TikTok ಮಹಿಮೆ… ಹುಟ್ಟಿನಿಂದಲೇ ಬೇರ್ಪಟ್ಟ ಅವಳಿಗಳು 19 ವರ್ಷದ ಬಳಿಕ ಮತ್ತೆ ಒಂದಾದರು
Team Udayavani, Jan 26, 2024, 3:54 PM IST
ಜಾರ್ಜಿಯಾ: ಹುಟ್ಟಿನಿಂದಲೇ ಬೇರ್ಪಟ್ಟ ಕುಟುಂಬ ಸದಸ್ಯರು ಅಥವಾ ಮಕ್ಕಳು ಅದೆಷ್ಟೋ ವರ್ಷಗಳ ಬಳಿಕ ಪೋಷಕರ ಮಡಿಲು ಸೇರುವುದನ್ನು ನಾವು ನೋಡಿದ್ದೇವೆ ಅದೇ ರೀತಿ ಇಲ್ಲೊಂದು ವಿಚಿತ್ರ ಘಟನೆಯೋದು ಬೆಳಕಿಗೆ ಬಂದಿದೆ. ಇಲ್ಲಿ ಹುಟ್ಟಿನಿಂದಲೇ ಬೇರ್ಪಟ್ಟ ಅವಳಿ ಮಕ್ಕಳು ಸುಮಾರು ಹತ್ತೊಂಬತ್ತು ವರ್ಷಗಳ ಬಳಿಕ ಒಂದಾಗಿರುವ ಘಟನೆ ಬೆಳಕಿಗೆ ಬಂದಿದೆ.
ಆದರೆ ಈ ಅವಳಿಗಳು ಒಂದಾಗಲು ಸಹಕಾರಿಯಾಗಲಿದ್ದು ಟಿಕ್ ಟಾಕ್ ವಿಡಿಯೋ… ಹೌದು ಏನಿದರ ಹಿನ್ನೆಲೆ ಎಂಬುದನ್ನು ಮೊದಲು ನೋಡಿಕೊಂಡು ಬರೋಣ.
ಜಾರ್ಜಿಯಾದಲ್ಲಿ ವಾಸವಾಗಿರುವ ಆಮಿ ಖ್ವಿತಿಯಾ ಮತ್ತು ಅನೋ ಸರ್ತಾನಿ ಅವರು ಹುಟ್ಟಿನಿಂದಲೇ ಮಕ್ಕಳನ್ನು ತಾಯಿಯ ಕೈಯಿಂದ ಕಸಿದುಕೊಂಡು ಬೇರೆ ಬೇರೆ ಕುಟುಂಬಗಳಿಗೆ ಮಾರಾಟವಾಗಿದ್ದರು ಆದರೆ ತಾವು ಮಾರಾಟವಾಗಿರುವ ವಿಚಾರ ಆ ಮಕ್ಕಳಿಗೆ ತಿಳಿದಿರಲಿಲ್ಲ. ಮಾರಾಟವಾದ ಇಬ್ಬರೂ ಮಕ್ಕಳು ಜಾರ್ಜಿಯಾದಲ್ಲಿ ಕೆಲವೇ ಮೈಲುಗಳಷ್ಟು ದೂರದಲ್ಲಿ ವಾಸಿಸುತ್ತಿದ್ದರು, ಆದರೆ ಅವರು ಅವಳಿ ಸಹೋದರಿಯರೆಂದು ತಿಳಿದಿರಲಿಲ್ಲ. ಆದರೆ ಟ್ಯಾಲೆಂಟ್ ಶೋ ಮತ್ತು ಟಿಕ್‌ಟಾಕ್ ವೀಡಿಯೊ ಆಮಿ ಮತ್ತು ಅನೋ ಅವಳಿ ಸಹೋದರಿಯರು ಎಂದು ಬಹಿರಂಗಪಡಿಸಿತು. ಆಮಿ ಮತ್ತು ಅನೋ ಇಬ್ಬರು ಟಿಕ್ ಟಾಕ್ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡುತಿದ್ದರು, ಅಲ್ಲದೆ ಹಲವಾರು ಸ್ಟೇಜ್ ಪ್ರೋಗ್ರಾಮ್ ಗಳನ್ನು ನೀಡುತ್ತಿದ್ದರು. ಅಂತಿಮವಾಗಿ 19 ವರ್ಷಗಳ ನಂತರ ಇಬ್ಬರೂ ಒಂದಾಗಿದ್ದಾರೆ.
