ಮುಂಬಯಿ : ವಜ್ರ ದರೋಡೆ ಮಾಡಿದ ಇಬ್ಬರು ಪೊಲೀಸರ ಸಹಿತ ನಾಲ್ವರು ಅರೆಸ್ಟ್
Team Udayavani, Aug 4, 2017, 12:34 PM IST
ಮುಂಬಯಿ : ಪೊಲೀಸರೇ ವಜ್ರ ದರೋಡೆಯಲ್ಲಿ ಶಾಮೀಲಾಗಿ ಅರೆಸ್ಟ್ ಆದ ವಿಲಕ್ಷಣಕಾರಿ ಘಟನೆ ಮುಂಬಯಿಯಲ್ಲಿ ನಡೆದಿದೆ.
ಇಲ್ಲಿನ ಚಿನ್ನಾಭರಣಗಳ ಮಳಿಗೆಯೊಂದರಿಂದ 24 ಲಕ್ಷ ರೂ. ಮೌಲ್ಯದ ವಜ್ರಗಳನ್ನು ದರೋಡೆ ಮಾಡಿದ ಪ್ರಕರಣದಲ್ಲಿ ಇಬ್ಬರು ಪೊಲೀಸರು ಸೇರಿದಂತೆ ಒಟ್ಟು ನಾಲ್ಕು ಮಂದಿಯನ್ನು ಬಂಧಿಸಲಾಗಿದೆ.
ಮಧ್ಯವರ್ತಿಯಾಗಿರುವ ರಾಜ್ ಎಂಬಾತ ನಗರ ಹೊರವಲಯದ ಬೊರಿವಲಿಯಲ್ಲಿನ ಚಿನ್ನಾಭರಣ ವ್ಯಾಪಾರಿಗೆ ಗುಜರಾತ್ ಮೂಲದ ಉದ್ಯಮಿಯೊಬ್ಬರಿಂದ ವಜ್ರ ಖರೀದಿಸುವ ಡೀಲ್ ಕುದುರಿಸಿದ್ದ.
ಬೊರಿವಲಿಯಲ್ಲಿನ ಚಿನ್ನದ ವ್ಯಾಪಾರಿಯ ಮಳಿಗೆಗೆ ಬುಧವಾರ ಸಂಜೆ, ಓರ್ವ ಮಹಿಳೆ ಸೇರಿದಂತೆ ಇಬ್ಬರು ಸ್ನೇಹಿತರೊಂದಿಗೆ ಬಂದ. ಗುಜರಾತ್ ಮೂಲದ ಉದ್ಯಮಿಯೂ ಅಲ್ಲಿಗೆ ಬಂದಿದ್ದರು.
ವಜ್ರ ಖರೀದಿಸುವ ಡೀಲ್ ಆರಂಭಗೊಂಡಂತೆಯೇ ಅಂಗಡಿಗೆ ಇಬ್ಬರು ಪೊಲೀಸರು ಬಂದು “ಇಲ್ಲೇನೋ ಅಕ್ರಮ ವ್ಯವಹಾರ ನಡೆಯುತ್ತಿರುವ ಬಗ್ಗೆ ನಮಗೆ ಮಾಹಿತಿ ಸಿಕ್ಕಿದೆ’ ಎಂದು ವಜ್ರಗಳನ್ನು ತಮ್ಮ ವಶಕ್ಕೆ ತೆಗೆದುಕೊಂಡು ಜ್ಯುವೆಲರ್ ಮತ್ತು ರಾಜ್ ನನ್ನು ತಮ್ಮ ಪೊಲೀಸ್ ವ್ಯಾನಿನಲ್ಲಿ ಕೊಂಡೊಯ್ದರು.
ಬಳಿಕ ದಕ್ಷಿಣ ಮುಂಬಯಯ ಕ್ರಾಫರ್ಡ್ ಮಾರ್ಕೆಟ್ ಬಳಿ ಅವರನ್ನು ಇಳಿಸಿದ ಪೊಲೀಸರು ”ಸಂಜೆಯ ವೇಳೆಗೆ ವಜ್ರದ ದಾಖಲೆ ಪತ್ರಗಳೊಂದಿಗೆ ಪರಿಶೀಲನೆಗಾಗಿ ಬನ್ನಿ, ಹಾಗೆ ಬರುವಾಗ ಉದ್ಯಮಿಯನ್ನೂ ಕರೆತನ್ನಿ” ಎಂದು ಅಪ್ಪಣೆ ಕೊಡಿಸಿದರು.
ಆಗ ಜ್ಯುವೆಲ್ಲರ್‌ಗೆ ಯಾಕೋ ಸಂದೇಹ ಬಂದು ಒಡನೆಯೇ ಅವರು ಬೊಲಿವಲಿ ಪೊಲೀಸ್ ಸ್ಟೇಶನ್‌ಗೆ ಫೋನ್ ಮಾಡಿ ವಿಷಯ ತಿಳಿಸಿ ದೂರು ದಾಖಲಿಸಿದರು.
ಪೊಲೀಸರು ಮಳಿಗೆಯಲ್ಲಿನ ಸಿಸಿಟಿವಿ ಚಿತ್ರಿಕೆಗಳನ್ನು ಪರಿಶೀಲಿಸಿ ದರೋಡೆ ಕೃತ್ಯ ನಡೆಸಿದ ಇಬ್ಬರು ಪೊಲೀಸರನ್ನು ಗುರುತಿಸಿ ಬಂಧಿಸಿದರು. ಜತೆಗೆ ಮಧ್ಯವರ್ತಿ ರಾಜ್ ಹಾಗೂ ಆತನ ಇಬ್ಬರು ಸಹಚರರನ್ನು ಕೂಡ (ಮಹಿಳೆ ಸೇರಿ) ಬಂಧಿಸಿದರು.
ಪೊಲೀಸರು ಐಪಿಸಿ 395ನೇ ಸೆಕ್ಷನ್ (ದರೋಡೆ) ಪ್ರಕಾರ ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ
Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು
Gujarat: 700 ಕೆ.ಜಿ. ಡ್ರಗ್ಸ್ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ
Bombay high court: ವಯಸ್ಕಳಲ್ಲದ ಪತ್ನಿ ಜತೆ ಒಪ್ಪಿತ ಲೈಂಗಿಕ ಸಂಬಂಧ ರೇ*ಪ್
Jharkhand; ವಿಮಾನದಲ್ಲಿ ತಾಂತ್ರಿಕ ದೋಷ: 2 ಗಂಟೆ ಕಾದ ಪ್ರಧಾನಿ ಮೋದಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.