ಪಾಕ್ ಗುಂಡಿನ ದಾಳಿಗೆ ಇಬ್ಬರು ಮಕ್ಕಳು ಬಲಿ
Team Udayavani, Oct 3, 2017, 6:45 AM IST
ಜಮ್ಮು: ಗಡಿಯಲ್ಲಿ ಸೋಮವಾರ ಪಾಕಿಸ್ಥಾನದ ಸೇನೆ ನಡೆಸಿರುವ ಅಟ್ಟಹಾಸಕ್ಕೆ ಇಬ್ಬರು ಮಕ್ಕಳು ಪ್ರಾಣತೆತ್ತಿದ್ದಾರೆ. ಜಮ್ಮು-ಕಾಶ್ಮೀರದ ಪೂಂಛ… ಜಿಲ್ಲೆಯ ಗಡಿ ನಿಯಂತ್ರಣ ರೇಖೆಯಲ್ಲಿ ಪಾಕ್ ಸೇನೆಯು ಬೆಳ್ಳಂಬೆಳಗ್ಗೆಯೇ ಕದನ ವಿರಾಮ ಉಲ್ಲಂಘಿಸಿದೆ. ಅತ್ತ ಕಡೆಯಿಂದ ತೂರಿಬಂದ ಗುಂಡುಗಳು ತಾಕಿ, ಇಬ್ಬರು ಮಕ್ಕಳು ಸ್ಥಳದಲ್ಲೇ ಮೃತಪಟ್ಟರೆ, 12ಕ್ಕೂ ಹೆಚ್ಚು ನಾಗರಿಕರು ಗಾಯ ಗೊಂಡಿದ್ದಾರೆ. ಗಾಯಾಳುಗಳ ಪೈಕಿಯೂ 5 ಮಕ್ಕಳು ಸೇರಿದ್ದಾರೆ. ಇವರಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ.
ಪದೇ ಪದೆ ಕದನ ವಿರಾಮ ಉಲ್ಲಂಘಿಸುತ್ತಿದ್ದರೂ ಭಾರತದ ಮೇಲೆ ಗೂಬೆ ಕೂರಿಸುತ್ತಾ ಬಂದಿರುವ ಪಾಕಿಸ್ಥಾನವು ಸೋಮವಾರ ಬೆಳಗ್ಗೆ 6.30ರ ವೇಳೆಗೆ ದಿಗ್ವಾರ್, ಶಾಹಪುರ್, ಖಸ್ಬಾ, ಕೆರ್ನಿ ಮತ್ತು ಮಂಧಾರ್ ವಲಯಗಳಲ್ಲಿ ಏಕಾಏಕಿ ಅಪ್ರಚೋದಿತ ದಾಳಿ ನಡೆಸಿದೆ. ಕೂಡಲೇ ನಮ್ಮ ಯೋಧರು ಪ್ರತಿದಾಳಿ ನಡೆಸಿದರಾದರೂ, ಅಷ್ಟರಲ್ಲಾಗಲೇ 15 ಮತ್ತು 9 ವರ್ಷ ವಯಸ್ಸಿನ ಇಬ್ಬರು ಮಕ್ಕಳು ಬಲಿಯಾಗಿದ್ದರು. ಬೆಳಗ್ಗೆ ಆರಂಭವಾದ ಗುಂಡಿನ ಚಕಮಕಿ 11.30ರ ವರೆಗೂ ಮುಂದುವರಿದಿತ್ತು ಎಂದು ಪೂಂಛ… ಜಿಲ್ಲಾ ಅಭಿವೃದ್ಧಿ ಆಯುಕ್ತ ತಾರಿಕ್ ಅಹ್ಮದ್ ತಿಳಿಸಿದ್ದಾರೆ. ಇದೇ ವೇಳೆ, ನಾಗರಿಕರ ಸುರಕ್ಷತೆಗಾಗಿ ಸರಕಾರವು ಭೂಮಿಯಡಿ 40 ಸಮುದಾಯ ಬಂಕರ್‌ಗಳ ನಿರ್ಮಾಣ ಕಾರ್ಯ ಶುರುವಾಗಿದೆ ಎಂದೂ ಹೇಳಿದ್ದಾರೆ.
ನುಸುಳುಕೋರರ ಹತ್ಯೆ
ಇಲ್ಲಿನ ರಾಂಪುರ ಮತ್ತು ತಂಗ್‌ಧಾರ್‌ವಲಯದ ಎಲ್‌ಒಸಿ ಮೂಲಕ ಭಾರತದೊಳಕ್ಕೆ ನುಸುಳಲು ಯತ್ನಿಸಿದ ನಾಲ್ವರು ಉಗ್ರರನ್ನು ಸೇನಾಪಡೆ ಸದೆಬಡಿದಿದೆ. ಸೋಮವಾರ ಅತ್ತ ಪಾಕ್ ಗುಂಡಿನ ದಾಳಿ ನಡೆಸುತ್ತಿದ್ದಂ ತೆಯೇ, ಇತ್ತ ಒಳನುಸುಳಲು ಉಗ್ರರು ಸಂಚು ರೂಪಿಸಿದ್ದರು. ಆದರೆ, ಕೂಡಲೇ ಕಾರ್ಯಪ್ರವೃತ್ತರಾದ ಯೋಧರು, ನುಸುಳು ಕೋರರನ್ನು ಹತ್ಯೆಗೈದು, ಅವರಲ್ಲಿದ್ದ ಶಸ್ತ್ರಾಸ್ತ್ರಗಳನ್ನು ವಶಪಡಿಸಿ ಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tamil Nadu: ನಮಗೆ ಯಾರೇ ಎದುರಾಳಿಯಾದ್ರೂ 2026ರಲ್ಲಿ ಗೆಲ್ಲೋದು ನಾವೇ: ಡಿಸಿಎಂ ಉದಯನಿಧಿ
BJP,ಮೋದಿ ಸಾಂವಿಧಾನಿಕ ಮೌಲ್ಯಗಳ ನಾಶಕ್ಕೆ ಯತ್ನಿಸುತ್ತಿದ್ದಾರೆ: ಪ್ರಿಯಾಂಕಾ ಕಿಡಿ
Jaipur; ರಾಷ್ಟ್ರೀಯ ಉದ್ಯಾನವನದಿಂದ ಭಾರೀ ಸಂಖ್ಯೆಯ ಹುಲಿಗಳು ನಾಪತ್ತೆ!
Folk singer; ಪದ್ಮಭೂಷಣ ಪುರಸ್ಕೃತೆ ಶಾರದಾ ಸಿನ್ಹಾ ವಿಧಿವಶ
Assembly Election: ಮಹಾರಾಷ್ಟ್ರ ಗೆಲ್ಲಲು 10 ಗ್ಯಾರಂಟಿಗಳ ಕೊಟ್ಟ ʼಮಹಾಯುತಿʼ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.