ಟ್ವಿಟರ್ ಶರಣಾಗತಿ : ಕೇಂದ್ರ ಸೂಚಿಸಿದ್ದ ಶೇ.97 ಖಾತೆ ವಿರುದ್ಧ ಕ್ರಮ
Team Udayavani, Feb 13, 2021, 7:12 AM IST
ಹೊಸದಿಲ್ಲಿ: ಕೇಂದ್ರ ಸರಕಾರದ ವಿರುದ್ಧ ಕೊನೆಗೂ ಟ್ವಿಟರ್ ಮಂಡಿಯೂರಿದೆ. ರೈತ ಪ್ರತಿಭಟನೆ ಪರವಾಗಿ ದ್ವೇಷಪೂರಿತ ಸಂದೇಶ ಸಾರುತ್ತಿದ್ದ ಖಾತೆಗಳಿಗೆ ಟ್ವಿಟರ್ ಮೂಗುದಾರ ಹಾಕಿದ್ದು, ಕೇಂದ್ರ ಸೂಚಿಸಿದ್ದ ಶೇ.97 ಖಾತೆಗಳ ವಿರುದ್ಧ ಕ್ರಮ ಜರುಗಿಸಿದೆ.
ಪಾಕಿಸ್ಥಾನ, ಖಲಿಸ್ಥಾನ ಪರವಾಗಿ ಮೃದು ಧೋರಣೆ ಹೊಂದಿ, ದ್ವೇಷಪೂರಿತ ಪೋಸ್ಟ್ ಹಾಕುತ್ತಿದ್ದ 1435 ಖಾತೆಗಳ ವಿರುದ್ಧ ಕ್ರಮ ಜರಗಿಸುವಂತೆ ಕೇಂದ್ರ ಸರಕಾರ ಸೂಚಿಸಿತ್ತು. ಇವುಗಳಲ್ಲಿ 1398 ಖಾತೆಗಳನ್ನು ಟ್ವಿಟರ್ ಬ್ಲಾಕ್ ಮಾಡಿದೆ. ಆದಾಗ್ಯೂ ಸರಕಾರ ನಿರ್ಬಂಧಿಸಲು ಸೂಚಿಸಿದ್ದ ಸಿಪಿಎಂ ಮುಖಂಡ ಮೊಹಮ್ಮದ್ ಸಲೀಮ್ ಮತ್ತು ಕಾರವಾನ್ ಮ್ಯಾಗಜಿನ್‌ನ ಖಾತೆಗಳು ಈಗಲೂ ಕಾರ್ಯನಿರ್ವಹಿಸುತ್ತಿದ್ದು, ಇವೂ ಸೇರಿದಂತೆ ಬಾಕಿ 37 ಖಾತೆಗಳ ವಿರುದ್ಧ ತನಿಖೆ ಮುಂದುವರಿದಿದೆ.
ಐಟಿ ಸೆಕ್ರೆಟರಿ ಅಜಯ್ ಸಾಹಿ° ಅವರು ಟ್ವಿಟರ್ ಎಕ್ಸಿಕ್ಯೂಟಿವ್ ಮೊನಿಕ್ ಮೆಚೆ, ಜಿಮ್ ಬೇಕರ್ ಜತೆಗೆ ಬುಧವಾರ ನಡೆಸಿದ್ದ ಸಭೆಯ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
ಚೀನೀ’ ಅಪಪ್ರಚಾರಕ್ಕೆ “ಕೂ’ ಸ್ಪಷ್ಟನೆ: ಟ್ವಿಟರ್ ವಿರುದ್ಧ ದೇಶದೆಲ್ಲೆಡೆ ಅಸಮಾಧಾನದ ಹೊಗೆ ಹೆಚ್ಚುತ್ತಿದ್ದಂತೆ, ವಿದೇಶಿ ಮತ್ತು ದೇಶೀ ಸಾಮಾಜಿಕ ಜಾಲತಾಣಗಳ ಸಮರ ಮತ್ತೂಂದು ಮಜಲು ಮುಟ್ಟಿದೆ. ಟ್ವಿಟರ್ ಮಾದರಿಯ ದೇಸೀ ಸಾಮಾಜಿಕ ಜಾಲತಾಣ “ಕೂ’ ಆ್ಯಪ್‌ನ ಡೌನ್‌ಲೋಡ್ ದುಪ್ಪಟ್ಟಾಗಿದ್ದು, ಇದರ ಬೆನ್ನಲ್ಲೇ “ಕೂ’ ಆ್ಯಪ್‌ನಲ್ಲಿ ಚೀನದ ಸಂಸ್ಥೆಯೊಂದು ಹೂಡಿಕೆ ಮಾಡಿದೆ’ ಎಂದು ಟ್ವೀಟ್‌ನಲ್ಲಿ ಒಬ್ಬರು ಆರೋಪಿಸಿದ್ದಾರೆ. ಕ್ಸಿಯೋಮಿಯ ಹೂಡಿಕೆ ಘಟಕ ಶುನ್‌ವೈ ಕ್ಯಾಪಿಟಲ್, “ಕೂ’ ನಲ್ಲಿ ಹೂಡಿಕೆ ಮಾಡಿದೆ ಎನ್ನಲಾಗಿದ್ದು, ದತ್ತಾಂಶ ಸುರಕ್ಷತೆ ಬಗ್ಗೆಯೂ ಶಂಕೆ ವ್ಯಕ್ತಪಡಿಸಲಾಗಿದೆ.
