ಬೋಗಸ್ ವೀಸಾ ನೀಡಿ 50 ಮಂದಿಗೆ ವಂಚಿಸಿದ ಜಾಲ ಬಯಲು; ಇಬ್ಬರ ಸೆರೆ
Team Udayavani, Aug 22, 2017, 12:29 PM IST
ಥಾಣೆ : ಬೋಗಸ್ ವೀಸಾ ಮತ್ತು ವಿಮಾನ ಟಿಕೆಟ್ ನೀಡಿ ಸುಮಾರು ಐವತ್ತು ಜನರನ್ನು ವಂಚಿಸಿದ ಇಬ್ಬರನ್ನು ಬಂಧಿಸುವ ಮೂಲಕ ಥಾಣೆ ಪೊಲೀಸರು ನಕಲಿ ವೀಸಾ ಜಾಲವನ್ನು ಬಯಲಿಗೆಳೆದಿದ್ದಾರೆ.
ಮುಂಬ್ರಾದಲ್ಲಿನ ಆರೋಪಿಗಳಲ್ಲಿ ಒಬ್ಟಾತನ ಮನೆಗೆ ದಾಳಿ ನಡೆಸಿದಾಗ ಅಲ್ಲಿ 89 ಪಾಸ್ ಪೋರ್ಟ್, 62 ವೀಸಾ, ಒಂದು ಲ್ಯಾಪ್ ಟಾಪ್ ಮತ್ತು ಎರಡು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಯಿತು ಎಂದು ಹೆಚ್ಚುವರಿ ಪೊಲೀಸ್ ಕಮಿಷನರ್ (ಕ್ರೈಂ) ಮಕರಂದ್ ರಾನಡೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪೊಲೀಸರ ಪ್ರಕಾರ ಆರು ಮಂದಿ ಈ ನಕಲಿ ವೀಸಾ, ಪಾಸ್ ಪೋರ್ಟ್ ನೀಡುವ ಬೋಗಸ್ ಉದ್ಯೋಗ ನೇಮಕಾತಿ ಕೇಂದ್ರವನ್ನು ಮುಂಬ್ರಾದಲ್ಲಿ ನಡಸುತ್ತಿದ್ದಾರೆ. ಅಮಾಯಕ ಗಲ್ಫ್ ಉದ್ಯೋಗಾಕಾಂಕ್ಷಿಗಳಿಗೆ ಇವರು ದುಬೈ ಮತ್ತು ಕುವೈಟ್ ವಿಮಾನ ನಿಲ್ದಾಣಗಳಲ್ಲಿ ಉದ್ಯೋಗ ದೊರಕಿಸುವ ಭರವಸೆಯನ್ನು ಇವರು ನೀಡುತ್ತಿದ್ದರು.
ವೀಸಾ ಮತ್ತು ವಿಮಾನ ಟಿಕೆಟ್ ಕೊಡಿಸುವ ಭರವಸೆಯ ಮೇಲೆ ಇವರಿಗೆ 50,000 ರೂ. ಕೊಟ್ಟು ಮೋಸ ಹೋದ ಹುಡುಗಿಯೋರ್ವಳು ಕೊಟ್ಟ ದೂರಿನ ಮೇಲೆ ಪೊಲೀಸರು ಕಾರ್ಯಾಚರಿಸಿದಾಗ ಇಡಿಯ ಜಾಲ ಬಯಲಿಗೆ ಬಂತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Divorce: 29 ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡಿದ ಎ.ಆರ್.ರೆಹಮಾನ್
ಮಣಿಪುರವನ್ನು ರಕ್ಷಿಸಿ: ರಾಷ್ಟ್ರಪತಿಗೆ ಖರ್ಗೆ ಪತ್ರ
Chennai: ಕೃಷ್ಣಗೆ ಎಂ.ಎಸ್.ಸುಬ್ಬುಲಕ್ಷ್ಮಿಪ್ರಶಸ್ತಿ ನೀಡಿಕೆಗೆ ಮದ್ರಾಸ್ ಹೈಕೋರ್ಟ್ ತಡೆ
Savarkar defamation case:: ಡಿ.2ರಂದು ಖುದ್ದು ಹಾಜರಾಗಲು ರಾಹುಲ್‌ಗೆ ಆದೇಶ
Flight: ಭಾರತ, ಚೀನಾ ನಡುವೆ ನೇರ ವಿಮಾನಯಾನ ಸೌಲಭ್ಯ ಪುನಾರಂಭ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.