ಪತ್ನಿಯರ ಮೂಲಕ ಎಂವಿಎ ಉಳಿಸಲು ಯತ್ನ: ರಂಗಕ್ಕೆ ಇಳಿದ ಉದ್ಧವ್ ಪತ್ನಿ ರಶ್ಮಿ ಠಾಕ್ರೆ
16 ಭಿನ್ನ ಶಾಸಕರಿಗೆ ಕೇಂದ್ರದ ಭದ್ರತೆ; ಶಿಂಧೆಗೆ ಇಲ್ಲ
Team Udayavani, Jun 27, 2022, 6:45 AM IST
ಮುಂಬಯಿ: ಮಹಾರಾಷ್ಟ್ರದಲ್ಲಿನ ಮಹಾ ವಿಕಾಸ ಅಘಾಡಿ ಸರಕಾರ ಉಳಿಸುವ ನಿಟ್ಟಿನಲ್ಲಿ ಸಿಎಂ ಉದ್ಧವ್ ಠಾಕ್ರೆಯವರ ಪತ್ನಿ ರಶ್ಮಿ ಠಾಕ್ರೆ ರಂಗಕ್ಕೆ ಇಳಿದಿದ್ದಾರೆ.
ಈ ಮೂಲಕ ಬಿಕ್ಕಟ್ಟನ್ನು ಎದುರಿಸುತ್ತಿರುವ ಪತಿಗೆ ನೆರವಾಗು ತ್ತಿದ್ದಾರೆ. ಅದು ಹೇಗೆ ಬಲ್ಲಿರಾ? ಸಚಿವ ಏಕನಾಥ ಶಿಂಧೆಯವರ ಜತೆಗೆ ತೆರಳಿರುವ ಶಾಸಕರ ಪತ್ನಿಯರನ್ನು ಸಂಪರ್ಕಿಸುವ ಯತ್ನವನ್ನು ಅವರು ಆರಂಭಿಸಿದ್ದಾರೆ.
ಉದ್ಧವ್ ಠಾಕ್ರೆ ಪರವೇ ನಿಲ್ಲುವಂತೆ ಪತ್ನಿಯರಿಗೆ ಫೋನ್ ಮಾಡಲಾರಂಭಿಸಿದ್ದಾರೆ. ಮುಖ್ಯಮಂತ್ರಿ ಪತ್ನಿ ಫೋನ್ ಮಾಡಿದ್ದಾರೆ ಎಂದ ಮೇಲೆ ಅದನ್ನು ನಿರಾಕರಿಸಲು ಸಾಧ್ಯವೇ?
ಹೀಗಾಗಿ, ಪತ್ನಿಯರು ಪತಿಯಂದಿರ ಮನವೊಲಿಕೆಗೆ ಮನಸ್ಸು ಮಾಡಬಹುದು ಎಂಬ ದೂರಾಲೋಚನೆ ರಶ್ಮಿ ಠಾಕ್ರೆ ಅವರದ್ದು. ಹೀಗಾಗಿ ಕೆಲವು ಶಾಸಕರ ಪತ್ನಿಯರು ದೂರದ ಗುವಾಹಾಟಿಯಲ್ಲಿರುವ ತಮ್ಮ ಪತಿಯಂದಿರಿಗೆ ಡಯಲ್ ಮಾಡಿದ್ದಾರಂತೆ!
ಶಿಂಧೆ ಹೆಸರು ಇಲ್ಲ: ಭಿನ್ನಮತೀಯ ಶಾಸಕರಿಗೆ ಮಹಾಸರಕಾರ ಭದ್ರತೆ ನೀಡಿಲ್ಲ ಎಂಬ ದೂರುಗಳ ನಡುವೆಯೇ ಕೇಂದ್ರವು ಶಿವಸೇನೆಯ 16 ಭಿನ್ನಮತೀಯ ಶಾಸಕರಿಗೆ “ವೈ’ ಮಾದರಿ ಭದ್ರತೆ ನೀಡಲು ಆದೇಶ ನೀಡಿದೆ. ಅದರ ಅನ್ವಯ ಮುಂದಿನ ದಿನಗಳಲ್ಲಿ ಸಿಆರ್‌ಪಿಎಫ್ ಯೋಧರು ಶಾಸಕರಿಗೆ ಭದ್ರತೆ ನೀಡಲಿದ್ದಾರೆ. ಆದರೆ ಈ ಪಟ್ಟಿಯಲ್ಲಿ ಸಚಿವ ಏಕನಾಥ ಶಿಂಧೆ ಹೆಸರು ಇಲ್ಲದಿರುವುದು ಅಚ್ಚರಿ ತಂದಿದೆ.
