ಮೋಸ್ಟ್ ವಾಂಟೆಡ್, ಉಗ್ರ ನೇಮಕಾತಿದಾರ ಸಹಿತ ಇಬ್ಬರು ಫಿನಿಷ್
Team Udayavani, Oct 14, 2017, 9:27 AM IST
ಪುಲ್ವಾಮಾ: ಸೇನಾ ಪಡೆಗಳು ಶನಿವಾರ ಬೆಳ್ಳಂಬೆಳಗ್ಗೆ ನಡೆಸಿದ ಕಾರ್ಯಾಚರಣೆಯಲ್ಲಿ ಲಷ್ಕರ್-ಇ-ತೋಯ್ಬಾ ಉಗ್ರ ಸಂಘಟನೆಗೆ ಸೇರಿದ ಮೋಸ್ಟ್ ವಾಂಟೆಡ್, ಉಗ್ರ ನೇಮಕಾತಿದಾರ ಸಹಿತ ಇಬ್ಬರು ಉಗ್ರರನ್ನು ಹತ್ಯೆಗೈಯಲಾಗಿದೆ.
ಹತ್ಯೆಗೀಡಾದ ಉಗ್ರರನ್ನು ಹಫೀಜ್ ನಾಸಿರ್ ಮತ್ತು ವಾಸಿಮ್ ಶಾ ಎಂದು ಗುರುತಿಸಲಾಗಿದೆ.
ವಾಸಿಮ್ ಶಾ ಎಲ್ಇಟಿಯ ಸ್ಥಳೀಯ ಕಮಾಂಡರ್ ಆಗಿ ಕೆಲಸ ನಿರ್ವಹಿಸುತ್ತಿದ್ದು, ಸ್ಥಳೀಯ ಯುವಕರನ್ನು ಸಂಘಟನೆಯತ್ತ ಆಕರ್ಷಿಸುವ ದುಷ್ಕೃತ್ಯ ಮಾಡುತ್ತಿದದ್ದ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ವಾಸಿಮ್ ಶಾ ತನ್ನ ಸಹಚರರೊಂದಿಗೆ ಸೇನಾ ಪಡೆಗಳ ಮೇಲೆ ಭಾರಿ ದಾಳಿ ನಡೆಸಲು ಸಂಚು ರೂಪಿಸಿದ್ದರು ಎಂದು ತಿಳಿದು ಬಂದಿದ್ದರು.
ಗ್ರಾಮದಲ್ಲಿ ಇನ್ನೂ ಕೆಲ ಉಗ್ರರು ಇರುವ ಶಂಕೆಯ ಹಿನ್ನಲೆಯಲ್ಲಿ ಸೇನಾ ಪಡೆಗಳು ಕಾರ್ಯಾಚರಣೆ ಮುಂದುವರಿಸಿದ್ದಾರೆ.
ಭದ್ರತಾ ಪಡೆಗಳ ಕಾರ್ಯಾಚರಣೆಗೆ ಸಿಆರ್ಪಿಎಫ್ ಮತ್ತು ಪೊಲೀಸರು ಜೊತೆಯಾಗಿದ್ದರು. ವಾಸಿಮ್ ಹತ್ಯೆ ಸೇನೆಗೆ ಭಾರಿ ಯಶಸ್ಸು ಲಭ್ಯವಾದಂತೆ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸ್ ವರಿಷ್ಠಾಧಿಕಾರಿ ಮುನೀರ್ ಖಾನ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ
Rahul Gandhi ಭರವಸೆಗಳನ್ನು ನೀಡುತ್ತಾರೆ ಮತ್ತು ವಿದೇಶಕ್ಕೆ ಹಾರುತ್ತಾರೆ: ಶಾ ವಾಗ್ದಾಳಿ
PM Modi ಅವರು ಜೋ ಬೈಡೆನ್ ಅವರಂತೆ ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ: ರಾಹುಲ್ ಗಾಂಧಿ
Resign: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಸಿಂಗ್ ಬಾದಲ್ ರಾಜೀನಾಮೆ
Maharashtra; ನಮ್ಮ ಮೈತ್ರಿ ಕೂಟ ಗೆದ್ದು ಮಹಾರಾಷ್ಟ್ರ ಉಳಿಸಲಿದೆ: ಡಿ.ಕೆ. ಶಿವಕುಮಾರ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.