ದ್ವಿಚಕ್ರ ವಾಹನ ಅಪಘಾತ: ಪ್ರತೀ ಗಂಟೆಗೆ 6 ಮಂದಿ ಸಾವು!


Team Udayavani, Dec 26, 2020, 5:48 AM IST

ದ್ವಿಚಕ್ರ ವಾಹನ ಅಪಘಾತ: ಪ್ರತೀ ಗಂಟೆಗೆ 6 ಮಂದಿ ಸಾವು!

ಸಾಂದರ್ಭಿಕ ಚಿತ್ರ

ದ್ವಿಚಕ್ರ ವಾಹನಗಳು ಹೆಚ್ಚು ಜನಪ್ರಿಯವಾಗುತ್ತಿದ್ದಂತೆ, ಇವುಗಳನ್ನು ಒಳಗೊಂಡ ರಸ್ತೆ ಅಪಘಾತಗಳ ಸಂಖ್ಯೆಯೂ ಹೆಚ್ಚುತ್ತಿದೆ. 2019ರಲ್ಲಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದವರಲ್ಲಿ ಮೂರನೇ ಒಂದು ಭಾಗದಷ್ಟು ಅಂದರೆ ಶೇ.37ರಷ್ಟು ಮಂದಿ ದ್ವಿಚಕ್ರ ವಾಹನ ಸವಾರರು ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಹೇಳಿದೆ.

ಕಾರಣಗಳು ಏನು?
ಹೆಚ್ಚುತ್ತಿರುವ ಅಪಘಾತಗಳಿಗೆ ದೋಷಪೂರಿತ ವಾಹನ ಚಾಲನ ಪರವಾನಿಗೆ ಕಾನೂನುಗಳು ಪ್ರಮುಖ ಕಾರಣವಾಗಿವೆ. ಜತೆಗೆ ಸರಿಯಾದ ತರಬೇತಿ ಕೊರತೆ, ಕಳಪೆ ರಸ್ತೆಗಳು ಮತ್ತು ಅಸುರಕ್ಷಿತ ಹೆಲ್ಮೆಟ್‌ಗಳಿಂದಾಗಿ ಹೆಚ್ಚಿನ ಅಪಘಾತಗಳು ಮತ್ತು ಸಾವುಗಳು ಸಂಭವಿಸುತ್ತಿವೆ. ಸರಿಯಾದ ಹೆಲ್ಮೆಟ್‌ ಬಳಕೆಯು ಮರಣಾಂತಿಕ ಗಾಯಗಳ ಅಪಾಯವನ್ನು ಶೇ. 42ರಷ್ಟು ಮತ್ತು ಮತ್ತು ತಲೆಗಾಗುವ ಏಟನ್ನು ಶೇ. 69ರಷ್ಟು ಕಡಿಮೆಯಾಗಿಸುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಈ ಹಿಂದೆ ಹೇಳಿತ್ತು.

ಸಮರ್ಪಕ ಕಾನೂನು ಅಗತ್ಯ
ದೇಶದಲ್ಲಿ ಕಠಿನ ವಾಹನ ಚಾಲನ ಪರವಾನಿಗೆ ಕಾನೂನುಗಳನ್ನು ಜಾರಿಗೊಳಿಸಬೇಕಾಗಿರುವುದು ಅನಿವಾರ್ಯ.ಜತೆಗೆ ಕಾನೂನುಗಳ ಬಗೆಗೆ ಸಮರ್ಪಕ ಮಾಹಿತಿ ನೀಡಬೇಕಿದೆ. ಅಷ್ಟೇ ಅಲ್ಲದೆ ಪ್ರಮಾಣೀಕೃತ ಹೆಲ್ಮೆಟ್‌ ರಹಿತ ದ್ವಿಚಕ್ರ ವಾಹನ ಸವಾರರಿಗೆ ಹೆಚ್ಚಿನ ಮೊತ್ತದ ದಂಡ ಹೇರುವ ಮೂಲಕ ಯುವಕರ ಈ ಖಯಾಲಿಗೆ ಕಡಿವಾಣ ಹಾಕಬೇಕಿದೆ. ದೇಶಾದ್ಯಂತದ ಕಳಪೆ ರಸ್ತೆಗಳೂ ಅಪಘಾತಗಳಿಗೆ ಕಾರಣವಾಗುತ್ತಿರುವುದರಿಂದ ರಸ್ತೆಗಳ ದುರಸ್ತಿಯನ್ನು ಆದ್ಯತೆಯನ್ನಾಗಿ ಪರಿಗಣಿ ಸಬೇಕು ಎಂಬುದು ತಜ್ಞರ ಅಭಿಪ್ರಾಯ.