ಕೇಂದ್ರದ ನಿರ್ಧಾರವನ್ನು ಮಹಾ ಪ್ರವಾಸೋದ್ಯಮ ಸಚಿವ ಆದಿತ್ಯ ಠಾಕ್ರೆ ಆಕ್ಷೇಪಿಸಿ ದ್ದಾರೆ. “ಕಾಶ್ಮೀರ ಪಂಡಿತರಿಗೆ ಸಿಆರ್‌ಪಿಎಫ್ ಭದ್ರತೆ ನೀಡಬೇಕಾಗಿತ್ತು. ಭಿನ್ನಮತೀಯ ಶಾಸಕರಿಗೆ ಅಲ್ಲ’ ಎಂದಿದ್ದಾರೆ. ಅವರಿಗೆ ಪಕ್ಷದ ಬಾಗಿಲು ಮುಚ್ಚಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುಂದಿನ ಚುನಾವಣೆಯಲ್ಲಿ ಅವರು ಸೋಲುವಂತೆ ಮಾಡುತ್ತೇವೆ ಎಂದು ಸವಾಲು ಹಾಕಿದ್ದಾರೆ.
ಶಿಂಧೆಗೆ ಸಿಎಂ ಹುದ್ದೆ ಆಫರ್: ಭಿನ್ನಮತೀಯ ಶಾಸಕರು ಗುವಾಹಾಟಿಯಲ್ಲಿ ಬಂಧಿಗಳಾಗಿದ್ದಾರೆ ಎಂದು ಹೇಳಿರುವ ಸಚಿವ ಆದಿತ್ಯ ಠಾಕ್ರೆ ಹೊಸ ಮಾಹಿತಿ ಬಹಿರಂಗಪಡಿಸಿದ್ದಾರೆ. ಮೇ 30ರಂದು ನಡೆದಿದ್ದ ಸಭೆಯಲ್ಲಿ ಸಿಎಂ ಉದ್ಧವ್ ಠಾಕ್ರೆ ಅವರು ಏಕನಾಥ ಶಿಂಧೆಗೆ ಸಿಎಂ ಹುದ್ದೆಯನ್ನು ನೀಡುವ ಬಗ್ಗೆ ಭರವಸೆ ನೀಡಿದ್ದರು ಎಂದಿದ್ದಾರೆ. ಈ ಸಂಚಿನಲ್ಲಿ ಬಿಜೆಪಿ ಇಲ್ಲ ಎಂದಾದರೆ, ಗುವಾಹಾಟಿಯಲ್ಲಿ ಭಿನ್ನಮತೀಯರನ್ನು ಅವರೇಕೆ ಭೇಟಿಯಾಗುತ್ತಿದ್ದರು ಎಂದು ಪ್ರಶ್ನಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
NIA; ಪ್ರವೀಣ್ ನೆಟ್ಟಾರು ಹ*ತ್ಯೆ ಪ್ರಕರಣದ ಆರೋಪಿ ವಿಮಾನ ನಿಲ್ದಾಣದಲ್ಲೇ ಬಂಧನ
Parcel: ಮನೆಗೆ ಬಂದ ಪಾರ್ಸೆಲ್ ನಲ್ಲಿ ಇದ್ದದ್ದು ವ್ಯಕ್ತಿಯ ಮೃತದೇಹ… ಮಹಿಳೆಗೆ ಶಾಕ್ !
ಹಿಂದೂ ಮುಖಂಡರು ಮಂದಿರ-ಮಸೀದಿ ವಿವಾದ ಕೆದಕುವುದನ್ನು ನಿಲ್ಲಿಸಬೇಕು: ಮೋಹನ್ ಭಾಗ್ವತ್
Om Prakash Chautala: ಹರಿಯಾಣದ ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ್ ಚೌಟಾಲಾ ವಿಧಿವಶ
Video: ಮೊಟ್ಟೆ ಕದ್ದು ಸಿಕ್ಕಿಬಿದ್ದರೇ ಶಾಲೆಯ ಪ್ರಾಂಶುಪಾಲರು…? ಇಲಾಖೆಯಿಂದ ನೊಟೀಸ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
C.T. Ravi ಅವರನ್ನು ತತ್ ಕ್ಷಣ ಬಿಡುಗಡೆ ಮಾಡಿ: ಹೈಕೋರ್ಟ್ ಆದೇಶ
Davanagere: ಬಿಜೆಪಿ-ಕಾಂಗ್ರೆಸ್ ಹೊಂದಾಣಿಕೆ ಆರೋಪದ ಬಗ್ಗೆ ರೇಣುಕಾಚಾರ್ಯ ಸ್ಪಷ್ಟನೆ
Mandya: ಹಲವು ಪವಾಡಗಳ ಕ್ಷೇತ್ರ ಶ್ರೀಕಾಲಭೈರವೇಶ್ವರ; ಚಿಕ್ಕರಸಿಕೆರೆ ನಡೆದಾಡುವ ದೈವ
NIA; ಪ್ರವೀಣ್ ನೆಟ್ಟಾರು ಹ*ತ್ಯೆ ಪ್ರಕರಣದ ಆರೋಪಿ ವಿಮಾನ ನಿಲ್ದಾಣದಲ್ಲೇ ಬಂಧನ
Mandya: ಮನಸೂರೆಗೊಳ್ಳುವ ಶ್ರೀ ಆತ್ಮಲಿಂಗೇಶ್ವ ರ-ಧಾರ್ಮಿಕ ಚರ್ಚೆ, ಸಂವಾದ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.