#TumSENAhoPayega : ಮಹಾರಾಷ್ಟ್ರ ರಾಜಕೀಯ ಪ್ರಹಸನ ; ನೆಟ್ಟಿಗರಿಗೆ ಸುಗ್ರಾಸ ಟ್ರೋಲ್ ಭೋಜನ!
Team Udayavani, Nov 12, 2019, 11:02 PM IST
ಮುಂಬಯಿ: ಕಳೆದ 18 ದಿನಗಳಿಂದ ಮಹಾರಾಷ್ಟ್ರದಲ್ಲಿ ನೂತನ ಸರಕಾರ ರಚನೆಗೆ ಸಂಬಂಧಿಸಿದಂತೆ ವಿವಿಧ ರಾಜಕೀಯ ಪಕ್ಷಗಳ ನಡುವೆ ಜಗ್ಗಾಟ, ಮೇಲಾಟ, ಕೆಸರೆರೆಚಾಟ ಜೋರಾಗಿರುವಂತೆ ಈ ಎಲ್ಲಾ ಬೆಳವಣಿಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಟ್ರೋಲ್ ಗೆ ಕಾರಣವಾಗಿದೆ.
ಅದರಲ್ಲೂ ತನ್ನ ದೀರ್ಘಕಾಲದ ರಾಜಕೀಯ ಮಿತ್ರ ಬಿಜೆಪಿಗೆ ಶಿವಸೇನೆ ಕೈಕೊಟ್ಟಿರುವುದಕ್ಕೆ ನೆಟ್ಟಿಗರು, ಶಿವಸೇನೆ ಮತ್ತು ಆ ಪಕ್ಷದ ನಾಯಕರನ್ನು ತಮ್ಮ ಟ್ರೋಲ್ ಗೆ ವಸ್ತುವನ್ನಾಗಿಸಿಕೊಂಡಿದ್ದಾರೆ. #TumSENAhoPayega (ನಿಮ್ಮಿಂದ ಸಾಧ್ಯವಿಲ್ಲ) ಎಂಬ ಹ್ಯಾಷ್ ಟ್ಯಾಗ್ ನಲ್ಲಿ ಶಿವಸೇನೆ, ಎನ್.ಸಿ.ಪಿ. ಮತ್ತು ಕಾಂಗ್ರೆಸ್ ಪಕ್ಷಗಳು ಸೇರಿಕೊಂಡು ರಾಜ್ಯದಲ್ಲಿ ನೂತನ ಸರಕಾರ ರಚನೆಗೆ ಪ್ರಯತ್ನಪಡುತ್ತಿರುವುದು ಮಹಾರಾಷ್ಟ್ರ ಜನತೆಯ ಅದರಲ್ಲೂ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ.
ಮಹಾಯುತಿಗೆ (ಬಿಜೆಪಿ-ಶಿವಸೇನೆ ಮೈತ್ರಿ) ಸತತ ಎರಡನೇ ಬಾರಿ ಮಹಾರಾಷ್ಟ್ರದ ಮತದಾರರು ಸ್ಪಷ್ಟ ಬಹುಮತ ನೀಡಿದ್ದರೂ ಶಿವಸೇನೆಯ ಮೊಂಡುತನದಿಂದ ರಾಜ್ಯದಲ್ಲಿ ರಾಜಕೀಯ ಅಸ್ಥಿರತೆ ಉಂಟಾಗಿರುವುದು ಮತದಾರರ ಆಕ್ರೋಶಕ್ಕೆ ಕಾರಣವಾಗಿದೆ. ಹಾಗಾಗಿ #TumSENAhoPayega ಹ್ಯಾಷ್ ಟ್ಯಾಗ್ ನಲ್ಲಿ ನೆಟ್ಟಿಗರು ಪ್ರತ್ಯಕ್ಷವಾಗಿ ಶಿವಸೇನೆಯನ್ನೇ ಟಾರ್ಗೆಟ್ ಮಾಡಿದ್ದಾರೆ.
ಈ ಹ್ಯಾಷ್ ಟ್ಯಾಗ್ ನಲ್ಲಿ ‘ಸೇನಾ’ ಎಂಬ ಪದವನ್ನು ಕ್ಯಾಪಿಟಲ್ ಲೆಟರ್ ನಲ್ಲಿ ಬರುವಂತೆ ರಚಿಸಲಾಗಿದೆ. ಅಂದರೆ ಬಿಜೆಪಿ ಬೆಂಬಲವಿಲ್ಲದೇ ನಿಮಗೆ (ಸೇನ) ಸರಕಾರ ರಚಿಸಲು ಸಾಧ್ಯವೇ ಇಲ್ಲ (ನ ಹೋ ಪಾಯೇಗಾ) ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದನ್ನು ಬಿಡಿಯಾಗಿ ಓದಿದಾಗ (ತುಮ್ ಸೇನ ಹೋ ಪಾಯೇಗಾ) ಎಂದು ಅರ್ಥ ಬರುತ್ತದೆ.