ತಲಾ ಆದಾಯ ಏರಿಕೆ?
ಕಳೆದ ದಶಕದಲ್ಲಿ ಭಾರತವು ತಲಾ ಆದಾಯದಲ್ಲಿ ಶೀಘ್ರ ಬೆಳವಣಿಗೆಯನ್ನು ಕಂಡಿದೆ. ಇದು ಜನರು ಹೆಚ್ಚಿನ ವಾಹನಗಳನ್ನು ಖರೀದಿಸಲು ಕಾರಣವಾಯಿತು. ವಿಶೇಷವಾಗಿ ದ್ವಿಚಕ್ರ ವಾಹನಗಳು. ಬೆಂಗಳೂರಿನ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಯ ಸಂಸ್ಥೆ ನಡೆಸಿದ ಅಧ್ಯಯನದ ಪ್ರಕಾರ, ಭಾರತದ ತಲಾ ಆದಾಯವು 2013 ಮತ್ತು 2017ರ ನಡುವೆ ಶೇ. 28ರಷ್ಟು ಏರಿಕೆಯಾಗಿದೆ. ಮಾತ್ರವಲ್ಲದೇ ದ್ವಿಚಕ್ರ ವಾಹನ ನೋಂದಣಿಯು ಇದೇ ಅವಧಿಯಲ್ಲಿ ಶೇ. 46ರಷ್ಟು ಹೆಚ್ಚಾಗಿದೆ. ಕಳೆದ ವರ್ಷ ದೇಶದಲ್ಲಿ 21.2 ಮಿಲಿಯನ್‌ ದ್ವಿಚಕ್ರ ವಾಹನಗಳು ಮಾರಾಟವಾಗಿದ್ದವು. ವಾರ್ಷಿಕ ಮಾರಾಟವು 2025ರ ವೇಳೆಗೆ ಶೇ.2.6 ಬೆಳವಣಿಗೆಯ ದರದಲ್ಲಿ 26.6 ಮಿಲಿಯನ್‌ ಯುನಿಟ್‌ಗಳನ್ನು ತಲುಪಲಿದೆ ಎಂದು ಮಾಹಿತಿ ನೀಡಿದೆ. 2016ರಲ್ಲಿ ಪ್ರಕಟವಾದ ವಿಶ್ವಸಂಸ್ಥೆಯ ಮೋಟಾರ್‌ ಸೈಕಲ್‌ ಹೆಲ್ಮೆಟ್‌ ಅಧ್ಯಯನ ವರದಿಯಲ್ಲಿ ಭಾರತದಲ್ಲಿ ದ್ವಿಚಕ್ರ ವಾಹನಗಳ ಸಂಖ್ಯೆ ಕ್ಷಿಪ್ರಗತಿಯಲ್ಲಿ ಏರಿಕೆ ಕಾಣುತ್ತಿರುವುದು ರಸ್ತೆ ಅಪಘಾತಗಳ ಹೆಚ್ಚಳಕ್ಕೆ ಕಾರಣವಾಗಬಹುದು ಎಂದು ಎಚ್ಚರಿಕೆ ನೀಡಲಾಗಿತ್ತು.

