ಕಾಲೇಜು, ವಿ.ವಿ. ತೆರೆಯಲು ಯುಜಿಸಿ ಮಾರ್ಗಸೂಚಿ
Team Udayavani, Nov 6, 2020, 12:45 AM IST
ಹೊಸದಿಲ್ಲಿ: ದೇಶಾದ್ಯಂತ ಕಾಲೇಜು, ವಿಶ್ವವಿದ್ಯಾನಿಲಯಗಳನ್ನು ತೆರೆಯುವ ಸಂಬಂಧ ವಿ.ವಿ.ಗಳ ಧನಸಹಾಯ ಆಯೋಗ (ಯುಜಿಸಿ) ಮಾರ್ಗಸೂಚಿ ಬಿಡುಗಡೆ ಮಾಡಿದೆ.
ಕೇಂದ್ರೀಯ ವಿ.ವಿ.ಗಳು, ಕೇಂದ್ರ ಅನುದಾನಿತ ಉನ್ನತ ಶಿಕ್ಷಣ ಸಂಸ್ಥೆ ಗಳು, ಕಾಲೇಜುಗಳನ್ನು ತೆರೆಯುವ ಹೊಣೆಯನ್ನು ಉಪ ಕುಲಪತಿ ಮತ್ತು ಮುಖ್ಯಸ್ಥರ ವಿವೇಚನೆಗೆ ವಹಿಸಲಾಗಿದೆ. ರಾಜ್ಯ ವಿ.ವಿ.ಗಳು, ಕಾಲೇಜುಗಳು ಆಯಾ ರಾಜ್ಯ ಸರಕಾರಗಳ ಅನುಮತಿ ಸಿಕ್ಕ ಬಳಿಕವಷ್ಟೇ ಈ ಮಾರ್ಗಸೂಚಿ ಆಧರಿಸಿ ಶೈಕ್ಷಣಿಕ ವರ್ಷ ಆರಂಭಿಸಬಹುದು ಎಂದು ಯುಜಿಸಿ ಹೇಳಿದೆ.
ಕಂಟೈನ್‌ಮೆಂಟ್ ಝೋನ್‌ಗಳ ಹೊರ ಗಿನ ವಿದ್ಯಾರ್ಥಿ ಮತ್ತು ಸಿಬಂದಿಗೆ ಮಾತ್ರವೇ ಪ್ರವೇಶ ಕಲ್ಪಿಸಬೇಕು. ಕಂಟೈನ್‌ಮೆಂಟ್ ಝೋನ್ ನಲ್ಲಿರು ವರು ನೇರ ತರಗತಿಗೆ ಹಾಜ ರಾಗುವಂತಿಲ್ಲ. ಉಪನ್ಯಾಸಕರು, ವಿದ್ಯಾರ್ಥಿಗಳು, ಸಿಬಂದಿ ಆರೋಗ್ಯ ಸೇತು ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಬೇಕು. ಸಾಮಾಜಿಕ ಅಂತರ, ಮಾಸ್ಕ್ಧಾರಣೆ ಕಡ್ಡಾಯ. ಅನಿವಾರ್ಯವಿರುವ ಪ್ರದೇಶ ಗಳಲ್ಲಿ ಮಾತ್ರವೇ ಕಡ್ಡಾಯ ಆರೋಗ್ಯ ಸುರಕ್ಷಾ ಕ್ರಮ ಅನುಸರಿಸಿ ಹಾಸ್ಟೆಲ್ ತೆರೆಯಬಹುದು. ಸೋಂಕಿನ ಲಕ್ಷಣವಿರುವ ವಿದ್ಯಾರ್ಥಿಗಳಿಗೆ ಹಾಸ್ಟೆಲ್‌ನಲ್ಲಿರಲು ಅನುಮತಿ ನೀಡಬಾರದು ಎಂದೂ ಸೂಚಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ
NCB ನಿರಂತರ ಕಾರ್ಯಾಚರಣೆ: ಡ್ರಗ್ಸ್ ಜಾಲ ಮುರಿಯಲು ಆಪರೇಷನ್ ಸಾಗರ ಮಂಥನ
J. P. Nadda: ನುಸುಳುಕೋರರಿಗೆ ಮದ್ರಸಾದಲ್ಲಿ ಆಶ್ರಯ ಕೊಟ್ಟ ಜೆಎಂಎಂ
Delhi: ಮಿತಿ ಮೀರಿದ ಮಾಲಿನ್ಯ: ಟ್ರಕ್‌ಗಳ ಪ್ರವೇಶಕ್ಕೆ ನಿರ್ಬಂಧ
Maharashtra: ಕಾಂಗ್ರೆಸ್ ಸರಕಾರ ಬಂದರೆ ಮುಸ್ಲಿಂ ಮೀಸಲು: ರೇವಂತ್ ರೆಡ್ಡಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.