ಬಾರಾಮುಲ್ಲಾದಲ್ಲಿ ರಾತ್ರಿಯಿಡೀ ನಡೆದ ಕಾರ್ಯಾಚರಣೆ
Team Udayavani, Dec 14, 2018, 9:35 AM IST
ಶ್ರೀನಗರ: ಜಮ್ಮು- ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ಇಡೀ ರಾತ್ರಿ ನಡೆದ ಎನ್‌ಕೌಂಟರ್‌ನಲ್ಲಿ ಇಬ್ಬರು ಲಷ್ಕರ್- ಎ-ತೊಯ್ಬಾ ಉಗ್ರರನ್ನು ಭದ್ರತಾ ಪಡೆ ಹೊಡೆದುರುಳಿಸಿದೆ. ಸೋಪೋರ್‌ನ ಬ್ರಾತ್ ಕಲನ್‌ನಲ್ಲಿ ಉಗ್ರರು ಅಡಗಿದ್ದಾರೆ ಎಂಬ ಖಚಿತ ಮಾಹಿತಿಯ ಮೇರೆಗೆ ಭದ್ರತಾ ಪಡೆ ಬುಧವಾರ ರಾತ್ರಿ ಕಾರ್ಯಾಚರಣೆ ಆರಂಭಿಸಿತು. ಯೋಧರ ಸುಳಿವು ಸಿಗುತ್ತಲೇ, ಉಗ್ರರು ಗುಂಡಿನ ದಾಳಿಗೆ ಮುಂದಾದರು. ಈ ವೇಳೆ, ಗುಂಡಿನ ಚಕಮಕಿ ನಡೆಯಿತು. ಕೊನೆಗೆ, ಲಷ್ಕರ್‌ನ ಒವೈಸ್ ಅಹ್ಮದ್ ಭಟ್ ಅಲಿಯಾಸ್ ಅಬೂಬಕ್ಕರ್ ಮತ್ತು ತಾರಿಖ್ ಅಹ್ಮದ್ ದರ್ ಅಲಿಯಾಸ್ ಅಬು ಅಬ್ದುಲ್ಲಾನನ್ನು ಹತ್ಯೆಗೈಯ್ಯುವಲ್ಲಿ ಭದ್ರತಾ ಪಡೆ ಯಶಸ್ವಿಯಾಯಿತು. ಈ ಇಬ್ಬರೂ ಹಲವು ವಿಧ್ವಂಸಕ ಕೃತ್ಯಗಳಲ್ಲಿ ಭಾಗಿಯಾದವರು. ಎನ್‌ಕೌಂಟರ್ ನಡೆದ ಸ್ಥಳದಿಂದ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸೇನಾ ವಕ್ತಾರರು ತಿಳಿಸಿದ್ದಾರೆ.
ಉಗ್ರನಾಗಿ ಸತ್ತ ‘ಹೈದರ್’ ನಟ!
ಡಿ.9ರಂದು ಎನ್‌ಕೌಂಟರ್‌ಗೆ ಬಲಿಯಾದ ಲಷ್ಕರ್ ಉಗ್ರರ ಪೈಕಿ ಬಾಲಿವುಡ್ ಸಿನಿಮಾ ‘ಹೈದರ್’ನಲ್ಲಿ ಪಾತ್ರ ಮಾಡಿದ್ದ, ರಂಗಭೂಮಿ ಕಲಾವಿದ ಹಾಗೂ 11ನೇ ತರಗತಿ ವಿದ್ಯಾರ್ಥಿ ಸಾಖೀಬ್ ಬಿಲಾಲ್ ಕೂಡ ಒಬ್ಬ ಎಂಬ ವಿಚಾರ ಬೆಳಕಿಗೆ ಬಂದಿದೆ. ಆ.31ರಂದು ಮನೆಯಿಂದ ನಾಪತ್ತೆಯಾಗಿದ್ದ ಸಾಖೀಬ್ ಸದ್ದಿಲ್ಲದೇ ಉಗ್ರ ಸಂಘಟನೆಗೆ ಸೇರಿದ್ದ. ಡಿ.9ರಂದು ನಡೆದ ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಯು ಸಾಖೀಬ್ ಸೇರಿ ಮೂವರು ಉಗ್ರರನ್ನು ಹೊಡೆದುರುಳಿಸಿತ್ತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.