ಕೊಚ್ಚಿಯಲ್ಲಿ ಧರೆಗೆ ಉರುಳಿದ ಅಕ್ರಮ ವಸತಿ ಸಮುಚ್ಛಯ; ಇಂದು ಮತ್ತೆರಡು ಧರೆಗೆ
Team Udayavani, Jan 11, 2020, 8:34 PM IST
ಕೊಚ್ಚಿ: ಕೇರಳದ ಕರಾವಳಿ ಜಿಲ್ಲಾ ಕೇಂದ್ರವಾದ ಕೊಚ್ಚಿಯ ಮರಾಡು ಪ್ರಾಂತ್ಯದಲ್ಲಿ ಕರಾವಳಿ ನಿಯಂತ್ರಣ ವಲಯದ (ಸಿ.ಆರ್.ಝಡ್) ನಿಯಮಗಳನ್ನು ಉಲ್ಲಂಘಿಸಿ ಕಟ್ಟಲಾಗಿದ್ದ ಹೋಲಿ ಫೈತ್ ಎಚ್‌ಟುಒ ಹಾಗೂ ಅಲ್ಫಾ ಸೆರೆನ್ ಅಪಾರ್ಟ್‌ಮೆಂಟ್ ಎಂಬ ವಸತಿ ಸಮುಚ್ಛಯದ ಎರಡು ಟವರ್‌ಗಳನ್ನು ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಶನಿವಾರ ನೆಲಸಮಗೊಳಿಸಲಾಯಿತು. ಇದಕ್ಕಾಗಿ, ಸುಮಾರು 212.4 ಕೆಜಿ ಸ್ಫೋಟಕಗಳನ್ನು ಬಳಸಲಾಗಿತ್ತು ಎಂದು ಮೂಲಗಳು ತಿಳಿಸಿವೆ.
ಇದೇ ಮೊದಲ ಬಾರಿಗೆ ನಿಯಂತ್ರಿತ ಸ್ಫೋಟಕ (ಕಂಟ್ರೋಲ್ಡ್ ಎಕ್ಸ್‌ಪ್ಲೋಸಿವ್ಸ್) ಬಳಸಿ ಬೆಳಗ್ಗೆ 11:18ಕ್ಕೆ ಸರಿಯಾಗಿ ಹೋಲಿ ಫೈತ್ ಎಚ್‌ಟುಒ ಕಟ್ಟಡವನ್ನು ಧರೆಗುರುಳಿಸಲಾಯಿತು. ಆನಂತರ, 11:46ಕ್ಕೆ ಅಲ್ಫಾ ಸೆರೆನ್ಸ್‌ನ ಎರಡು ವಸತಿ ಸಮುತ್ಛಯಗಳನ್ನು ನೆಲಕ್ಕುರುಳಿಸಲಾಯಿತು.
ದೇಶದಲ್ಲಿ ಇಷ್ಟು ದೊಡ್ಡ ಅಕ್ರಮ ಕಟ್ಟಡಗಳನ್ನು ಅದರಲ್ಲೂ ವಿಶೇಷವಾಗಿ ಎರಡು ವಸತಿ ಸಮುಚ್ಛಯಗಳುಳ್ಳ ಕಟ್ಟಡಗಳನ್ನು ಒಡೆದು ಹಾಕಿರುವುದು ಇದೇ ಮೊದಲು ಎನ್ನಲಾಗಿದೆ.
ನಿಯಂತ್ರಿತ ಸ್ಫೋಟಕ ಎಂದರೇನು?
ಈ ಕಟ್ಟಡಗಳ ನೆಲಸಮಕ್ಕೆ ನಿಯಂತ್ರಿತ ಸ್ಫೋಟಕಗಳನ್ನು (ಕಂಟ್ರೋಲ್ಡ್ ಎಕ್ಸ್‌ಪ್ಲೋಸಿವ್) ಬಳಸಲಾಗಿದೆ. ಸಾಮಾನ್ಯ ಸ್ಫೋಟಕಗಳನ್ನು ಸಿಡಿಸಿದಾಗ ಕಟ್ಟಡದ ಅವಶೇಷಗಳು ಸುತ್ತಲಿನ ಪ್ರಾಂತ್ಯದಲ್ಲೆಲ್ಲಾ ಸಿಡಿಯುತ್ತವೆ. ಆದರೆ, ಈ ಬಗೆಯ ಸ್ಫೋಟಕಗಳಿಂದ ಕಟ್ಟಡಗಳನ್ನು ಸ್ಫೋಟಿಸಿದಾಗ ಕಟ್ಟಡವು ತನ್ನ ವ್ಯಾಪ್ತಿಯಲ್ಲಿಯೇ ಒಳಮುಖವಾಗಿ ಉರುಳುತ್ತದೆ. ಹಾಗಾಗಿ, ಶನಿವಾರ ನಡೆದ ಎರಡು ಕಟ್ಟಡಗಳ ನೆಲಸಮಕ್ಕೆ ನಿಯಂತ್ರಿತ ಸ್ಫೋಟಕಗಳನ್ನೇ ಬಳಸಲಾಗಿತ್ತು.