ಲೈಸೆನ್ಸ್‌ ಇಲ್ಲದೇ ಚಾಲನೆ
ಅಸಮರ್ಪಕ ವಾಹನ ಚಾಲನ ಪರವಾನಿಗೆ ಕಾನೂನುಗಳು, ಕಡಿಮೆ ತರಬೇತಿಗಳು ಅಪಘಾತಗಳಿಗೆ ಕಾರಣವಾಗುತ್ತಿವೆ. ಚಾಲನ ಪರವಾನಿಗೆ ಇಲ್ಲದ ಚಾಲಕರನ್ನು ಒಳಗೊಂಡ ರಸ್ತೆ ಅಪಘಾತಗಳು 2018ರಲ್ಲಿ 37,585ರಷ್ಟಿತ್ತು. ಆದರೆ 2019ರಲ್ಲಿ ಇದರ ಪ್ರಮಾಣ 44,358ಕ್ಕೆ ಏರಿದೆ. ಅಂದರೆ ಹಿಂದಿನ ವರ್ಷಕ್ಕಿಂತ ಶೇ. 18ರಷ್ಟು ಹೆಚ್ಚಳವಾಗಿದ್ದು, ಒಟ್ಟು ಅಪಘಾತಗಳ ಪೈಕಿ ಇವುಗಳ ಪಾಲು ಶೇ. 9.9ರಷ್ಟು. ಇನ್ನು ಸುಮಾರು ಶೇ. 72 ರಸ್ತೆ ಅಪಘಾತಗಳು ಚಾಲಕರು ಅಧಿಕೃತ ಚಾಲನ ಪರವಾನಿಗೆ ಹೊಂದಿರುವವರು ಎಂದು ಸಚಿವಾಲಯ ಬಿಡುಗಡೆ ಮಾಡಿರುವ ವರದಿಯು ತಿಳಿಸಿದೆ. ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಭವಿಸುತ್ತಿರುವ ಅಪಘಾತಗಳನ್ನು ಅವಲೋಕಿಸಿದರೆ ರಾಂಗ್‌ ಸೈಡ್‌ನ‌ಲ್ಲಿ ವಾಹನ ಚಾಲನೆಯಿಂದ ಶೇ. 5.2, ಪಾನಮತ್ತರಾಗಿ ವಾಹನ ಚಾಲನೆಯಿಂದ ಶೇ. 3.7ರಷ್ಟು ಅಪಘಾತಗಳು ಸಂಭವಿಸುತ್ತಿವೆ.

ಗಂಟೆಗೆ 6 ಸಾವು!
ಭಾರತದಲ್ಲಿ ಅಪಘಾತ ಸಂಬಂಧಿತ ಸಾವುಗಳಲ್ಲಿ ದ್ವಿಚಕ್ರ ಮತ್ತು ಪಾದಚಾರಿಗಳ ಪ್ರಮಾಣ ಶೇ. 54ರಷ್ಟಿದೆ. ಶೇ. 37ರಷ್ಟು (56,136) ರಸ್ತೆ ಅಪಘಾತಗಳಿಂದಾಗಿ ಸಾವುಗಳು ಸಂಭವಿಸುತ್ತಿವೆ ಅಂದರೆ ಪ್ರತೀ ಗಂಟೆಗೆ ಸರಾಸರಿ ಆರು ಸಾವುಗಳಿಗೆ ದ್ವಿಚಕ್ರ ವಾಹನಗಳು ಕಾರಣವಾಗುತ್ತಿವೆ. ಇನ್ನು ಶೇ. 17ರಷ್ಟು ಪಾದಚಾರಿಗಳು, ಶೇ.3ರಷ್ಟು ಸೈಕ್ಲಿಸ್ಟ್‌ ಗಳು ಅಪಘಾತಗಳಲ್ಲಿ ಸಾವನ್ನಪ್ಪುತ್ತಿದ್ದಾರೆ. ಭಾರತೀಯ ರಸ್ತೆಗಳು ವಿಶ್ವದಲ್ಲೇ ಅತೀ ಕೆಟ್ಟ ರಸ್ತೆಗಳು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಒಟ್ಟಾರೆ ಜಾಗತಿಕ ರಸ್ತೆ ಅಪಘಾತಗಳಲ್ಲಿ ಭಾರತದ ಪಾಲು ಶೇ. 11ರಷ್ಟು.

2019: 44,666 ಸಾವು
ಹೆಲ್ಮೆಟ್‌ ಧರಿಸದ ಕಾರಣ 2019ರಲ್ಲಿ 44,666 (30,148 ಚಾಲಕರು ಮತ್ತು 14,518 ಹಿಂಬದಿ ಸವಾರರು) ಸಾವನ್ನಪ್ಪಿದ್ದಾರೆ ಎಂದು ಇಂಡಿಯಾ ಸ್ಪೆಂಡ್‌ ವರದಿ ಮಾಡಿದೆ.

