ಬಾಲಕಿ ಮೇಲೆ ಇಬ್ಬರು ಬಸ್ ಚಾಲಕರು, ಕಂಡಕ್ಟರ್‌ನಿಂದ ಗ್ಯಾಂಗ್ ರೇಪ್
Team Udayavani, Jun 7, 2017, 10:56 AM IST
ಸೇಲಂ : 2012ರಲ್ಲಿ ದಿಲ್ಲಿಯಲ್ಲಿ ಚಲಿಸುವ ಬಸ್ಸಿನಲ್ಲಿ ನಿರ್ಭಯಾ ಮೇಲೆ ನಡೆದಿದ್ದ ಅತ್ಯಮಾನುಷ ಗ್ಯಾಂಗ್ ರೇಪ್ ಪ್ರಕರಣವನ್ನು ನೆನಪಿಸುವ ರೀತಿಯಲ್ಲಿ ಸೇಲಂ ಜಿಲ್ಲೆಯ ನಾರಾಯಣಪಾಳ್ಯಂ ನಲ್ಲಿ ಹದಿನೈದರ ಹರೆಯದ ಬಾಲಕಿಯ ಮೇಲೆ ಇಬ್ಬರು ಬಸ್ ಚಾಲಕರು ಮತ್ತು ಓರ್ವ(ಇದನ್ನೂ ಓದಿ:ಚಲಿಸುತ್ತಿದ್ದ ಆಟೋದಿಂದ ಮಗುವನ್ನು ಎಸೆದು ತಾಯಿ ಮೇಲೆ ಗ್ಯಾಂಗ್ ರೇಪ್) ಕಂಡಕ್ಟರ್ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ಮೊನ್ನೆ ಸೋಮವಾರ ರಾತ್ರಿ ಈ ಘಟನೆ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಸೋಮವಾರ ರಾತ್ರಿ ಗ್ರಾಮವೊಂದರಲ್ಲಿ ಬಸ್ಸನ್ನು ನಿಲ್ಲಿಸಿದ ಬಳಿಕ ಹುಡುಗಿಯ ಮೇಲೆ ಗ್ಯಾಂಗ್ ರೇಪ್ ಎಸಗಿದ ಮೂವರೂ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಹುಡುಗಿಯ ಆಕ್ರಂದನ ಕೇಳಿಸಿಕೊಂಡ ಗ್ರಾಮಸ್ಥರು ಒಡನೆಯೇ ಪೊಲೀಸರಿಗೆ ಸುದ್ದಿ ಮುಟ್ಟಿಸಿದರು. ಆಗಲೇ ಆಕೆಯ ಮೇಲೆ ಕಾಮುಕರಿಂದ ಸಾಮೂಹಿಕ ಅತ್ಯಾಚಾರ ನಡೆದಿರುವುದು ಬೆಳಕಿಗೆ ಬಂತು.
ಪೊಲೀಸರ ಪ್ರಕಾರ ಹುಡುಗಿಯು ಮೊನ್ನೆ ಸೋಮವಾರ ಮನೆಯಲ್ಲಿ ಹೆತ್ತವರೊಂದಿಗೆ ಜಗಳ ಮಾಡಿ ಸಿಟ್ಟಿನಿಂದ ಮನೆಯನ್ನು ತ್ಯಜಿಸಿ ಹೊರಗೆ ಅಂಡಲೆಯುತ್ತಿದ್ದಳು. ಮಧ್ಯಾಹ್ನದ ಹೊತ್ತಿಗೆ ಸ್ಥಳೀಯ ಬಸ್ಸೊಂದನ್ನು ಏರಿ ರಾತ್ರಿ ತನಕವೂ ಅದೇ ಬಸ್ಸಿನಲ್ಲಿ ಅತ್ತಿಂದಿತ್ತ ಪ್ರಯಾಣಿಸುತ್ತಲೇ ಇದ್ದಳು. ಹಾಗಾಗಿ ರಾತ್ರಿ ವೇಳೆ ಈಕೆ ಕಾಮುಕರಿಗೆ ಸುಲಭದ ತುತ್ತಾದಳು.
