UGC; ಪದವಿ ಕಲಿಕೆ ಅವಧಿ ನಿರ್ಧಾರ ಆಯ್ಕೆ ಶೀಘ್ರ: ಚೇರ್ಮನ್ ಹೇಳಿದ್ದೇನು?
ವಿದ್ಯಾರ್ಥಿ ಸಾಮರ್ಥ್ಯಕ್ಕೆ ಅನುಸಾರ ಅವಧಿ ಆಯ್ಕೆಗೆ ಅವಕಾಶ
Team Udayavani, Nov 29, 2024, 6:45 AM IST
ಹೊಸದಿಲ್ಲಿ: ನಿರ್ದಿಷ್ಟ ಅವಧಿಯ ಪದವಿ ಕೋರ್ಸ್ ಕಲಿಕೆಯ ಬದಲು, ವಿದ್ಯಾರ್ಥಿ ಗಳಿಗೆ ಕಲಿಕಾ ಅವಧಿಯನ್ನು ವಿಸ್ತರಿಸುವ ಅಥವಾ ಕಿರಿದುಗೊಳಿಸುವ ಅವಕಾಶ ವನ್ನು ಉನ್ನತ ಶಿಕ್ಷಣ ಸಂಸ್ಥೆಗಳು ಶೀಘ್ರವೇ ಕಲ್ಪಿಸಲಿವೆ.
ಈ ಸಂಬಂಧಿ ಮಾರ್ಗಸೂಚಿ ಗಳಿಗೆ ವಿ.ವಿ. ಧನಸಹಾಯ ಆಯೋಗ (ಯುಜಿಸಿ) ಒಪ್ಪಿಗೆ ನೀಡಿದೆ. ಕಿರಿದು ಪದವಿ ಕಾರ್ಯಕ್ರಮ (ಎಡಿಪಿ) ಮತ್ತು ವಿಸ್ತರಿತ ಪದವಿ ಕಾರ್ಯಕ್ರಮ (ಇಡಿಪಿ)ಗೆ ಸಂಬಂಧಿಸಿದ ಕರಡು ನಿಯಮಗಳನ್ನು ಜನರ ಪರಿಶೀಲನೆಗೆ ಬಿಡಲಾಗಿದೆ.
ಪ್ರಸ್ತುತ ಹಲವು ಪ್ರಮುಖ ವಿದೇಶಿ ವಿ.ವಿ.ಗಳು ಇದೇ ಮಾದರಿಯಲ್ಲಿ ಪದವಿಗಳನ್ನು ನೀಡುತ್ತಿವೆ.
ಏಕೆ ಈ ಯೋಜನೆ?
ಅತ್ಯುತ್ತಮ ಶೈಕ್ಷಣಿಕ ಫಲಿತಾಂಶಗಳನ್ನು ಹೊಂದಿರುವ ಅಥವಾ ಹೆಚ್ಚುವರಿ ಕ್ರೆಡಿಟ್ (ವಿದ್ಯಾರ್ಥಿಯ ಶೈಕ್ಷಣಿಕ ಪ್ರದರ್ಶನದ ಅನುಸಾರ ಪ್ರತೀ ಸೆಮಿಸ್ಟರ್ ಅಂಕಗಳನ್ನು ನೀಡಲಾಗುತ್ತದೆ)ಗಳನ್ನು ಹೊಂದಿರುವ ವಿದ್ಯಾರ್ಥಿಗಳು ನಿರ್ದಿಷ್ಟ ಪದವಿ ಅವಧಿಗಿಂತಲೂ ಮುಂಚೆಯೇ ಕಿರಿದು ಪದವಿ ಕಾರ್ಯಕ್ರಮ (ಎಡಿಪಿ) ದಡಿ ಪದವಿಯನ್ನು