ರಾಜ್ಯದ ಬಿಲ್ಡರ್ಸ್ ಸಮಸ್ಯೆ ಬಗೆಹರಿಸಲು ಸರಕಾರ ಸಿದ್ದ: ಉದ್ಧವ್ ಠಾಕ್ರೆ
Team Udayavani, Feb 11, 2020, 5:05 PM IST
ಮುಂಬಯಿ: ರಾಜ್ಯದ ಬಿಲ್ಡರ್ಸ್ ಮತ್ತು ಡೆವಲಪರ್ಸ್ ಸಮಸ್ಯೆಗಳನ್ನು ಪರಿಹರಿಸಲು ರಾಜ್ಯ ಸರಕಾರ ಸಿದ್ಧವಾಗಿದೆ. ಆದರೆ ಬಿಲ್ಡರ್ಸ್ ಕೂಡ ತಮಗಾಗಿ ರೂಪಿಸಲಾಗಿರುವ ಕಾನೂನುಗಳನ್ನುಯನ್ನು ಪಾಲಿಸಬೇಕಾಗಿದೆ ಎಂದು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿದ್ದಾರೆ.
ಸಹ್ಯಾದ್ರಿ ಅತಿಥಿಗೃಹದಲ್ಲಿ ಕ್ರೆಡಾಯಿ -ನರೆಡ್ಕೊ ಸಂಘಟನೆಯೊಂದಿಗೆ ಸಭೆ ಆಯೋಜಿಸಲಾಯಿತು. ಈ ವೇಳೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಮಾತನಾಡಿ, ರಾಜ್ಯದ ಬಿಲ್ಡರ್ಸ್ ಮತ್ತು ಡೆವಲಪರ್ಸ್ ಕರ ಸಮಸ್ಯೆಗಳನ್ನು ಪರಿಹರಿಸಲು ತ್ವರಿತ ಪ್ರತಿಕ್ರಿಯೆ ವಿಂಡೋವನ್ನು ಸ್ಥಾಪಿಸಲಾಗುವುದು ಮತ್ತು ಅದರ ಅಡಿಯಲ್ಲಿ ಸ್ಟೀರಿಂಗ್ ಸಮಿತಿಯನ್ನು ರಚಿಸಲಾಗುವುದು ಎಂದು ಹೇಳಿದರು.
ಈ ಸ್ಟೀರಿಂಗ್ ಸಮಿತಿಯಲ್ಲಿ ಗೃಹ ಸಚಿವ ಜಿತೇಂದ್ರ ಅವಾಡ್, ನಗರಾಭಿವೃದ್ಧಿ ಸಚಿವ ಏಕನಾಥ್ ಶಿಂಧೆ, ಸಾರಿಗೆ ಸಚಿವ ಅನಿಲ್ ಪರಬ್, ನೆರೆಡ್ಕೋ ಸಂಸ್ಥೆಯ ಅಧ್ಯಕ್ಷ ನಿರಂಜನ್ ಹಿರಾನಂದಾನಿ, ರಾಜನ್ ಬಾಂದಲೇಕರ್, ನಯನ್ ಶಾ, ಶಾಹಿದ್ ಬಲ್ವಾ, ಬೌಮನ್ ಇರಾನಿ, ಅಜಯ್ ಆಶರ್ , ವಿನೋದ್ ಗೋಯೆಂಕಾ, ಡೊಮಿನಿಕ್ ರೊಮೆಲ್ ಮತ್ತು ದಿಲೀಪ್ ಠಕ್ಕರ್ ಸೇರಿದ್ದಾರೆ.
ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮಾತನಾಡಿ, ವಸತಿ ವಲಯವು ಇಂದು ಅನೇಕ ತೊಂದರೆಗಳನ್ನು ಎದುರಿಸುತ್ತಿದೆ ಎಂದು ಹೇಳಿದರು. ಸರಕಾರ ಮತ್ತು ಅಭಿವರ್ಧಕರು ತಂಡವಾಗಿ ಕೆಲಸ ಮಾಡಿದರೆ ಮಾತ್ರ ನಾವು ಈ ಸಮಸ್ಯೆಗಳನ್ನು ನಿವಾರಿಸಬಹುದು. ರೋಟಿ, ಬಟ್ಟೆ ಮತ್ತು ಮನೆ ಒದಗಿಸುವುದು ಇದು ಸರಕಾರದ ಜವಾಬ್ದಾರಿಯಾಗಿದೆ.
ಹಾಗೆಯೇ ಕೊಳೆಗೇರಿ ನಿವಾಸಿಗಳಿಗೆ ತಮ್ಮ ಹಕ್ಕಿನ ಮನೆ ನೀಡಲು ಸರಕಾರ ಪ್ರಯತ್ನಿಸುತ್ತಿದೆ. ಕೊಳೆಗೇರಿ ಪುನರ್ವಸತಿ ಯೋಜನೆಯು ಯಾವ ಕಾರಣದಿಂದ ಮಂದಗತಿ ಕಂಡಿತು, ಇದನ್ನು ಹೇಗೆ ಬಗೆಹರಿಸಲಾಗುವುದು , ಆ ನಿಟ್ಟಿನಲ್ಲಿ ನೀತಿಯನ್ನು ಅಳವಡಿಸಬೇಕೆಂದು ಸಿಎಂ ಉದ್ಧವ್ ಠಾಕ್ರೆ ಹೇಳಿದ್ದಾರೆ.