ಟಾಪ್ ನ್ಯೂಸ್

9-someshwara

Someshwara: ಸಮುದ್ರಕ್ಕೆ ಹಾರಿದ ಯುವತಿಯ ರಕ್ಷಣೆ

Perth test: Jasprit Bumrah’s bowling style in doubt: What is the controversy?

Perth test: ಜಸ್ಪ್ರೀತ್‌ ಬುಮ್ರಾ ಬೌಲಿಂಗ್‌ ಶೈಲಿ ಅನುಮಾನ: ಏನಿದು ವಿವಾದ?

Perth Test: Jaiswal scores century; record partnership with Rahul

Perth Test: ಜೈಸ್ವಾಲ್‌ ಶತಕದಾಟ; ರಾಹುಲ್‌ ಜತೆ ದಾಖಲೆಯ ಜೊತೆಯಾಟ

Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು

Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು

6-1

Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?

5–COPD

COPD: ಕ್ರೋನಿಕ್‌ ಒಬ್‌ಸ್ಟ್ರಕ್ಟಿವ್‌ ಪಲ್ಮನರಿ ಡಿಸೀಸ್‌ (ಸಿಒಪಿಡಿ)

Maryade Prashne Review

Maryade Prashne Review: ಮಧ್ಯಮ ವರ್ಗದ ಮರ್ಯಾದೆ ಹೋರಾಟ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

delhi air

Delhi pollution:ಪ್ರಾಣಿಗಳಲ್ಲಿ ಹೆಚ್ಚಿದ ಶ್ವಾಸ ಸಂಬಂಧಿ ಕಾಯಿಲೆ

1-modi

BJP; ಅಭಿವೃದ್ಧಿ, ಉತ್ತಮ ಆಡಳಿತ ಗೆದ್ದೇ ಗೆಲ್ಲುತ್ತದೆ: ಜಯಕ್ಕೆ ಪ್ರಧಾನಿ ಬಣ್ಣನೆ

adani (2)

Adani; 2,200 ಕೋಟಿ ರೂ. ಲಂಚ: ಅಮೆರಿಕ ಸಮನ್ಸ್‌

Modi-Tour

Tour: ಮೂರು ದೇಶ ಪ್ರವಾಸ: ಪ್ರಧಾನಿ ಮೋದಿ 31 ದ್ವಿಪಕ್ಷೀಯ ಸಭೆಗಳು!

bjp-congress

Assembly bypolls; 14 ರಾಜ್ಯಗಳ 48 ಸ್ಥಾನಗಳ ಗೆಲುವಿನ ವಿವರ ಇಲ್ಲಿದೆ: ಎನ್‌ಡಿಎ ಮೇಲುಗೈ

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

ಪತ್ರಕರ್ತರಿಂದ…ಪತ್ರಕರ್ತರಿಗಾಗಿ… ಕಷ್ಟದಲ್ಲಿ ಕೈಹಿಡಿಯುವ ಆಪದ್ಭಾಂಧವ!

ಪತ್ರಕರ್ತರಿಂದ…ಪತ್ರಕರ್ತರಿಗಾಗಿ… ಕಷ್ಟದಲ್ಲಿ ಕೈಹಿಡಿಯುವ ಆಪದ್ಭಾಂಧವ!

9-someshwara

Someshwara: ಸಮುದ್ರಕ್ಕೆ ಹಾರಿದ ಯುವತಿಯ ರಕ್ಷಣೆ

3

Kannada: ವೀರ ಕನ್ನಡಿಗ: ತನು ಕನ್ನಡ, ಮನ(ನೆ) ಕನ್ನಡ

FIR: ಮಹಿಳಾ ಉದ್ಯಮಿ ಆತ್ಮಹತ್ಯೆ ಕೇಸ್‌: ಲೇಡಿ ಡಿವೈಎಸಿ ವಿರುದ್ಧ ಎಫ್ಐಆರ್‌

FIR: ಮಹಿಳಾ ಉದ್ಯಮಿ ಆತ್ಮಹತ್ಯೆ ಕೇಸ್‌: ಲೇಡಿ ಡಿವೈಎಸಿ ವಿರುದ್ಧ ಎಫ್ಐಆರ್‌

1

Arrested: ಉದ್ಯಮಿ ಅಪಹರಣ: ಪ್ರೇಯಸಿ ಸೇರಿ 7 ಮಂದಿ ಸೆರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.