ಪಡೆದುಕೊಳ್ಳಬಹುದು. ಅದೇ ರೀತಿ ವೈಯಕ್ತಿಕ ಮತ್ತು ಆರ್ಥಿಕ ತೊಂದರೆ ಅಥವಾ ಶೈಕ್ಷಣಿಕವಾಗಿ ಸವಾಲುಗಳನ್ನು ಎದುರಿಸುತ್ತಿರುವವರು ಹೆಚ್ಚುವರಿ ಸಮಯವನ್ನು ಪಡೆದುಕೊಂಡು ವಿಸ್ತರಿತ ಪದವಿ ಕಾರ್ಯಕ್ರಮ (ಇಡಿಪಿ) ದಡಿ ಪದವಿಯನ್ನು ಪೂರ್ಣಗೊಳಿಸಬಹುದು. ಒಂದು ಅಥವಾ 2ನೇ ಸಮಿಸ್ಟರ್ ಪೂರ್ಣ ಗೊಳಿಸಿದ ಬಳಿಕವಷ್ಟೇ ಇಡಿಪಿ ಅಥವಾ ಎಡಿಪಿಯನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶವಿರುತ್ತದೆ. ಆಯ್ಕೆ ಮಾಡಿಕೊಳ್ಳುವವರ ಸಾಮರ್ಥ್ಯ ಮೌಲ್ಯಮಾಪನಕ್ಕೆ ಉನ್ನತ ಶಿಕ್ಷಣ ಸಂಸ್ಥೆಗಳು ಸಮಿತಿಯನ್ನು ರಚಿಸಬೇಕಾಗುತ್ತದೆ ಎಂದು ಯುಜಿಸಿ ಹೇಳಿದೆ.
ಎಡಿಪಿ ಅಥವಾ ಇಡಿಪಿಯಡಿ ಪಡೆದ ಪದವಿಯನ್ನು ಸಾಮಾನ್ಯ ಅವಧಿಯ ಪದವಿಗಳಿಗೆ ಸಮಾನವಾಗಿಯೇ ಪರಿಗಣಿಸಲಾಗುತ್ತದೆ. ವಿದ್ಯಾರ್ಥಿಯ ಅಗತ್ಯಗಳಿಗಾಗಿ ಕಿರಿದು ಅಥವಾ ವಿಸ್ತರಿತ ಅವಧಿಯಲ್ಲಿ ಪದವಿಯನ್ನು ಪೂರ್ಣಗೊಳಿಸಲಾಗಿದೆ ಎಂಬ ಟಿಪ್ಪಣಿ ಯನ್ನು ಪದವಿ ಪ್ರಮಾಣ ಪತ್ರಗಳು ಹೊಂದಿರಲಿವೆ.
ಈ ಕಾರ್ಯಕ್ರಮಗಳಿಂದ ಅಂತರ್‌ಶಿಸ್ತೀಯ ಮತ್ತು ವೃತ್ತಿಪರ ಕೋರ್ಸ್‌ಗಳು ಪಡೆಯುವ ಅಥವಾ ಇತರ ಜವಾಬ್ದಾರಿಗಳೊಂದಿಗೆ ಶಿಕ್ಷಣ ಪಡೆ ಯುತ್ತಿರುವ ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರಯೋಜನ ದೊರೆಯಲಿದೆ.
ಯುಜಿಸಿ ಚೇರ್ಮನ್ ಹೇಳಿದ್ದೇನು?