ಇದಕ್ಕೆ “ಕೂ’ ಸಿಇಒ ಅಪ್ರಮೇಯ ರಾಧಾಕೃಷ್ಣ ಪ್ರತಿಕ್ರಿಯಿಸಿದ್ದು, “ಕೂ’ ನಲ್ಲಿ ಯಾವ ಚೀನೀ ಸಂಸ್ಥೆಯೂ ಹಣ ಹೂಡಿಲ್ಲ. ಬಾಂಬಿನೇಟ್ ಎನ್ನುವುದು ಕೂ ಮತ್ತು ವೊಕಾಲ್‌ನ ಪೋಷಕ ಸಂಸ್ಥೆ. ವೊಕಾಲ್‌ನಲ್ಲಿ ಶುನ್‌ವೈ ಸಂಸ್ಥೆ ಹೂಡಿಕೆ ಮಾಡಿದ್ದರೂ, ಅದರ ಷೇರುಗಳನ್ನು ಖರೀದಿಸುವ ಪ್ರಕ್ರಿಯೆ ಸಾಗಿದೆ. ಭಾರತದ ಅತ್ಯುನ್ನತ ಉದ್ಯಮಿಗಳು “ಕೂ’ ಆ್ಯಪ್‌ಗೆ ಹೂಡಿಕೆ ಮಾಡಿದ್ದಾರೆ’ ಎಂದು “ಟೈಮ್ಸ್ ಆಫ್ ಇಂಡಿಯಾ’ಕ್ಕೆ ಸ್ಪಷ್ಟನೆ ನೀಡಿದ್ದಾರೆ.
ಸುಪ್ರೀಂ ಸೂಚನೆ: ನಕಲಿ ಖಾತೆ ತೆರೆದು ದ್ವೇಷದ ಪೋಸ್ಟ್‌ಗಳನ್ನು ಹಾಕುತ್ತಿರುವವರ ವಿರುದ್ಧ ನಿಯಮಾವಳಿ ರೂಪಿಸುವಂತೆ ಸೂಚಿಸಿ, ಸುಪ್ರೀಂ ಟ್ವಿಟರ್ ಮತ್ತು ಕೇಂದ್ರ ಸರಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ. ಗಣ್ಯವ್ಯಕ್ತಿಗಳೂ ಸೇರಿದಂತೆ ಹಲವರ ಹೆಸರಿನಲ್ಲಿ ಫೇಸ್‌ಬುಕ್, ಟ್ವಿಟರ್‌ನಲ್ಲಿ ನಕಲಿ ಖಾತೆಗಳು ದ್ವೇಷದ ಪೋಸ್ಟ್ ಹಾಕುತ್ತಿವೆ. ಇವುಗಳ ನಿಯಂತ್ರಣಕ್ಕೆ ಕ್ರಮ ರೂಪಿಸಬೇಕು ಎಂದು ಆಗ್ರಹಿಸಿ ವಿನೀತ್ ಗೋಯೆಂಕಾ ಎಂಬ ಅವರು ಅರ್ಜಿ ಸಲ್ಲಿಸಿದ್ದರು. ಸುಪ್ರೀಂನ ಮುಖ್ಯ ನ್ಯಾ| ಎಸ್.ಎ. ಬೋಬೆx ನೇತೃತ್ವದ ಪೀಠ ಅರ್ಜಿ ವಿಚಾರಣೆ ನಡೆಸಿತ್ತು.