ಡೆಮಾಲಿಷರ್ಸ್ ಯಾರು?
– ಎಡಿಫಿಸ್ ಇಂಜಿನಿಯರಿಂಗ್ ಸಂಸ್ಥೆ (ಮುಂಬೈ): ಎಚ್‌ಟುಒ ಹೋಲಿ ಫೇಯ್¤, ಜೈನ್ಸ್ ಕೋರಲ್ ಕೋವ್ ಮತ್ತು ಗೋಲ್ಡನ್ ಕೋವಲಂ ಕಟ್ಟಡಗಳ ನೆಲಸಮದ ಜವಾಬ್ದಾರಿ.
– ವಿಜಯ್ ಸ್ಟೀಲ್ಸ್ ಆ್ಯಂಡ್ ಎಕ್ಸ್‌ಪ್ಲೋಸಿವ್ಸ್ (ತಮಿಳುನಾಡು): ಆಲ್ಫಾ ಸೆರೆನ್‌ನ ಅವಳಿ ಕಟ್ಟಡ ನೆಲಸಮ ಹೊಣೆ.
ಇಂದು ಇನ್ನೆರಡು ಕಟ್ಟಡ ನೆಲಕ್ಕೆ
ಕೊಚ್ಚಿಯ ನೈಸರ್ಗಿಕ ಹೆಗ್ಗುರುತುಗಳಲ್ಲೊಂದಾದ ವೆಂಬನಾಡ್ ಕೆರೆಗೆ ತೀರಾ ಸಮೀಪದಲ್ಲಿ ಈ ಕಟ್ಟಡಗಳನ್ನು ನಿರ್ಮಿಸಿರುವ ಕಾರಣಕ್ಕಾಗಿ, ಹೋಲಿ ಫೇಯ್¤ ಎಚ್‌ಟುಒ ಹಾಗೂ ಅಲ್ಫಾ ಸೆರೆನ್ ಅಪಾರ್ಟ್‌ಮೆಂಟ್, ಜೈನ್ ಕೋರಲ್ ಕೋವ್ ಹಾಗೂ ಗೋಲ್ಡನ್ ಕಾಯಲೋರಮ್ ಅಪಾರ್ಟ್‌ಮೆಂಟ್‌ಗಳನ್ನು ಕೆಡವಲು ಸುಪ್ರೀಂ ಕೋರ್ಟ್, 2019ರ ಜುಲೈನಲ್ಲಿ ಆದೇಶ ನೀಡಿ, 138 ದಿನಗಳ ಗಡುವನ್ನೂ ನೀಡಿತ್ತು. ಹಾಗಾಗಿ, ಹೋಲಿ ಫೇಯ್, ಆಲ್ಫಾ ಸೆರೆನ್ ಕಟ್ಟಡಗಳನ್ನು ಶನಿವಾರ ಕೆಡವಲಾಗಿದೆ. ಜೈನ್ ಕೋರಲ್‌ಕೋವ್, ಗೋಲ್ಡನ್ ಕಾಯಲೋರಮ್ ಕಟ್ಟಡಗಳನ್ನು ಭಾನುವಾರ ನೆಲಸಮಗೊಳಿಸಲಾಗುತ್ತದೆ.
ಈ ನಾಲ್ಕೂ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದ್ದ ಕುಟುಂಬಗಳಿಗೆ ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ತಲಾ 25 ಲಕ್ಷ ರೂ.ಗಳನ್ನು ಮಧ್ಯಂತರ ಪರಿಹಾರವನ್ನಾಗಿ ನೀಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mandya: ಅಪ್ರಾಪ್ತರ ಪ್ರೇಮ ಪ್ರಕರಣ; ಜಿಲೆಟಿನ್ ಸ್ಪೋಟಿಸಿ ಯುವಕ ಆತ್ಮಹತ್ಯೆ
Punjalkatte: ಘನತ್ಯಾಜ್ಯ ಘಟಕ ಆರಂಭಕ್ಕೆ ಇನ್ನೂ ಮೀನ ಮೇಷ ಎಣಿಕೆ
Hubli; ಹಂದಿ ಸಾಕಾಣಿಕೆದಾರ ಕೊಲೆ ಪ್ರಕರಣ; ಮೃತನ ಅಕ್ಕನ ಗಂಡ ಸೇರಿ ನಾಲ್ವರ ಬಂಧನ
Hubli; ಅಯ್ಯಪ್ಪ ಶಿಬಿರ ಅಗ್ನಿ ಆಕಸ್ಮಿಕ ಪ್ರಕರಣ; ಆರಕ್ಕೇರಿದ ಸಾವಿನ ಸಂಖ್ಯೆ
ಗಂಭೀರಕಾಯಿಲೆಗಳಿಂದ ಮಕ್ಕಳಿಗೆ ರಕ್ಷಣೆ-ಬಾಲ್ಯಕಾಲದಲ್ಲಿ ಲಸಿಕೆಹಾಕಿಸಿಕೊಳ್ಳುವುದು ಯಾಕೆಮುಖ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.