ಸಂಗಾತಿಗಾಗಿ ಭಾರೀ ಗಾತ್ರದ ಹಾವುಗಳ ನಡುವೆ ಕಾದಾಟ: ಮೈನವಿರೇಳಿಸುವ ವಿಡಿಯೋ ವೈರಲ್
Team Udayavani, Jul 31, 2020, 11:58 AM IST
ನವದೆಹಲಿ: ಭಾರೀ ಗಾತ್ರದ ಎರಡು ಹಾವುಗಳು ಕಾದಾಡುವ ವಿಡಿಯೋವೊಂದು ಸದ್ಯ ಟ್ವಿಟ್ಟರ್ ನಲ್ಲಿ ವೈರಲ್ ಆಗಿದ್ದು ಭಾರೀ ಕೂತೂಹಲ ಕೆರಳಿಸಿದೆ. ಅರಣ್ಯಾಧಿಕಾರಿ ಸುಶಾಂತ ನಂದ ಎನ್ನುವವರು ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದು ರ್ಯಾಟ್ ಸ್ನೇಕ್ ಎಂದು ಗುರುತಿಸಲಾಗಿದೆ,
ಮೈ ನವಿರೇಳಿಸುವ ಹಾವುಗಳ ಈ ಕಾಳಗವು ಒಂದು ಸಣ್ಣ ನೀರಿನ ತೊರೆಯಲ್ಲಿ ಆರಂಭವಾಗಿ ಪರಸ್ಪರ ಸುತ್ತಿಕೊಂಡು ದಂಡೆಯ ಮೇಲ್ಬಾಗಕ್ಕೆ ಬಂದಿದೆ. ಪ್ರಾಬಲ್ಯ ಸಾಧಿಸಲಿಕ್ಕಾಗಿಯೇ ಹಾವುಗಳು ಕಾದಾಟ ನಡೆಸಿವೆ ಎಂದೇ ಬಣ್ಣಿಸಲಾಗಿದೆ.
ಅದಾಗ್ಯೂ ಈ ಹಾವುಗಳು ಮಿಲನದಲ್ಲಿ ತೊಡಗಿಸಿಕೊಳ್ಳುತ್ತಿವೆ ಎಂದು ನೀವು ಆಲೋಚಿಸುತ್ತಿದ್ದರೆ ನಿಮ್ಮ ಊಹೆ ತಪ್ಪು. ಇವು ಗಂಡು ಹಾವುಗಳಾಗಿದ್ದು ತಮ್ಮ ಸಂಗಾತಿಯನ್ನು ರಕ್ಷಿಸಿಕೊಳ್ಳಲು ಮತ್ತು ಪ್ರದೇಶದ ಉಳಿವಿಗಾಗಿ ಹೋರಾಡುತ್ತಿವೆ ಎಂದು ಸುಶಾಂತ್ ನಂದ ತಿಳಿಸಿದ್ದಾರೆ.
Rat snakes combat for dominance.
Two male fighting to define their territory & defend their mate. pic.twitter.com/FVn2FIXHte— Susanta Nanda IFS (@susantananda3) July 31, 2020
ನ್ಯಾಷನಲ್ ಜಿಯಾಗ್ರಾಫಿಕ್ ಪ್ರಕಾರ, ಎರಡು ಹಾವುಗಳು ಈ ರೀತಿ ಪರಸ್ಪರ ಸುತ್ತಿಕೊಂಡು ಕಾಳಗ ನಡೆಸುವುದನ್ನು plaiting combat ಎಂದು ಕರೆಯುತ್ತಾರೆ. ಈ ಹೋರಾಟ ಒಂದು ಹಾವು ಆಯಾಸಗೊಂಡು ಕೆಳಗೆ ಬೀಳುವರೆಗೂ ನಿರಂತರವಾಗಿ ನಡೆಯುತ್ತದೆ ಎಂದು ಉಲ್ಲೇಖಿಸಲಾಗಿದೆ.
That’s a wrong perception?
— Susanta Nanda IFS (@susantananda3) July 31, 2020
ಜುಲೈ 31, 2020 ರಂದು ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದ್ದು ವ್ಯಾಪಕ ವೈರಲ್ ಆಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Parliament; ಸಂಸತ್ ಭವನ ಎದುರು ತಳ್ಳಾಟ; ಇಬ್ಬರು ಸಂಸದರಿಗೆ ಗಾಯ, ರಾಹುಲ್ ವಿರುದ್ದ ಆರೋಪ
ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು
Ambedkar row: ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜಕೀಯ ಬಿಟ್ಟು ಹೋಗಲಿ ಎಂದ ಲಾಲು ಪ್ರಸಾದ್
ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸರು, ಎಲ್ಲಿ…? ಇಲ್ಲಿದೆ ನೋಡಿ ಮಾಹಿತಿ
K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
MUST WATCH
ಹೊಸ ಸೇರ್ಪಡೆ
Puttur: ಬಸ್ – ಬೈಕ್ ಅಪಘಾತ; ಸವಾರ ಸಾವು
Parliament; ಸಂಸತ್ ಭವನ ಎದುರು ತಳ್ಳಾಟ; ಇಬ್ಬರು ಸಂಸದರಿಗೆ ಗಾಯ, ರಾಹುಲ್ ವಿರುದ್ದ ಆರೋಪ
BBK11: ಕೊನೆಗೂ ಬಿಗ್ ಬಾಸ್ ಬಿಟ್ಟು ಬಂದಿದ್ದಕ್ಕೆ ಕಾರಣ ಬಹಿರಂಗಪಡಿಸಿದ ಗೋಲ್ಡ್ ಸುರೇಶ್
ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು
Belthangady: ಕುತ್ಲೂರು ನಿವಾಸಿಗಳ ಕೂಗು ಅರಣ್ಯರೋದನ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.