“ತಮ್ಮ ಕಲಿಕಾ ಸಾಮರ್ಥ್ಯಗಳಿಗೆ ಅನುಸಾರವಾಗಿ ವಿದ್ಯಾರ್ಥಿಗಳು ಅಧ್ಯಯನ ಅವಧಿಯನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಎಡಿಪಿ ಯಡಿ ವಿದ್ಯಾರ್ಥಿಗಳು ಪ್ರತೀ ಸೆಮಿಸ್ಟರ್‌ಗೆ ಹೆಚ್ಚುವರಿ ಕ್ರೆಡಿಟ್‌ಗಳೊಂದಿಗೆ ಕಿರಿದುಗೊಳಿಸಲಾದ ಅವಧಿಯಲ್ಲಿ ಪದವಿಯನ್ನು ಪೂರ್ಣಗೊಳಿಸಬಹುದು ಅಥವಾ ಪ್ರತೀ ಸೆಮಿಸ್ಟರ್‌ಗೆ ಕಡಿಮೆ ಕ್ರೆಡಿಟ್ ಗಳೊಂದಿಗೆ ಇಡಿಪಿಯಡಿ ಪದವಿ ಯನ್ನು ಪಡೆಯಬಹುದು’ ಎಂದು ಯುಜಿಸಿ ಚೇರ್ಮನ್ ಜಗದೀಶ್ ಕುಮಾರ್ ಹೇಳಿದ್ದಾರೆ. ಸಾಮಾನ್ಯ ಪದವಿ ಪಡೆಯುವಾಗ ಪಡೆಯುವಷ್ಟೇ ಕ್ರೆಡಿಟ್‌ಗಳನ್ನು ಎಡಿಪಿ ಮತ್ತು ಇಡಿಪಿ ಆಯ್ಕೆ ಮಾಡಿಕೊಳ್ಳುವ ವಿದ್ಯಾರ್ಥಿಗಳು ಪಡೆಯಲಿದ್ದಾರೆ. ಈ ಕುರಿತು ಮೌಲ್ಯಮೌಪನ ಮಾಡಲು ಉನ್ನತ ಶಿಕ್ಷಣ ಸಂಸ್ಥೆಗಳು ಸಮಿತಿಯನ್ನು ರಚಿಸುತ್ತವೆ. ಹಾಗಾಗಿ ಈ ಪದವಿಗಳು ಸಾಮಾನ್ಯ ಅವಧಿಯ ಪದವಿಗಳಿಗೆ ಸಮಾನವಾಗಿರುತ್ತವೆ ಎಂದು ಅವರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vavar Mosque: ಶಬರಿಮಲೆ ಯಾತ್ರಿಗಳು ವಾವರ ಮಸೀದಿಗೆ ಹೋಗಬಾರದು: ಬಿಜೆಪಿ ಶಾಸಕ
Viral: ಇನ್ಸ್ಟಾಗ್ರಾಮ್‌ನಲ್ಲಿ ಪರಿಚಯವಾದ 16ರ ಬಾಲಕನ ಜತೆ ಮನೆ ಬಿಟ್ಟು ಓಡಿದ 10ರ ಬಾಲಕಿ!
Pune: ಪಿಜ್ಜಾ ಆರ್ಡರ್ ಮಾಡುವ ಮುನ್ನ ಎಚ್ಚರ.. ಪಿಜ್ಜಾದಲ್ಲಿತ್ತು ಚಾಕುವಿನ ತುಂಡು
Kerala: ದೇಗುಲ ಸಂಪ್ರದಾಯ ಬದಲು ಹಕ್ಕು ತಂತ್ರಿಗಳದ್ದು, ಸರ್ಕಾರದಲ್ಲ: ಕೇರಳ ಸಚಿವ
Abujhmad: ಗುಂಡಿನ ಕಾಳಗದಲ್ಲಿ ನಾಲ್ವರು ನಕ್ಸಲೀಯರ ಹತ್ಯೆ; ಓರ್ವ ಪೊಲೀಸ್ ಹುತಾತ್ಮ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Manipal ಪಾಯ್ಸನ್ ಇನ್‌ಫಾರ್ಮೇಶನ್ ಸೆಂಟರ್; ಸಮುದಾಯಕ್ಕೊಂದು ಉಪಕಾರಿ ಸೇವೆ
UV Fusion: ಆತ್ಮಹತ್ಯೆಗೂ ಆಯಸ್ಸು ಮುಗಿದಿರಬೇಕು
Vavar Mosque: ಶಬರಿಮಲೆ ಯಾತ್ರಿಗಳು ವಾವರ ಮಸೀದಿಗೆ ಹೋಗಬಾರದು: ಬಿಜೆಪಿ ಶಾಸಕ
Sydney: ಆಸ್ಟ್ರೇಲಿಯಾ ಪ್ರೇಕ್ಷಕರಿಗೆ ಸ್ಯಾಂಡ್‌ಪೇಪರ್ ಕೇಸ್ ನೆನಪು ಮಾಡಿದ ವಿರಾಟ್|Video
Viral: ಇನ್ಸ್ಟಾಗ್ರಾಮ್‌ನಲ್ಲಿ ಪರಿಚಯವಾದ 16ರ ಬಾಲಕನ ಜತೆ ಮನೆ ಬಿಟ್ಟು ಓಡಿದ 10ರ ಬಾಲಕಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.