ಭಾರತದಲ್ಲಿ 3.5 ಕೋಟಿ ಟ್ವಿಟರ್ ಖಾತೆ, 35 ಕೋಟಿಗೂ ಅಧಿಕ ಫೇಸ್‌ಬುಕ್ ಖಾತೆಗಳಿವೆ. ಈ ಪೈಕಿ ಟ್ವಿಟರಿನಲ್ಲಿ ಕನಿಷ್ಠ 35 ಲಕ್ಷ, ಫೇಸ್‌ಬುಕ್‌ನಲ್ಲಿ 3.5 ಕೋಟಿ ನಕಲಿ ಖಾತೆಗಳಿವೆ ಎಂದು ಅರ್ಜಿಯಲ್ಲಿ ಆಪಾದಿಸಲಾಗಿತ್ತು.
ಲೇಬಲ್ ಪಟ್ಟಿಯಲ್ಲಿ ಭಾರತ ಇಲ್ಲ :
ಸರಕಾರದ ಪ್ರಮುಖ ವ್ಯಕ್ತಿಗಳು ಮತ್ತು ಅದಕ್ಕೆ ಸೇರಿಕೊಂಡ ಸಂಸ್ಥೆಗಳು ಹೊಂದಿರುವ ಖಾತೆಗಳನ್ನು ದೃಢಪಡಿ ಸುವ ನಿಟ್ಟಿನಲ್ಲಿ ವಿಶೇಷ ಲೇಬಲ್ ಹೊಂದಲು ಟ್ವಿಟರ್ ತೀರ್ಮಾನಿಸಿದೆ. ಕೆನಡಾ, ಕ್ಯೂಬಾ ಸೇರಿದಂತೆ 17 ರಾಷ್ಟ್ರಗ ಳಲ್ಲಿ ಫೆ.17ರಿಂದ ಅಂಶ ಜಾರಿಯಾಗ ಲಿದೆ. ಗಮನಾರ್ಹ ಅಂಶವೆಂದರೆ ಈ ಪಟ್ಟಿಯಲ್ಲಿ ಭಾರತ ಸೇರ್ಪಡೆಯಾಗಿಲ್ಲ. ಕಳೆದ ವರ್ಷದ ಆಗಸ್ಟ್‌ನಿಂದ ಈ ವ್ಯವಸ್ಥೆ ಜಾರಿಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್
Hotel Room: ಹೋಟೆಲ್ ಕೊಠಡಿಯಲ್ಲೇ ವೈದ್ಯನ ನಿಗೂಢ ಸಾ*ವು… ಸ್ಥಳದಲ್ಲಿ ಡೆತ್ ನೋಟ್ ಪತ್ತೆ
Aligarh ಮುಸ್ಲಿಮ್ ವಿವಿ ಅಲ್ಪಸಂಖ್ಯಾತ ಸ್ಥಾನಮಾನ ವಿಚಾರ ಹೊಸ ಪೀಠ ನಿರ್ಧರಿಸಲಿದೆ:ಸುಪ್ರೀಂ
Jammu – Kashmir: ಮತ್ತೆ ಅಟ್ಟಹಾಸ ಮೆರೆದ ಉಗ್ರರು… ಇಬ್ಬರನ್ನು ಅಪಹರಿಸಿ ಹ*ತ್ಯೆ
Maharashtra: ಮತ ನೀಡಿದರೆ ಮದುವೆ ಮಾಡಿಸುವೆ: ಶರದ್ ಬಣದ ನಾಯಕ
MUST WATCH
ಹೊಸ ಸೇರ್ಪಡೆ
Our beautiful blessing..; ಚೊಚ್ಚಲ ಮಗುವಿನ ಖುಷಿ ಹಂಚಿಕೊಂಡ ರಾಹುಲ್ – ಅಥಿಯಾ ಶೆಟ್ಟಿ
ಬೆಳಗಾವಿಯ ಶ್ರೀನಿವಾಸ ಠಾಣೇದಾರ ಅಮೆರಿಕ ಸಂಸತ್‌ಗೆ ಆಯ್ಕೆ
Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್
Sirsi: ಗವಿನಗುಡ್ಡ ಸುತ್ತ ಕಬ್ಬು, ಭತ್ತದ ಗದ್ದೆಗಳಿಗೆ ಕಾಡಾನೆ ದಾಳಿ… ಬೆಳೆ ನಾಶ
Waqf Property: ಸಚಿವ ಜಮೀರ್ ಅಶ್ವಮೇಧ ಕುದುರೆ ತಡೆದಿದ್ದೇನೆ: ಶಾಸಕ ಯತ್ನಾಳ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.