ಆಸ್ಪತ್ರೆಗಳಿಂದ ಮಕ್ಕಳನ್ನು ಕದ್ದು ಮಾರಾಟ ಮಾಡುವ ಘಟನೆಗಳು ಜಾರ್ಜಿಯಾದಲ್ಲಿ ಸಾಮಾನ್ಯವಾಗಿದೆ ಅಷ್ಟು ಮಾತ್ರವಲ್ಲದೆ ಈ ಘಟನೆಯನ್ನು ನಿಯಂತ್ರಿಸಲು ಇಲ್ಲಿಯವರೆಗೆ ಯಾವುದೇ ಸರಕಾರದಿಂದ ಸಾಧ್ಯವಾಗಲಿಲ್ಲ. ಆಮಿ 11 ವರ್ಷದವಳಿದ್ದಾಗ, ತನ್ನ ನೆಚ್ಚಿನ ಟಿವಿ ಶೋ ‘ಜಾರ್ಜಿಯಾಸ್ ಗಾಟ್ ಟ್ಯಾಲೆಂಟ್’ ನಲ್ಲಿ ತನ್ನಂತೆಯೇ ಕಾಣುವ ಹುಡುಗಿಯನ್ನು ನೋಡಿದಳು. ಆದರೆ ಆಮಿ ತನ್ನ ಬಹುಕಾಲದಿಂದ ಕಳೆದುಹೋದ ಸಹೋದರಿ ಅನೋವನ್ನು ನೋಡುತ್ತಿದ್ದೇನೆ ಎಂದು ಮಾತ್ರ ತಿಳಿದಿರಲಿಲ್ಲ. ಅದೇ ಸಮಯದಲ್ಲಿ ಬಂದ ಟಿಕ್‌ಟಾಕ್ ವೀಡಿಯೊ ಇದರಲ್ಲಿ ಇಬ್ಬರ ಮುಖ ಪರಿಚಯವೂ ಒಂದೇ ಆಗಿರುವುದು ಕಂಡುಬಂದಿದೆ. ಈ ವಿಡಿಯೋದಲ್ಲಿ ಇಬ್ಬರ ನಡುವೆ ಸಾಮ್ಯತೆ ಇರುವುದು ಕಂಡುಬಂದಿದೆ.
2002 ರಲ್ಲಿ ಅವರ ತಾಯಿ ಅಜಾ, ಶೋನಿ ಅವರಿಗೆ ಜನ್ಮ ನೀಡಿದ ನಂತರ ಕೋಮಾಗೆ ಹೋಗಿದ್ದರು ಮತ್ತು ಅವರ ಪತಿ ಗೊಚಾ ಗಖಾರಿಯಾ ಅವರ ಹೇಳಿಕೆಯಂತೆ ಬಾಲ್ಯದಲ್ಲೇ ಮಕ್ಕಳನ್ನು ಕದ್ದು ಮಾರಾಟ ಮಾಡಲಾಗಿದೆ ಎಂಬುದು ಗೊತ್ತಿತ್ತು. ಅದೇ ಹೊತ್ತಿಗೆ ಟಿಕ್‌ಟಾಕ್ ವಿಡಿಯೋದಲ್ಲಿ ಕಂಡು ಬಂದ ಇಬ್ಬರು ಯುವತಿಯರು ಅವಳಿಗಳು ಎಂಬುದು ಪ್ರಚಾರ ಆಗ ತೊಡಗಿತು. ಇದಾದ ಬಳಿಕ ಇಬ್ಬರು ಬಾಲಕಿಯರ ಬಳಿ ಪೋಷಕರ ಕುರಿತು ವಿಚಾರಿಸಿದಾಗ ತಮ್ಮ ಪೋಷಕರ ಬಗ್ಗೆ ನಮಗೆ ಗೊತ್ತಿಲ್ಲ ನಮಗೆ ತಂದೆ ತಾಯಿ ಯಾರು ಇಲ್ಲ ಎಂದು ಹೇಳಿಕೊಂಡಿದ್ದಾರೆ ಇದರಿಂದ ಇಬ್ಬರೂ ಅವಳಿಗಳು ಎಂಬುದು ಗೊತ್ತಾಗಿದೆ.
ಇದನ್ನೂ ಓದಿ: ಬಿಗ್ ಬಜೆಟ್ ʼRamayanaʼ ದಲ್ಲಿ ವಿಭೀಷಣ ಪಾತ್ರಕ್ಕೆ ದಕ್ಷಿಣದ ಖ್ಯಾತ ನಟ; ಸಹೋದರನಾಗಿ ಯಶ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
RSS: ಮೋಹನ್ ಭಾಗವತರ ಮಂದಿರ,ಮಸೀದಿ ಹೇಳಿಕೆಗೆ ಈಗ ಆರೆಸ್ಸೆಸ್ ಪತ್ರಿಕೆ ಆಕ್ಷೇಪ
Telangana: ಕಾನೂನು ಪಾಲನೆ ಕಡ್ಡಾಯ: ತೆಲುಗು ಚಿತ್ರರಂಗಕ್ಕೆ ತೆಲಂಗಾಣ ಸಿಎಂ ಖಡಕ್ ಮಾತು
ಮಂಗಳಮುಖಿಯನ್ನು ಪ್ರೀತಿಸಿ ಮದುವೆ ಆಗುತ್ತೇನೆಂದ ಪುತ್ರ; ಅವಮಾನದಿಂದ ಪೋಷಕರು ಆತ್ಮ*ಹತ್ಯೆ
Borewell Tragedy: 4ನೇ ದಿನಕ್ಕೆ ಕಾಲಿಟ್ಟ ರಕ್ಷಣಾ ಕಾರ್ಯಾಚರಣೆ… ಬಾಲಕಿಯ ಸ್ಥಿತಿ ಹೇಗಿದೆ
Mumbai: 13000 ಸಂಬಳ ಪಡೆಯುವ ಗುತ್ತಿಗೆ ನೌಕರನಿಂದ ಗೆಳತಿಗೆ BMWಕಾರು, 4BHK ಫ್ಲಾಟ್ ಗಿಫ್ಟ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.