ಬಂಧಿತರನ್ನು ಬಸ್ ಚಾಲಕರಾದ ಸನ್ಯಾಸಿಕುಂಡು ನಿವಾಸಿ ಎಸ್ ಮಣಿವಣ್ಣನ್ 31, ಅತಿಕಾರಿಪಟ್ಟಿ ನಿವಾಸಿ ಪಿ. ಮುರುಗನ್ 35, ಮತ್ತು ಸನ್ಯಾಸಿಕುಂಡು ನಿವಾಸಿಯಾಗಿರುವ ಕಂಡಕ್ಟರ್ ಕೆ ಪೆರುಮಾಳ್ 22 ಎಂದು ಗುರುತಿಸಲಾಗಿದೆ. ಇವರು ಹುಡುಗಿಯನ್ನು ಸಮಾಧಾನಿಸುತ್ತಾ ಆಕೆಯ ಸ್ನೇಹವನ್ನು ಗಳಿಸಿದ್ದರು. ಬಳಿಕ ರಾತ್ರಿ ಹೊತ್ತು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದರು.
9ನೇ ಕ್ಲಾಸ್ ತನಕ ಓದಿರುವ ಹುಡುಗಿಯು ಮೂರು ವರ್ಷಗಳ ಹಿಂದೆ ಇದೇ ಜಿಲ್ಲೆಯ ವೀರನಂ ಗ್ರಾಮದ ನಿವಾಸಿ 20ರ ಹರೆಯದ ಜಿ ವಿಜಯನ್ ಎಂಬಾತನೊಂದಿಗೆ ಸಂಬಂಧ ಹೊಂದಿದ್ದಳು. ಆತ ಹಲವು ಬಾರಿ ಆಕೆಯನ್ನು ರೇಪ್ ಮಾಡಿದ್ದ ಮತ್ತು ಈಚೆಗೆ ತನ್ನ ಸ್ನೇಹಿತನಾಗಿರುವ ಕೆ ಪೆರುಮಾಳ್ ಗೆ ಆಕೆಯನ್ನು ಪರಿಚಯಿಸಿದ್ದ. ಅನಂತರದಲ್ಲಿ ಆಕೆ ಪೆರುಮಾಳ್‌ಗೆ ನಿಕಟವಾಗಿದ್ದಳು.
ಹುಡುಗಿಯ ಹೇಳಿಕೆಯನ್ನು ಆಧರಿಸಿ ಓಮಳೂರು ಪೊಲೀಸರು ವಿಜಯನ್ ನನ್ನು ಕೂಡ ಬಂಧಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
UI Movie: 9 ವರ್ಷ ಬಳಿಕ ಉಪ್ಪಿ ಡೈರೆಕ್ಟ್ ಮಾಡಿದ ಯು-ಐ ಸಿನಿಮಾದ ಹೈಲೈಟ್ಸ್ ಏನು?
CT Ravi Arrested: ಬಿಜೆಪಿ ಕರೆ ನೀಡಿದ್ದ ಬಂದ್ ಗೆ ಚಿಕ್ಕಮಗಳೂರಿನಲ್ಲಿ ಮಿಶ್ರ ಪ್ರತಿಕ್ರಿಯೆ
Belagavi: ಹೆಬ್ಬಾಳಕರ್ ಕ್ಷೇತ್ರದಲ್ಲೇ ಸಿ.ಟಿ.ರವಿಗೆ ವೈದ್ಯಕೀಯ ತಪಾಸಣೆ
Electricity theft: ಎಸ್ಪಿ, ಸಂಸದನ ವಿರುದ್ಧ ದೂರು ದಾಖಲು
Afghanistan: 2 ಅಪಘಾತ: 50 ಸಾವು, 76 ಮಂದಿಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.