![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Jan 15, 2023, 7:15 AM IST
ಜೈಪುರ : 900 ಕಿ.ಮೀ. ಅಂತರ ದಲ್ಲಿದ್ದರೂ 26 ವರ್ಷದ ಅವಳಿ ಸಹೋದರರು ಒಂದೇ ಮಾದರಿ ಯಲ್ಲಿ ಸಾವಿಗೀಡಾಗಿರುವ ದುರ್ಘಟನೆ ರಾಜಸ್ಥಾನದಲ್ಲಿ ವರದಿಯಾಗಿದೆ.
ಸಾರ್ನಾಕೋ ತಲಾ ಎನ್ನುವ ಗ್ರಾಮದವರಾದ ಸಮರ್ ಹಾಗೂ ಸೋಹನ್ ಸಿಂಗ್ ಎಂಬ ಅವಳಿ ಸಹೋದರರು ಸಾವಿಗೀಡಾಗಿರುವ ನತ ದೃಷ್ಟರು. ಸಮರ್ ಎಂಬುವಾತ ಗುಜರಾತ್‌ನ ಜವಳಿ ಮಳಿಗೆಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಮೊಬೈಲ್‌ನಲ್ಲಿ ಮಾತನಾಡುವಾಗ ಕಟ್ಟಡದ ಮೇಲಿಂದ ಬಿದ್ದು ಮೃತಪಟ್ಟಿದ್ದಾನೆ.
ಶಿಕ್ಷಕ ವೃತ್ತಿಗೆ ನಡೆಸಬೇಕಾದ ಪರೀಕ್ಷೆಗಾಗಿ ಜೈಪುರದಲ್ಲಿ ಸಿದ್ಧತೆ ನಡೆಸುತ್ತಿದ್ದ ಸೋಹನ್, ಸಹೋದರನ ಸಾವಿನ ಸುದ್ದಿ ಕೇಳಿ, ಹುಟ್ಟೂರಿಗೆ ಹಿಂದಿರುಗುವಾಗ ನೀರಿನ ಟ್ಯಾಂಕ್‌ಗೆ ಬಿದ್ದು ಮೃತಪಟ್ಟಿದ್ದಾನೆ ಎನ್ನಲಾಗಿದೆ.
ಅವಳಿ ಸಹೋದರರ ಅಂತ್ಯಕ್ರಿಯೆ ಹುಟ್ಟೂರಿನಲ್ಲಿ ನೆರವೇರಿದೆ. 2 ದಶಕದ ಹಿಂದೆ ಅವಳಿ ಸಹೋದರರ ಜನನಕ್ಕೆ ಸಂತಸ ಪಟ್ಟಿದ್ದ ಇಡೀ ಗ್ರಾಮವೇ ಈಗ ಶೋಕಸಾಗರದಲ್ಲಿ ಮುಳುಗು ವಂತಾಗಿದೆ.
ಸಮರ್ ಸಾವು ಆಕಸ್ಮಿಕವಾಗಿರಬಹುದು ಆದರೆ ಸೋಹನ್ ಸಾವು ಆತ್ಮಹತ್ಯೆ ಎಂಬ ಶಂಕೆ ವ್ಯಕ್ತವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
You seem to have an Ad Blocker on.
To continue reading, please turn it off or whitelist Udayavani.