ಈ ವೇಳೆ ನಗರ ಅಭಿವೃದ್ಧಿ ಸಚಿವ ಏಕನಾಥ್ ಶಿಂಧೆ ಮಾತನಾಡಿ, ಈ ವಸತಿ ಕ್ಷೇತ್ರದ ಸ್ಥಿತಿಯನ್ನು ಸುಧಾರಿಸಲು ಸರಕಾರ ಪ್ರಯತ್ನಿಸುತ್ತಿದೆ. ಹಾಗೆಯೇ ಅಭಿವರ್ಧಕರ ಬೇಡಿಕೆಗಳ ಬಗ್ಗೆ ಸರಕಾರ ಸಕಾರಾತ್ಮಕ ನಿರ್ಧಾರ ಕೈಗೊಳ್ಳಲಿದೆ. ಆದ್ದರಿಂದ ಅಭಿವರ್ಧಕರು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡರೆ ಸರಕಾರ ಅದಕ್ಕೆ ಅಧಿಕ ಗಮನ ಹರಿಸಲಿದೆ ಎಂದು ಹೇಳಿದ್ದಾರೆ.
ಈ ವೇಳೆ ವಸತಿ ಸಚಿವ ಜಿತೇಂದ್ರ ಅವಾಡ್ ಮಾತನಾಡಿ, ವಸತಿ ವಲಯದಲ್ಲಿ ಕೊಳೆಗೇರಿಗಳನ್ನು ತೆಗೆದುಹಾಕಲು ಕಳೆದ ತಿಂಗಳು ಹಲವಾರು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಹಾಗೆಯೇ ಕೊಳೆಗೇರಿ ಪುನರ್ವಸತಿಗಾಗಿ ಹಲವಾರು ಯೋಜನೆಗಳು ಈಗ ನಡೆಯುತ್ತಿವೆ.
ಬಡವರಿಗೆ ಕೈಗೆಟುಕುವ ವಸತಿ ಒದಗಿಸಲು ಸರಕಾರ ಬದ್ಧವಾಗಿದೆ. ನಾಲ್ಕನೇ ಶ್ರೇಣಿಯ ಸರಕಾರಿ ನೌಕರರಿಗೆ ಮತ್ತು ಪೊಲೀಸರಿಗೆ ಶೇ.10 ರಷ್ಟು ಮನೆಗಳನ್ನು ಕಾಯ್ದಿರಿಸಲು ಸರಕಾರ ನಿರ್ಧರಿಸಿದೆ. ವಸತಿ ಕ್ಷೇತ್ರದ ಆರ್ಥಿಕ ಸಮಸ್ಯೆಗಳನ್ನು ಪರಿಹರಿಸಲು ಬ್ಯಾಂಕ್‌ಗಳೊಂದಿಗೆ ಹಲವಾರು ಸಭೆಗಳನ್ನು ನಡೆಸಲಾಗಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP ಪೂರ್ವಾಂಚಲಿಗಳನ್ನು ರೋಹಿಂಗ್ಯಾಗಳೆಂದು ಮತಗಳನ್ನು ಅಳಿಸುತ್ತಿದೆ: ಕೇಜ್ರಿವಾಲ್ ಆರೋಪ
Gold & Cash: ಕಾಡಿನ ಬಳಿ ನಿಲ್ಲಿಸಿದ್ದ ಕಾರಿನಲ್ಲಿ 52 ಕೆ.ಜಿ ಚಿನ್ನ, 9 ಕೋಟಿ ನಗದು ಪತ್ತೆ
Aligarh; ಮುಸ್ಲಿಂ ಬಾಹುಳ್ಯದ ಪ್ರದೇಶದಲ್ಲಿ ಮತ್ತೊಂದು ಶಿವ ದೇವಾಲಯ ಪತ್ತೆ
NIA; ಪ್ರವೀಣ್ ನೆಟ್ಟಾರು ಹ*ತ್ಯೆ ಪ್ರಕರಣದ ಆರೋಪಿ ವಿಮಾನ ನಿಲ್ದಾಣದಲ್ಲೇ ಬಂಧನ
Parcel: ಮನೆಗೆ ಬಂದ ಪಾರ್ಸೆಲ್ ನಲ್ಲಿ ಇದ್ದದ್ದು ವ್ಯಕ್ತಿಯ ಮೃತದೇಹ… ಮಹಿಳೆಗೆ ಶಾಕ್ !
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
C.T. Ravi; ಅವಾಚ್ಯ ಶಬ್ದಗಳಿಂದ ನಿಂದಿಸಿದ ದಾಖಲೆ ಇಲ್ಲ: ಮಹತ್ವ ಪಡೆದ ಸಭಾಪತಿ ಹೇಳಿಕೆ
TuluMovie; ತೆರೆಗೆ ಬರಲು ಸಿದ್ದವಾಯ್ತು ಮಿಡಲ್ ಕ್ಲಾಸ್ ಫ್ಯಾಮಿಲಿ: ರಿಲೀಸ್ ದಿನಾಂಕ ಬಂತು
BJP ಪೂರ್ವಾಂಚಲಿಗಳನ್ನು ರೋಹಿಂಗ್ಯಾಗಳೆಂದು ಮತಗಳನ್ನು ಅಳಿಸುತ್ತಿದೆ: ಕೇಜ್ರಿವಾಲ್ ಆರೋಪ
Gold & Cash: ಕಾಡಿನ ಬಳಿ ನಿಲ್ಲಿಸಿದ್ದ ಕಾರಿನಲ್ಲಿ 52 ಕೆ.ಜಿ ಚಿನ್ನ, 9 ಕೋಟಿ ನಗದು ಪತ್ತೆ
Aligarh; ಮುಸ್ಲಿಂ ಬಾಹುಳ್ಯದ ಪ್ರದೇಶದಲ್ಲಿ ಮತ್ತೊಂದು ಶಿವ ದೇವಾಲಯ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.