ಇದಲ್ಲದೇ ಎನ್.ಸಿ.ಪಿ., ಕಾಂಗ್ರೆಸ್ ಪಕ್ಷಗಳೂ ಸಹ ನೆಟ್ಟಿಗರ ಟ್ರೋಲ್ ಗೆ ಆಹಾರವಾಗಿದೆ. ಹೆಚ್ಚಿನ ಟ್ರೋಲ್ ಗಳು ಮರಾಠಿ ಭಾಷೆಯಲ್ಲಿಯೇ ಇವೆ. ಇನ್ನು ಕೆಲವು ಹಿಂದಿಯಲ್ಲಿವೆ.
ಒಟ್ಟಿನಲ್ಲಿ ಮಹಾಯುತಿ ಮೂಲಕ ಮಹಾರಾಷ್ಟ್ರದಲ್ಲಿ ಸತತ ಎರಡನೇ ಬಾರಿಗೆ ಸುಭದ್ರ ಸರಕಾರದ ಮೂಲಕ ಉತ್ತಮ ಆಡಳಿತನ್ನು ನೀಡಬಹುದಾಗಿದ್ದ ಅವಕಾಶವನ್ನು ಶಿವಸೇನೆ ಕೈಯಾರೆ ಹಾಳುಮಾಡಿಕೊಂಡು ಈ ಮೂಲಕ ರಾಜಕೀಯ ಅಸ್ಥಿರತೆಗೆ ಕಾರಣವಾಗಿರುವುದು ಮಾತ್ರವಲ್ಲದೇ ತನ್ನ ಈ ಮೊಂಡುತನದಿಂದ ಬಿಜೆಪಿಗೆ ಪರೋಕ್ಷವಾಗಿ ಲಾಭ ಮಾಡಿಕೊಟ್ಟಿರುವುದರ ನಿಗೂಢತೆ ಮಾತ್ರ ಆ ‘ಶಿವ’ನಿಗೇ ಅರ್ಥವಾಗುವಂತದ್ದು!
#TumSENAhoPayega ಹ್ಯಾಷ್ ಟ್ಯಾಗ್ ನಡಿಯಲ್ಲಿ ಮಾಡಲಾಗುತ್ತಿರುವ ಟ್ರೋಲ್ ಗಳ ಕೆಲವೊಂದು ಸ್ಯಾಂಪಲ್ ಇಲ್ಲಿದೆ:
From Destroying the Ravan Raj of Congress and NCP ?
To Forming the Same Ravan Raj, this is how Shiv Sena has Travelled ☹️
Just look at Aditya Thackeray’s tweet From Past. #TumSENAhoPayega#ShivSenaCheatsMaharashtra pic.twitter.com/6F49r7aTMJ
— Sujay Raj (@Sujay__Raj) November 11, 2019
This is what Sonia & Pawar did to Shiv Sena today#TumSENAHoPayega pic.twitter.com/w4EjqtK1Xx
— Jiten Gajaria (@jitengajaria) November 11, 2019
This was four years ago…#TumSENAhopayega https://t.co/P1pqKZPbOC
— Kiran Kumar S (@KiranKS) November 11, 2019
This is what congress NCP did to Shivsena #TumSENAhoPayega pic.twitter.com/nSYF2OeRnx
— GCK (@GajBuzz) November 11, 2019
Really can’t control my laughter??
.
.
.#TumSENAhopayega pic.twitter.com/yq1flhaRkJ— Mihir Chheda (@MihirChheda100) November 11, 2019
This is what Congress and NCP did to Shiv Sena today ???? #TumSENAhoPayega #SenaNowhere pic.twitter.com/lHMSbdxNxN
— Ultra Instinct Goku (@IndianSongoku) November 11, 2019
We will be back…
Kyoki #TumSENAhoPayega https://t.co/THTeXWZyzy— Himanshu Ranjan Rajput ???? (@Himanshu04ran) November 11, 2019
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra Election: ಬೂತ್ ಗೆಲ್ಲುವತ್ತ ಗಮನ ಹರಿಸಿ: ಕಾರ್ಯಕರ್ತರಿಗೆ ಮೋದಿ ಕರೆ
Hospitalised: ಚಂದ್ರಬಾಬು ನಾಯ್ಡು ಅವರ ಸಹೋದರನ ಆರೋಗ್ಯ ಸ್ಥಿತಿ ಗಂಭೀರ, ಆಸ್ಪತ್ರೆಗೆ ದಾಖಲು
Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು
Jamia Millia Islamia: ಇಸ್ಲಾಂಗೆ ಮತಾಂತರಗೊಳ್ಳಿ ಅಥವಾ ಅತ್ಯಾಚಾರಕ್ಕೆ ಒಳಗಾಗಿ: ಭಾರಿ ಆರೋಪ
Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ
MUST WATCH
ಹೊಸ ಸೇರ್ಪಡೆ
Actor Darshan ವಿರುದ್ದ ಸುಪ್ರೀಂನಲ್ಲಿ ಮೇಲ್ಮನವಿ: ಬೆಂಗ್ಳೂರು ಕಮೀಷನರ್
Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Maharashtra Election: ಬೂತ್ ಗೆಲ್ಲುವತ್ತ ಗಮನ ಹರಿಸಿ: ಕಾರ್ಯಕರ್ತರಿಗೆ ಮೋದಿ ಕರೆ
Koppala ಗವಿಮಠ ಜಾತ್ರೆಗೆ ನಟ ಅಮಿತಾಬ್ ಬಚ್ಚನ್?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.