![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Jan 22, 2020, 6:40 PM IST
ಸಾಂದರ್ಭಿಕ ಚಿತ್ರ.
ಉದಯಪುರ: ಹುಟ್ಟಿದ ಮಗುವಿಗೆ ಹೆಸರು ಇರಿಸುವ ಬಗ್ಗೆ ಹೆತ್ತವರು ತಲೆಕೆಡಿಸಿಕೊಳ್ಳುತ್ತಾರೆ. ಎರಡು ಅಕ್ಷರಗಳೇ ಇರಬೇಕು, ವಿಶೇಷವಾಗಿರಬೇಕು ಹೀಗೆ ಹಲವಾರು ಲೆಕ್ಕಾಚಾರಗಳನ್ನು ಮಾಡುತ್ತಾರೆ. ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಕಚೇರಿಯ ಮಾಧ್ಯಮ ವಿಭಾಗದಲ್ಲಿ ಕೆಲಸ ಮಾಡುವ ವಿನೋದ್ ಜೈನ್ ಎಂಬುವರು ತಮ್ಮ ಮಗುವಿಗೆ “ಕಾಂಗ್ರೆಸ್ ಜೈನ್’ ಎಂಬ ಹೆಸರು ಇರಿಸಿದ್ದಾರೆ.
“ಬಹಳ ಕಾಲದಿಂದ ನಾನು ಮತ್ತು ನನ್ನ ಕುಟುಂಬ ಕಾಂಗ್ರೆಸ್ ಜತೆಗೆ ಗುರುತಿಸಿಕೊಂಡಿದೆ. ಹೀಗಾಗಿ, ಮಗುವಿಗೆ ಕಾಂಗ್ರೆಸ್ ಜೈನ್ ಎಂಬ ಹೆಸರು ಇರಿಸಿದ್ದೇನೆ’ ಎಂದು ಹೇಳಿಕೊಂಡಿದ್ದಾರೆ.
2019ರ ಜುಲೈನಲ್ಲಿ ಜನಿಸಿದ ಮಗುವಿನ ಜನನ ಪ್ರಮಾಣ ಪತ್ರದಲ್ಲಿಯೂ ಅದೇ ಹೆಸರು ಇದೆ ಎಂದು ತಂದೆ ವಿನೋದ್ ಜೈನ್ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.
ಕಾಂಗ್ರೆಸ್ ಬಗ್ಗೆ ಕುಟುಂಬದಲ್ಲಿ ಒಲವು ಇದ್ದರೂ, ಮಗುವಿಗೆ ಹೆಸರು ಇರಿಸುವ ವಿಚಾರದಲ್ಲಿ ಸಹಮತ ತೋರಿಸಲಿಲ್ಲ. ಆದರೂ ತಾವೇ ಮುತುವರ್ಜಿ ವಹಿಸಿ ಅದರ ಬಗ್ಗೆಯೇ ಪಟ್ಟು ಹಿಡಿದಿದ್ದಾಗಿ ಹೇಳಿಕೊಂಡಿದ್ದಾರೆ. ನಿರಂತರವಾಗಿ ಜನರ ಸೇವೆ ಮಾಡುತ್ತಿರುವ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ತಮಗೆ ಸ್ಫೂರ್ತಿ ಎಂದು ಹೇಳಿಕೊಂಡಿದ್ದಾರೆ.
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.