುರು ಹೀನಾಯ ಸೋಲುಕಂಡ ಬೆನ್ನಲ್ಲೇ ಆಡಳಿತಾರೂಢ ಎಐಎಡಿಎಂಕೆ ಇಂತಹುದೊಂದು ಘೋಷಣೆ ಮಾಡಿದೆ.
ಪಕ್ಷದ ಕರ್ನಾಟಕದ ರಾಜ್ಯ ಘಟಕದ ಮುಖ್ಯಸ್ಥ ಪುಗಳೇಂದಿ ಅವರೂ ಸೇರಿದಂತೆ 9 ಮಂದಿ ಪದಾಧಿಕಾರಿಗಳನ್ನು ವಜಾ ಮಾಡಲಾಗಿದೆ. ಜತೆಗೆ, ಯಾರು ಪಕ್ಷಕ್ಕೆ ದ್ರೋಹ ಬಗೆಯುತ್ತಾರೋ ಅವರಿಗೆ ಎಚ್ಚರಿಕೆಯ ಸಂದೇಶವನ್ನೂ ರವಾನಿಸಲಾಗಿದೆ. ಸೋಮವಾರ ಬೆಳಗ್ಗೆ ಸಿಎಂ ಪಳನಿಸ್ವಾಮಿ ಮತ್ತು ಡಿಸಿಎಂ ಪನ್ನೀರ್‌ಸೆಲ್ವಂ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಇದೇ ವೇಳೆ, ತಮ್ಮ ವಿರುದ್ಧ ಕ್ರಮ ಕೈಗೊಳ್ಳಲು ಆಡಳಿತಾರೂಢ ಪಕ್ಷಕ್ಕೆ ಯಾವ ಅಧಿಕಾರವಿದೆ ಎಂದು ವಜಾಗೊಂಡ ಪದಾಧಿಕಾರಿಗಳು ಪ್ರಶ್ನಿಸಿದ್ದಾರೆ.
ಜಿಲ್ಲಾ ಕಾರ್ಯದರ್ಶಿಗಳಾದ ಪಿ. ವೆಟ್ರಿವೇಲ್, ಎನ್.ಜಿ. ಪಾರ್ಥಿಬನ್, ಎಂ. ರಂಗಸಾಮಿ, ತಂಗತಮಿಳ್‌ಸೆಲ್ವಂ ಸೇರಿದಂತೆ ದಿನಕರನ್‌ಗೆ ಆಪ್ತರಾಗಿರುವ ಎಲ್ಲರನ್ನೂ ಅವರವರ ಹುದ್ದೆ ಯಿಂದ ವಜಾ ಮಾಡಿದ್ದೇವೆ. ಕರ್ನಾಟಕ ರಾಜ್ಯ ಘಟಕದ ಮುಖ್ಯಸ್ಥ ಪುಗಳೇಂದಿ, ವಕ್ತಾರ ನಂಚಿಲ್ ಸಂಪತ್, ಸಿ.ಆರ್. ಸರಸ್ವತಿ ವಿರುದ್ಧವೂ ಇದೇ ಕ್ರಮ ಕೈಗೊಳ್ಳಲಾಗಿದೆ ಎಂದು ಡಿಸಿಎಂ ಪನ್ನೀರ್ ಹೇಳಿದ್ದಾರೆ. ಆದರೆ, ವಜಾಗೆ ಕಾರಣವೇನೆಂದು ಅವರು ಹೇಳಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.