ದಿಲ್ಲಿ ವಿದ್ಯಾರ್ಥಿನಿಯ ಫೋಟೋ ತಿದ್ದಿದ ಪಾಕ್ ಗೆ ತಕ್ಕ ಶಾಸ್ತಿ!
Team Udayavani, Nov 20, 2017, 8:49 AM IST
ಹೊಸದಿಲ್ಲಿ: ಭಾರತದ ಕಾನೂನು ವಿದ್ಯಾರ್ಥಿನಿ ಯೊಬ್ಬಳು ಟ್ವಿಟರ್‌ನಲ್ಲಿ ಹಾಕಿದ್ದ ಫೋಟೋವೊಂದನ್ನು ತಿದ್ದಿ ಭಾರತ ವಿರೋಧಿ ಸಂದೇಶವುಳ್ಳ ಫೋಟೋವನ್ನಾಗಿ ಪರಿವರ್ತಿಸಿದ ಹಿನ್ನೆಲೆಯಲ್ಲಿ ಪಾಕಿಸ್ಥಾನದ ರಕ್ಷಣಾ ಇಲಾಖೆಗೆ ಸಂಬಂಧಪಟ್ಟ ಪಾಕಿಸ್ಥಾನ್ ಡಿಫೆನ್ಸ್ ಫೋರಂ ಎಂಬ ಟ್ವಿಟರ್ ಹ್ಯಾಂಡಲ್ (#pakistandefenceforum) ಅನ್ನು ಟ್ವಿಟರ್ ಸಂಸ್ಥೆ ಅಮಾನತುಗೊಳಿಸಿದೆ.
ವಿದ್ಯಾರ್ಥಿನಿ ಹೆಸರು ಕವಾಲ್‌ಪ್ರೀತ್ ಕೌರ್. ದಿಲ್ಲಿಯ ಜಾಮಾ ಮಸೀದಿ ಮುಂಭಾಗದಲ್ಲಿ ನಿಂತು ತೆಗೆಸಿಕೊಂಡಿರುವ ಫೋಟೋ ದಲ್ಲಿ ಒಂದು ಸಂದೇಶವುಳ್ಳ ಹಾಳೆಯೊಂದನ್ನು ಹಿಡಿದು ಕೊಂಡಿದ್ದರು. ಅದರಲ್ಲಿ ಅವರು, “”ನಾನು ಭಾರತೀ ಯಳು. ಭಾರತದ ಸಂವಿಧಾನ ನೀಡಿರುವ ಜಾತ್ಯತೀತತೆಯನ್ನು ಗೌರವಿ ಸುತ್ತೇನೆ. ಆದರೆ, ಭಾರತದಲ್ಲಿ ಧರ್ಮದ ಹೆಸರಿನಲ್ಲಿ ಮುಸ್ಲಿಮರ ಮೇಲೆ ಆಗುತ್ತಿರುವ ಹಿಂಸಾಚಾರವನ್ನು ನಾನು ವಿರೋಧಿ ಸುತ್ತೇನೆ” ಎಂದು ಹೇಳಿಕೊಂಡಿದ್ದರು.
ಆದರೆ, ಈ ಫೋಟೋದ ಸಂದೇಶ ಬದಲಿಸಿರುವ ಪಾಕಿಸ್ಥಾನ್ ಡಿಫೆನ್ಸ್ ಫೋರಂ, ಕೌರ್ ಅವರು “”ನಾನು ಭಾರತೀಯಳು. ಆದರೂ ನಾನು ಭಾರತವನ್ನು ದ್ವೇಷಿಸುತ್ತೇನೆ…” ಎಂದು ಹೇಳಿ ಕೊಂಡಂತೆ ಬದಲಿಸಿ, ಪುನಃ ಅಂತರ್ಜಾಲಕ್ಕೆ ಹರಿಬಿಟ್ಟಿತ್ತು. ಹಾಗಾಗಿ, ನಿಯಮಗಳ ಅನುಸಾರ ಟ್ವಿಟರ್ ಸಂಸ್ಥೆ ಅದನ್ನು ಅಮಾನತುಗೊಳಿಸಿ ತಕ್ಕ ಶಾಸ್ತಿ ಮಾಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Odisha: ಕಾರಿಗೆ ಟ್ರಕ್ ಢಿಕ್ಕಿ ಹೊಡೆದು ಇಬ್ಬರು ಬಿಜೆಪಿ ನಾಯಕರು ಮೃ*ತ್ಯು
Delhi; ರಸ್ತೆಗಳು ಪ್ರಿಯಾಂಕಾ ಗಾಂಧಿ ಕೆನ್ನೆಯಂತಿರಬೇಕು: ಬಿಜೆಪಿ ನಾಯಕನ ಹೇಳಿಕೆಗೆ ಟೀಕೆ
Gujarat: ಕೋಸ್ಟ್ ಗಾರ್ಡ್ ಹೆಲಿಕಾಪ್ಟರ್ ಪತನ; ಮೂವರು ಮೃ*ತ್ಯು
Oyo Rooms: ಮದುವೆಯಾಗದ ಜೋಡಿಗೆ ಇನ್ಮುಂದೆ ʼಓಯೋʼ ರೂಮ್ ಸಿಗೋದು ಕಷ್ಟ – ವರದಿ
Jammu and Kashmir: ಕಮರಿಗೆ ಬಿದ್ದ ವಾಹನ; ಕನಿಷ್ಠ ನಾಲ್ವರು ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.