ರಾಜ್ಯದ ಒಂದು ಸೇರಿ 20 ವಿವಿಗಳನ್ನು ‘ನಕಲಿ’ ಎಂದು ಘೋಷಿಸಿದ ಯುಜಿಸಿ
ಯಾವುದೇ ಪದವಿಯನ್ನು ನೀಡಲು ಅಧಿಕಾರವಿಲ್ಲ
Team Udayavani, Aug 2, 2023, 7:44 PM IST
ಹೊಸದಿಲ್ಲಿ: ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ (UGC) ಬುಧವಾರ ಕರ್ನಾಟಕದ ಒಂದು ಸಂಸ್ಥೆ ದೇಶದ 20 ವಿಶ್ವವಿದ್ಯಾನಿಲಯಗಳನ್ನು “ನಕಲಿ” ಎಂದು ಘೋಷಿಸಿದ್ದು, ಅವುಗಳು ಯಾವುದೇ ಪದವಿಯನ್ನು ನೀಡಲು ಅಧಿಕಾರವನ್ನು ಹೊಂದಿಲ್ಲ ಎಂದಿದೆ.
”ಯುಜಿಸಿ ಕಾಯಿದೆಯ ನಿಬಂಧನೆಗಳಿಗೆ ವಿರುದ್ಧವಾಗಿ ಹಲವಾರು ಸಂಸ್ಥೆಗಳು ಪದವಿಗಳನ್ನು ನೀಡುತ್ತಿರುವುದು ಯುಜಿಸಿ ಗಮನಕ್ಕೆ ಬಂದ ಹಿನ್ನಲೆಯಲ್ಲಿ ಕಠಿಣ ಕ್ರಮ ಕೈಗೊಂಡಿದೆ. ಅಂತಹ ವಿವಿಗಳು ನೀಡುವ ಉನ್ನತ ಶಿಕ್ಷಣ ಅಥವಾ ಉದ್ಯೋಗದ ಉದ್ದೇಶಕ್ಕಾಗಿ ನೀಡುವ ಪದವಿಗಳು ಮಾನ್ಯತೆ ಹೊಂದಿರುವುದಿಲ್ಲ. ಈ ವಿಶ್ವವಿದ್ಯಾನಿಲಯಗಳು ಯಾವುದೇ ಪದವಿಯನ್ನು ನೀಡಲು ಅಧಿಕಾರ ಹೊಂದಿಲ್ಲ ಎಂದು ಯುಜಿಸಿ ಕಾರ್ಯದರ್ಶಿ ಮನೀಶ್ ಜೋಶಿ ಹೇಳಿದ್ದಾರೆ.
ಕರ್ನಾಟಕದ ಬಡಗಾಂವಿ ಸರ್ಕಾರ್ ವರ್ಲ್ಡ್ ಓಪನ್ ಯೂನಿವರ್ಸಿಟಿ ಎಜುಕೇಶನ್ ಸೊಸೈಟಿ ಮಾನ್ಯತೆ ಹೊಂದಿರದ ನಕಲಿ ವಿವಿಯಾಗಿದೆ.
ನಕಲಿ ಸಂಸ್ಥೆಗಳ ಪಟ್ಟಿಯನ್ನು ಬಿಡುಗಡೆ ಮಾಡಿ, ದೆಹಲಿಯಲ್ಲೆ ಎಂಟು( All India Institute of Public and Physical Health Sciences; Commercial University Ltd, Daryaganj; United Nations University; Vocational University; ADR-Centric Juridical University; Indian Institution of Science and Engineering; Viswakarma Open University for Self-Employment; and Adhyatmik Vishwavidyalaya (Spiritual University) ನಕಲಿ ಎಂದು ವಿವರ ನೀಡಿದರು.
ಉತ್ತರ ಪ್ರದೇಶ ನಾಲ್ಕು ವಿವಿ – ಗಾಂಧಿ ಹಿಂದಿ ವಿದ್ಯಾಪೀಠ, ನ್ಯಾಷನಲ್ ಯೂನಿವರ್ಸಿಟಿ ಆಫ್ ಎಲೆಕ್ಟ್ರೋ ಕಾಂಪ್ಲೆಕ್ಸ್ ಹೋಮಿಯೋಪತಿ, ನೇತಾಜಿ ಸುಭಾಷ್ ಚಂದ್ರ ಬೋಸ್ ವಿವಿ (ಮುಕ್ತ ವಿಶ್ವವಿದ್ಯಾಲಯ) ಮತ್ತು ಭಾರತೀಯ ಶಿಕ್ಷಾ ಪರಿಷತ್.
ಆಂಧ್ರಪ್ರದೇಶ ಮತ್ತು ಪಶ್ಚಿಮ ಬಂಗಾಳದಲ್ಲಿ ತಲಾ ಎರಡು ವಿವಿಗಳಿದ್ದು, ಅವುಗಳೆಂದರೆ ಆಂಧ್ರ ಪ್ರದೇಶದ ಕ್ರೈಸ್ಟ್ ನ್ಯೂ ಟೆಸ್ಟಮೆಂಟ್ ಡೀಮ್ಡ್ ಯೂನಿವರ್ಸಿಟಿ ಮತ್ತು ಬೈಬಲ್ ಓಪನ್ ಯೂನಿವರ್ಸಿಟಿ ಆಫ್ ಇಂಡಿಯಾ, ಪಶ್ಚಿಮ ಬಂಗಾಳದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆಲ್ಟರ್ನೇಟಿವ್ ಮೆಡಿಸಿನ್ ಮತ್ತು ಇನ್‌ಸ್ಟಿಟ್ಯೂಟ್ ಆಫ್ ಆಲ್ಟರ್ನೇಟಿವ್ ಮೆಡಿಸಿನ್ ಅಂಡ್ ರಿಸರ್ಚ್ ನಕಲಿ ಆಗಿದೆ.
ಕೇರಳದ ಸೇಂಟ್ ಜಾನ್ಸ್ ವಿವ , ಮಹಾರಾಷ್ಟ್ರದ ರಾಜಾ ಅರೇಬಿಕ್ ವಿಶ್ವವಿದ್ಯಾಲಯ ಮತ್ತು ಶ್ರೀ ಬೋಧಿ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಪುದುಚೇರಿ) ಕೂಡ ಪಟ್ಟಿಯಲ್ಲಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Power cut shock:ಅದಾನಿ ಕಂಪೆನಿಗೆ ಬಾಂಗ್ಲಾ ಪಾವತಿ ಶುರು
WhatsApp ನಲ್ಲಿ ಧರ್ಮ ಆಧರಿತ ಗುಂಪು: ಕೇರಳ ಐಎಎಸ್ ಅಧಿಕಾರಿ ದೂರು
Elephants; ಮಧ್ಯಪ್ರದೇಶ ಬಳಿಕ ಒಡಿಶಾದಲ್ಲಿ 7 ತಿಂಗಳಿನಲ್ಲಿ 50 ಆನೆಗಳ ಸಾವು
ವಕ್ಫ್ ನೋಟಿಸ್‌ಗೆ ಬಿಜೆಪಿ ಆಕ್ರೋಶ; ರಾಜ್ಯಾದ್ಯಂತ ಮುಖಂಡರು, ಕಾರ್ಯಕರ್ತರ ಪ್ರತಿಭಟನೆ
Waqf Notice: ವಿಜಯಪುರದಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅಹೋರಾತ್ರಿ ಧರಣಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.