ಸ್ತನ ಕ್ಯಾನ್ಸರ್‌ನಿಂದ 28 ವರ್ಷದ ಮಾಜಿ ಮಿಸ್ ಇಂಡಿಯಾ ತ್ರಿಪುರಾ ರಿಂಕಿ ಚಕ್ಮಾ ನಿಧನ
Team Udayavani, Feb 29, 2024, 4:44 PM IST
ಅಗರ್ತಲಾ: ಸ್ತನ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಮಾಜಿ ಮಿಸ್ ಇಂಡಿಯಾ ತ್ರಿಪುರಾ ರಿಂಕಿ ಚಕ್ಮಾ(28) ನಿಧನರಾಗಿದ್ದಾರೆ.
ಫೆ.22 ರಂದು ರಿಂಕಿ ಚಕ್ಮಾ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರನ್ನು ವೆಂಟಿಲೇಟರ್ ನಲ್ಲಿ ಇರಿಸಲಾಗಿತ್ತು.ಆದರೆ ಅವರ ಆರೋಗ್ಯ ಹದಗೆಡಲು ಶುರುವಾಗಿತ್ತು. ಇದರಿಂದ ಕೀಮೋಥೆರಪಿ ನಡೆಸಲು ವಿಫಲವಾಗಿತ್ತು.
ರಿಂಕಿ ಚಕ್ಮಾ ಅವರಿಗೆ 2022 ರಲ್ಲಿ ಮಾರಣಾಂತಿಕ ಫಿಲೋಡ್ಸ್ ಟ್ಯೂಮರ್ ಇರುವುದು ಪತ್ತೆಯಾಗಿತ್ತು. ಇದಕ್ಕೆ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಕಾಣಿಸಿಕೊಂಡ ಕ್ಯಾನ್ಸರ್ ಅವಳ ಶ್ವಾಸಕೋಶಕ್ಕೆ ಹರಡಿತು. ಇದರ ಪರಿಣಾಮವಾಗಿ ಮೆದುಳಿನ ಗೆಡ್ಡೆ ಉಂಟಾಗಿತ್ತು. ಮಾರಣಾಂತಿಕ ಫಿಲೋಡ್ಸ್ ಟ್ಯೂಮರ್ ಸ್ತನದ ಅಪರೂಪದ ಗೆಡ್ಡೆಯಾಗಿದ್ದು, ಸಾಮಾನ್ಯವಾಗಿ 35 ರಿಂದ 55 ವರ್ಷ ವಯಸ್ಸಿನ ಮಹಿಳೆಯರ ಮೇಲೆ ಇದು ಪರಿಣಾಮ ಬೀರುತ್ತದೆ.
ಇತ್ತೀಚೆಗೆ ಚಕ್ಮಾ ಅವರ ಆಪ್ತ ಸ್ನೇಹಿತೆ ಮತ್ತು ಮಿಸ್ ಇಂಡಿಯಾ 2017 ರ ರನ್ನರ್ ಅಪ್ ಪ್ರಿಯಾಂಕಾ ಕುಮಾರಿ ಅವರ ಚಿಕಿತ್ಸೆಗಾಗಿ ಹಣವನ್ನು ಸಂಗ್ರಹಿಸಲು ತಮ್ಮ ವೈದ್ಯಕೀಯ ವರದಿಯನ್ನು ಹಂಚಿಕೊಂಡಿದ್ದರು.
ರಿಂಕಿ ಚಕ್ಮಾ ಅವರು 2017 ರಲ್ಲಿ ಮಿಸ್ ಇಂಡಿಯಾ ತ್ರಿಪುರಾ ಕಿರೀಟವನ್ನು ಗೆದ್ದಿದ್ದರು. ಮಿಸ್ ಇಂಡಿಯಾ ಫೈನಲಿಸ್ಟ್ ಆಗಿ ರಿಂಕಿ ಮಿಸ್ ಕಾನ್ಜೆನಿಯಾಲಿಟಿ ಮತ್ತು ಬ್ಯೂಟಿ ವಿತ್ ಎ ಪರ್ಪಸ್ ಎಂಬ ಎರಡು ಉಪ ಟೈಟಲ್ ನ್ನು ಗೆದ್ದಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ
NCB ನಿರಂತರ ಕಾರ್ಯಾಚರಣೆ: ಡ್ರಗ್ಸ್ ಜಾಲ ಮುರಿಯಲು ಆಪರೇಷನ್ ಸಾಗರ ಮಂಥನ
J. P. Nadda: ನುಸುಳುಕೋರರಿಗೆ ಮದ್ರಸಾದಲ್ಲಿ ಆಶ್ರಯ ಕೊಟ್ಟ ಜೆಎಂಎಂ
Delhi: ಮಿತಿ ಮೀರಿದ ಮಾಲಿನ್ಯ: ಟ್ರಕ್‌ಗಳ ಪ್ರವೇಶಕ್ಕೆ ನಿರ್ಬಂಧ
Maharashtra: ಕಾಂಗ್ರೆಸ್ ಸರಕಾರ ಬಂದರೆ ಮುಸ್ಲಿಂ ಮೀಸಲು: ರೇವಂತ್ ರೆಡ್ಡಿ
MUST WATCH
ಹೊಸ ಸೇರ್ಪಡೆ
Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ
Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ
Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ
Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.