ವೇಶ್ಯಾವಾಟಿಕೆಗೆ ಕಳ್ಳಸಾಗಣೆ: ಅಸ್ಸಾಂ ಹುಡುಗಿಯರಿಬ್ಬರ ರಕ್ಷಣೆ
Team Udayavani, Jun 18, 2018, 11:22 AM IST
ಮಾಲ್ಡಾ, ಪಶ್ಚಿಮ ಬಂಗಾಲ : ಉದ್ಯೋಗದ ಆಮಿಷದಲ್ಲಿ ವೇಶ್ಯಾವಾಟಿಕೆಗಾಗಿ ಕಳ್ಳಸಾಗಣೆಗೆ ಒಳಗಾಗಿದ್ದ 12 ಮತ್ತು 13 ವರ್ಷ ಪ್ರಾಯದ ಅಸ್ಸಾಮಿನ ಇಬ್ಬರು ಹುಡುಗಿಯರನ್ನು ಕಾಮರೂಪ್ ಎಕ್ಸ್ಪ್ರೆಸ್ ರೈಲಿನಿಂದ ಪಾರುಗೊಳಿಸಲಾಗಿದೆ ಎಂದು ಜಿಆರ್ಪಿ ಅಧಿಕಾರಿಗಳು ತಿಳಿಸಿದ್ದಾರೆ.
ಹುಡುಗಿಯರಿಬ್ಬರನ್ನು ಕಳ್ಳಸಾಗಣೆ ಮಾಡಲಾಗುತ್ತಿರುವ ಬಗ್ಗೆ ಖಚಿತ ಸುಳಿವು ಪಡೆದ ಜಿಆರ್ಪಿ ಸಿಬಂದಿಗಳು ಹೌರಾ ಗೆ ಹೋಗುತ್ತಿದ್ದ ರೈಲಿನಲ್ಲಿ ಶೋಧ ಕಾರ್ಯ ನಡೆಸಿ ಆ ಹುಡುಗಿಯರನ್ನು ಪಾರುಗೊಳಿಸಿದರು.
ಈ ಹುಡುಗಿಯರನ್ನು ಕಳ್ಳಸಾಗಣೆ ಮಾಡುತ್ತಿದ್ದ 49 ವರ್ಷ ಪ್ರಾಯದ ಇಂದ್ರಾಣಿ ಸರ್ಕಾರ್ ಎಂಬ ಮಹಿಳೆಯನ್ನು ಜಿಆರ್ಪಿ ಅಧಿಕಾರಿಗಳ ತಂಡ ಬಂಧಿಸಿತು.
ಅಸ್ಸಾಂ ನ ತೀನ್ಸುಖೀಯಾ ಜಿಲ್ಲೆಯವರಾಗಿರುವ ಈ ಇಬ್ಬರು ಹುಡುಗಿಯರನ್ನು ಆರೋಪಿ ಮಹಿಳೆಯು ಕೋಲ್ಕತಕ್ಕೆ ಒಯ್ಯುತ್ತಿದ್ದಳು. ನ್ಯಾಯಾಲಯ ಆಕೆಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಪಾರು ಮಾಡಲ್ಪಟ್ಟ ಹುಡುಗಿಯರನ್ನು ಸರಕಾರದ ಮಹಿಳೆಯರು ಮತ್ತು ಮಕ್ಕಳ ಆಸರೆ ಕೇಂದ್ರಕ್ಕೆ ಕಳುಹಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
J-K: ಭೀಕರ ಅಪಘಾ*ತದಲ್ಲಿ SUV ಚಲಾಯಿಸುತ್ತಿದ್ದ 17 ರ ಹುಡುಗರಿಬ್ಬರು ಮೃ*ತ್ಯು
Maharashtra Election: ಅಮಿತ್ ಶಾ ಅವರ ಬ್ಯಾಗ್ ಪರೀಕ್ಷಿಸಿದ ಚುನಾವಣಾ ಅಧಿಕಾರಿಗಳು
Anmol Buffalo:1500 ಕೆಜಿ ತೂಗುವ ಈ ಕೋಣದ ಬೆಲೆ ಬರೋಬ್ಬರಿ 23 ಕೋಟಿ ರೂ!
Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್ ಗೆ 10 ಕೋಟಿ ರೂಪಾಯಿ ಪಂಗನಾಮ!
Mumbai: ಲಾರೆನ್ಸ್ ಬಿಷ್ಣೋಯ್ ಹಿಟ್ ಲಿಸ್ಟ್ನಲ್ಲಿ ಶ್ರದ್ಧಾ ವಾಕರ್ ಹತ್ಯೆ ಆರೋಪಿ: ವರದಿ
MUST WATCH
ಹೊಸ ಸೇರ್ಪಡೆ
Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ
Mangaluru: ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು
J-K: ಭೀಕರ ಅಪಘಾ*ತದಲ್ಲಿ SUV ಚಲಾಯಿಸುತ್ತಿದ್ದ 17 ರ ಹುಡುಗರಿಬ್ಬರು ಮೃ*ತ್ಯು
Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್!
Chikkaballapura: ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.